ಲಂಡನ್: ಇಂಗ್ಲೆಂಡ್ನ ಹಲವೆಡೆ ಹಿಂದೂ-ಮುಸ್ಲಿಂ ಸಂಘರ್ಷ ತೀವ್ರಗೊಂಡಿದೆ. ಲೀಸೆಸ್ಟರ್ನಲ್ಲಿ ಆರಂಭಗೊಂಡಿದ್ದ ಗದ್ದಲ-ಗಲಾಟೆ ಇದೀಗ ಸ್ಮೆಥ್ವಿಕ್ ಪಟ್ಟಣಕ್ಕೂ ವ್ಯಾಪಿಸಿದೆ. ವೆಸ್ಟ್ ಮಿಡ್ಲ್ಯಾಂಡ್ಸ್ನ ಸ್ಮೆಥ್ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಜಮಾಯಿಸಿದ ಮುಸ್ಲಿಂ ಸಮುದಾಯವೆಂದು ಹೇಳಲಾದ ಸುಮಾರು 200ಕ್ಕೂ ಹಚ್ಚು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ ಸ್ಪಾನ್ ಲೇನ್ನಲ್ಲಿರುವ ದುರ್ಗಾ ಭವನ್ ಹಿಂದೂ ಕೇಂದ್ರದ ಕಡೆಗೆ ಹೆಚ್ಚಿನ ಸಂಖ್ಯೆಯ ಜನರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಅನೇಕರು ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂದಿದೆ.
ಪ್ರತಿಭಟನೆ ವೇಳೆಯೇ ಕೆಲವು ಪ್ರತಿಭಟನಾಕಾರರು ಗೋಡೆಗಳನ್ನು ಹತ್ತುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಈ ವೇಳೆ ಕಾನೂನು ಜಾರಿ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ವರದಿಯ ಪ್ರಕಾರ ದುರ್ಗಾ ಭವನ್ ದೇವಸ್ಥಾನದ ಮುಂಭಾಗ ‘ಶಾಂತಿಯುತ ಪ್ರತಿಭಟನೆ’ ನಡೆಸಲು ಅಪ್ನಾ ಮುಸ್ಲಿಮ್ಸ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯು ಕರೆ ನೀಡಿತ್ತು ಅಂತಾ ತಿಳಿದುಬಂದಿದೆ.
ಇದನ್ನೂ ಓದಿ: Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ
ಭಾರತ-ಪಾಕ್ ಏಷ್ಯಾಕಪ್ ಪಂದ್ಯದ ಬಳಿಕ ಹಿಂಸಾತ್ಮಕ ಘರ್ಷಣೆ
ಭಾರತ ಮತ್ತು ಪಾಕಿಸ್ತಾನ ತಂಡಗಳ ಏಷ್ಯಾಕಪ್ ಪಂದ್ಯದ ಬಳಿಕ ಇಂಗ್ಲೆಂಡ್ನ ಲೀಸೆಸ್ಟರ್ ನಗರದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ನಗರದಲ್ಲಿನ ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡಿದ್ದ ಮುಸ್ಲಿಂ ಪ್ರತಿಭಟನಾಕಾರರು ಕೇಸರಿ ಬಾವುಟವನ್ನು ಕಿತ್ತು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.
Some are even climbing the walls in plain sight of law enforcement: pic.twitter.com/AXW7SfWGEs
— Wasiq Wasiq (@WasiqUK) September 20, 2022
ಆಗಸ್ಟ್ 28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಳಿಕ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ದೇವಾಲಯದ ಮೇಲೆ ಅಂದು ದಾಳಿ ನಡೆಸಲಾಗಿತ್ತು. ಇದು ‘ಗಂಭೀರ ಕಾನೂನು ಭಂಗ’ ಮತ್ತು ‘ಆಕ್ರಮಣಕಾರಿತನ’ವೆಂದು ಪೊಲೀಸರು ಹೇಳಿದ್ದರು. ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಖಂಡಿಸಿರುವ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ತೊಂದರೆಗೊಳಗಾದ ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿತ್ತು. ಲೀಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: NRI News: ಯುಎಇಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಹಾಗಾದ್ರೆ ಇಲ್ಲಿವೆ ವಿಫುಲ ಅವಕಾಶ
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಮಂಗಳವಾರ ಬೆಳಗ್ಗೆ ಲೀಸೆಸ್ಟರ್ನ ಮಸೀದಿಯ ಮೆಟ್ಟಿಲುಗಳ ಮೇಲೆ ಜಮಾಯಿಸಿ ಶಾಂತಿ ಮತ್ತು ಸೌಹಾರ್ದತೆಗೆ ಒತ್ತಾಯಿಸಿ ಜಂಟಿ ಹೇಳಿಕೆ ನೀಡಿದ್ದಾರೆ. ‘ಪ್ರಚೋದನೆ ಮತ್ತು ಹಿಂಸಾಚಾರ’ವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.