Citroen C3 EV: ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಕೈಗೆಟುಕುವ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಫ್ರೆಂಚ್ ವಾಹನ ತಯಾರಕ ಸಿಟ್ರೊಯೆನ್ ತನ್ನ ಸಿಟ್ರೊಯೆನ್ ಸಿ3 ವಾಹನವನ್ನು ಎಲೆಕ್ಟ್ರಿಕ್ ಅವತಾರ್‌ನಲ್ಲಿ ಇಂದು ಬಿಡುಗಡೆ ಮಾಡಲಿದೆ. ಇದು ಟಾಟಾ ಟಿಯಾಗೊ ಇವಿಯೊಂದಿಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ, ನಿನ್ನೆಯಷ್ಟೇ ಟಾಟಾ ಮೋಟಾರ್ಸ್ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರ್ ಟಿಯಾಗೊ ಇವಿ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 8.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದೀಗ ಸಿಟ್ರೊಯೆನ್ ಸಿ3 ಇವಿ ಕೂಡ ಗ್ರಾಹಕರಲ್ಲಿ ಕ್ರೇಜ್ ಹೆಚ್ಚಿಸಿದೆ.
ಸಿಟ್ರೊಯೆನ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಬಿಡುಗಡೆಗೂ ಮುನ್ನ ಈ ವಾಹನದ ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟ್ ಮೂಲಕ ಕಂಪನಿಯು ವಾಹನದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.
ಇದನ್ನೂ ಓದಿ- Tata Tiago EV: ಫುಲ್ ಚಾರ್ಜ್‌ನಲ್ಲಿ 315 ಕಿಮೀ ಚಲಿಸಬಲ್ಲ ಎಲೆಕ್ಟ್ರಿಕ್ ಟಿಯಾಗೊ ಕಾರ್ ಬಿಡುಗಡೆ
ಆದಾಗ್ಯೂ, ಬಹಿರಂಗಗೊಂಡಿರುವ ಮಾಹಿತಿಗಳ ಪ್ರಕಾರ, ಸಿಟ್ರೊಯೆನ್ ಕಂಪನಿಯ ಎಲೆಕ್ಟ್ರಿಕ್ ಆವೃತ್ತಿಯು ಪೆಟ್ರೋಲ್ ಆವೃತ್ತಿಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ ಎಂದು ನಂಬಲಾಗಿದೆ. ಆದಾಗ್ಯೂ, ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದ ಬಲ ಫೆಂಡರ್ನಲ್ಲಿ ಇರಿಸಬಹುದು ಎಂದು ಹೇಳಲಾಗುತ್ತಿದೆ.
ಸಿಟ್ರೊಯೆನ್ ಸಿ3 ಇವಿ ವಿಶೇಷಣಗಳು:
ಸಿಟ್ರೊಯೆನ್ ಸಿ3 ಇವಿಗೆ ಒಂದೇ ಎಲೆಕ್ಟ್ರಿಕ್ ಮೋಟಾರು ನೀಡುವ ನಿರೀಕ್ಷೆಯಿದೆ, ಇದು ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು Apple CarPlay ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎತ್ತರ-ಹೊಂದಾಣಿಕೆ ಚಾಲಕ ಸೀಟ್, ನಾಲ್ಕು ಸ್ಪೀಕರ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ನಿಯಂತ್ರಣಗಳಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ- Affordable Electric Scooters: ಆಕ್ಟಿವಾಕ್ಕಿಂತ ಅಗ್ಗ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಪೆಟ್ರೋಲ್ ಎಂಜಿನ್ ಹೊಂದಿರುವ ಸಿಟ್ರೊಯೆನ್ ಸಿ3ಯ ಎಕ್ಸ್ ಶೋ ರೂಂ ಬೆಲೆ ರೂ. 5.71 ಲಕ್ಷದಿಂದ 8.06 ಲಕ್ಷ ರೂ. ಗಳು. ಆದಾಗ್ಯೂ, ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯ ಬೆಲೆ ಸುಮಾರು 10 ಲಕ್ಷ ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.