IND vs AUS 2nd T20I: ಆಸ್ಟ್ರೇಲಿಯಾ ಬಗ್ಗುಬಡಿದ ಭಾರತ: ಆಸೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ

ಎರಡನೇ ಟಿ20 ಪಂದ್ಯವು ಟೀಂ ಇಂಡಿಯಾದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯದಂತಿತ್ತು. ಮೂರು ಪಂದ್ಯಗಳ ಈ ಸಿರೀಸ್ನಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಅದಾಗಲೇ ಗೆದ್ದಿದ್ದು, 1-0 ಅಂತರ ಕಾಯ್ದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿದ್ದು, ಭರ್ಜರಿ ಆಟ ಪ್ರದರ್ಶನ ಮಾಡಿದೆ.    

Written by - Bhavishya Shetty | Last Updated : Sep 23, 2022, 11:02 PM IST
    • ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ T20I ನಲ್ಲಿ ಪಂದ್ಯ
    • ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ
    • ಮಳೆರಾಯನ ವಕ್ರದೃಷ್ಟಿಯಿಂದ ಎಂಟು ಓವರ್ಗಳಿಗೆ ಸೀಮಿತವಾದ ಪಂದ್ಯ
IND vs AUS 2nd T20I: ಆಸ್ಟ್ರೇಲಿಯಾ ಬಗ್ಗುಬಡಿದ ಭಾರತ: ಆಸೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ title=
Cricket

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ T20I ಪಂದ್ಯ ಮುಕ್ತಾಯಗೊಂಡಿದ್ದು, ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇಂದು ಸಂಜೆ 7 ಗಂಟೆಗೆ ಪ್ರಾರಂಭವಾಗಬೇಕಿದ್ದ ಎರಡನೇ T20I ಪಂದ್ಯ ಮಳೆಯ ಕಾರಣದಿಂದ ತಡವಾಗಿ ಪ್ರಾರಂಭವಾಗಿತ್ತು. ಬಳಿಕ ಕೇವಲ 8 ಓವರ್ ಗಳಿಗೆ ಸೀಮಿತಗೊಳಿಸಲಾಗಿದ್ದ ಈ ಪಂದ್ಯ 9.30ಕ್ಕೆ ಪ್ರಾರಂಭವಾಗಿತ್ತು.

ಎರಡನೇ ಟಿ20 ಪಂದ್ಯವು ಟೀಂ ಇಂಡಿಯಾದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯದಂತಿತ್ತು. ಮೂರು ಪಂದ್ಯಗಳ ಈ ಸಿರೀಸ್ನಲ್ಲಿ ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಅದಾಗಲೇ ಗೆದ್ದಿದ್ದು, 1-0 ಅಂತರ ಕಾಯ್ದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿದ್ದು, ಭರ್ಜರಿ ಆಟ ಪ್ರದರ್ಶನ ಮಾಡಿದೆ.    

ಇದನ್ನೂ ಓದಿ: Legends League 2022: ಭಿಲ್ವಾರ ಕಿಂಗ್ಸ್- ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಗೆಲುವು ಈ ತಂಡಕ್ಕೆ ಪಕ್ಕಾ!

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಬಾರಿಸಿತ್ತು. ಈ ಬಳಿಕ ಮೈದಾನಕ್ಕಿಳಿದ ಟೀಂ ಇಂಡಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 92 ರನ್ ಬಾರಿಸಿ ಆರು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. 

ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಮಳೆಗೆ ಆಹುತಿಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದವು. ಆದರೆ 9.30 ರ ವೇಳೆಗೆ ಪಂದ್ಯ ಪ್ರಾರಂಭವಾಗಿದೆ. ಕಳೆದ ಕೆಲ ದಿನಗಳಿಂದ ನಾಗ್ಪುರದಲ್ಲಿ ಭಾರೀ ಮಳೆಯಾಗುತ್ತಿದೆ. ಇಂದೂ ಸಹ ಇದರ ಪರಿಣಾಮ ಪಂದ್ಯದ ಮೇಲೆ ಬಿದ್ದಿದ್ದು, ತಡವಾಗಿ ಆಟ ಶುರುವಾಗಿದೆ.

ಇನ್ನು ಪಂದ್ಯದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ “ಮೊದಲನೇ ಇನಿಂಗ್ಸ್: 9:30 -10:04 PM, ಮಧ್ಯಂತರ ಬ್ರೇಕ್: 10:04 - 10:14 PM, ಎರಡನೇ ಇನಿಂಗ್ಸ್: 10:14-10:48 PM, ಪವರ್‌ಪ್ಲೇ 2 ಓವರ್‌ಗಳು, ಪ್ರತಿ ಬೌಲರ್‌ಗೆ ಗರಿಷ್ಠ 2 ಓವರ್‌ಗಳು, ಸ್ಲೋ-ಓವರ್ ರೇಟ್‌ಗೆ ಆಟದ ಪೆನಾಲ್ಟಿ ಇಲ್ಲ, ಯಾವುದೇ ಪಾನೀಯಗಳ ವಿರಾಮವಿಲ್ಲ” ಎಂದು ಟ್ವೀಟ್ ಮಾಡುವ ಮೂಲಕ ಖಚಿತತೆ ನೀಡಿತ್ತು.

ಸದ್ಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಆಸೆಯನ್ನು ಜೀವಂತವಾಗಿರಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Pro Kabaddi League 9 : ರಾಕೇಶ್ ಗೌಡನನ್ನು ಭರ್ಜರಿಯಾಗಿ ಸ್ವಾಗತಿಸಿದ ಬೆಂಗಳೂರು ಬುಲ್ಸ್ ಟೀಂ!

ಇನ್ನು ಆಸೀಸ್ ತಂಡದಲ್ಲಿ ಆರನ್ ಫಿಂಚ್, ಸ್ಟೀವನ್ ಸ್ಮಿತ್, ಟಿಮ್ ಡೇವಿಡ್, ಕ್ಯಾಮರನ್ ಗ್ರೀನ್, ಡೇನಿಯಲ್ ಸ್ಯಾಮ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಥ್ಯೂ ವೇಡ್, ಆಡಂ ಜಂಪಾ, ಜೋಶ್ ಹೇಜಲ್ ವುಡ್, ಪಾಡ್ ಕುಮಿನ್ಸ್, ಸೀನ್ ಆಬೊಟ್ ಇದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News