Sharad Pawar: ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರ ಭಾರತದ ಮನಸ್ಥಿತಿಯನ್ನು ಪ್ರಶ್ನಿಸಿದ ಪವಾರ್

Women Reservation: ಲೋಕಸಭೆ ಮತ್ತು ಎಲ್ಲಾ ರಾಝಾಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷು ಮೀಸಲಿಡುವ ಗುರಿನನ್ನು ಹೊಂದಿರುವ ಮಹಿಳಾ ಮೀಸಲಾತಿ ಕುರಿತು ಕೇಳಲಾದ ಪ್ರಶ್ನೆಗೆ ಶರದ್ ಪವಾರ್ ಉತ್ತರಿಸುತ್ತಿದ್ದರು.  

Written by - Nitin Tabib | Last Updated : Sep 18, 2022, 01:28 PM IST
  • ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಪರಿಷತ್, ಪಂಚಾಯಿತಿ ಸಮಿತಿಳಂತಹ ಸ್ಥಳೀಯ ಸಂಸ್ಥೆಗಳಲ್ಲಿ
  • ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದೆ ಎಂದು ಹೇಳಿರುವ ಪವಾರ್,
  • ಮೊದಲು ವಿರೋಧ ವ್ಯಕ್ತವಾದರೂ ಕೂಡ ನಂತರ ಎಲ್ಲರೂ ಅದನ್ನು ಒಪ್ಪಿಕೊಂಡರು ಎಂದಿದ್ದಾರೆ
Sharad Pawar: ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರ ಭಾರತದ ಮನಸ್ಥಿತಿಯನ್ನು ಪ್ರಶ್ನಿಸಿದ ಪವಾರ್ title=
Women Reservation

Women Reservation: ಉತ್ತರ ಭಾರತೀಯರಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಕೀಯ ಮುಖಂಡರು ಆಗಾಗ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದೀಗ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಉತ್ತರ ಭಾರತ ಮತ್ತು ಸಂಸತ್ತಿನ ಮನಸ್ಥಿತಿ ಇನ್ನೂ ಪೂರಕವಾಗಿಲ್ಲ ಎಂದು ಅವರು ಹೇಳಿದ್ದಾರೆ. ಪುಣೆಯಲ್ಲಿ ಶನಿವಾರ ವೈದ್ಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಈ ಮಾತುಗಳನ್ನು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಪುತ್ರಿ ಹಾಗೂ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಕೂಡ ಉಪಸ್ಥಿತರಿದ್ದರು.

ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪವಾರ್ ಉತ್ತರಿಸುತ್ತಿದ್ದರು. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಒದಗಿಸುವುದು ಪ್ರಶ್ನೆಯ ಉದ್ದೇಶವಾಗಿತ್ತು. ಸಂಸತ್ತಿನಲ್ಲಿ ಈ ಮಸೂದೆ ಇನ್ನೂ ಅಂಗೀಕಾರವಾಗಬೇಕಿದೆ. ಶರದ್ ಪವಾರ್ ಅವರು ಕಾಂಗ್ರೆಸ್ ನ ಲೋಕಸಭಾ ಸದಸ್ಯರಾಗಿದ್ದಾಗಿನಿಂದಲೂ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತದೆ ಬಂದಿದ್ದಾರೆ.

ಕಾಂಗ್ರೆಸ್ ಗೂ ಕೂಡ ಕನ್ನಡಿ ತೋರಿಸಿದ ಪವಾರ್
‘ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನ ಮನಸ್ಥಿತಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಪೂರಕವಾಗಿಲ್ಲ, ನಾನು ಕಾಂಗ್ರೆಸ್‌ನ ಲೋಕಸಭಾ ಸದಸ್ಯನಾಗಿದ್ದಾಗ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಷಯದ ಬಗ್ಗೆ ಮಾತನಾಡುತ್ತಿದ್ದೆ ಎಂದು ನನಗೆ ನೆನಪಿದೆ. ಒಮ್ಮೆ ಭಾಷಣ ಮುಗಿಸಿ ಹಿಂತಿರುಗಿ ನೋಡಿದಾಗ ನನ್ನ ಪಕ್ಷದ ಬಹುತೇಕ ಸಂಸದರು ಹೊರಟುಹೋಗಿದ್ದರು. ಇದರರ್ಥ  ನನ್ನ ಪಕ್ಷದವರಿಗೂ ಕೂಡ ಅದು ಜೀರ್ಣಿಸಿಕೊಳ್ಳಲು ಆಗಿರಲಿಲ್ಲ" ಎಂದು ಪವಾರ್ ಹೇಳಿದ್ದಾರೆ.

ಇದನ್ನೂ ಓದಿ-ಜಾನ್ಸನ್ ಬೇಬಿ ಪೌಡರ್ ಉತ್ಪಾದನಾ ಪರವಾನಗಿ ರದ್ದುಗೊಳಿಸಿದ ಈ ರಾಜ್ಯ..!

ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಎಕ್ಲ್ಲಾ ಪಕ್ಷಗಳು ಪ್ರಯತ್ನಗಳನ್ನು ನಡೆಸುತಲೇ ಇರಬೇಕು ಎಂದು ಎನ್ ಸಿ ಪಿ ಮುಖ್ಯಸ್ಥರು ಹೇಳಿದ್ದಾರೆ. 

ಇದನ್ನೂ ಓದಿ-ಮುಂಬೈನಲ್ಲಿ ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಸಾವು

"ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಪರಿಷತ್, ಪಂಚಾಯಿತಿ ಸಮೀತಿಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದೆ ಎಂದು ಹೇಳಿರುವ ಪವಾರ್, ಮೊದಲು ವಿರೋಧ ವ್ಯಕ್ತವಾದರೂ ಕೂಡ ನಂತರ ಎಲ್ಲರೂ ಅದನ್ನು ಒಪ್ಪಿಕೊಂಡರು ಎಂದಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News