Kabza Teaser: 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್​! ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​

Kabza Teaser: ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕಬ್ಜ ಸಿನಿಮಾ ಟೀಸರ್‌ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಕಬ್ಜ ಸಿನಿಮಾ ತಯಾರಾಗುತ್ತಿದೆ. 

Written by - Chetana Devarmani | Last Updated : Sep 17, 2022, 12:12 PM IST
  • ಆರ್​. ಚಂದ್ರು ನಿರ್ದೇಶನದ ಕಬ್ಜ ಸಿನಿಮಾ
  • 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್
  • ಕಾರ್ಯಕ್ರಮಕ್ಕೆ 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್
Kabza Teaser: 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್​! ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​  title=
ಕಬ್ಜ ಟೀಸರ್

Kabza Teaser: ಆರ್​. ಚಂದ್ರು ನಿರ್ದೇಶನ ಮಾಡುತ್ತಿರುವ ಕಬ್ಜ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು​ ನಿರೀಕ್ಷೆಯಿಟ್ಟಿದ್ದಾರೆ. ಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ಮೂಲಕ ಎಲ್ಲರ ಗಮನ ಸೆಳೆದ ಕಬ್ಜ ಸಿನಿಮಾದ ಟೀಸರ್​ ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದೆ. ಕಬ್ಜ ಚಿತ್ರದಲ್ಲಿ ಉಪೇಂದ್ರ ಹೀರೋ ಆಗಿದ್ದು, ಅವರ ಜೊತೆ ಕಿಚ್ಚ ಸುದೀಪ್​ ಕೂಡ ನಟಿಸಿದ್ದಾರೆ. ಕಬ್ಜದಲ್ಲಿ ನಾಯಕಿ ನಟಿಯಾಗಿ ಶ್ರೀಯಾ ಶರಣ್​ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಇಂದು (ಸೆ.17) ಸಂಜೆ ರಿಲೀಸ್‌ ಆಗಲಿದೆ. ಕಬ್ಜ ಒಂದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಜೊತೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಅವರಿಗೆ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಅಭಿಮಾನಿಗಳಿದ್ದು, ಕಬ್ಜ ಟೀಸರ್​ ನೋಡಲು ಎಲ್ಲರೂ ಕಾತುರರಾಗಿದ್ದಾರೆ. 

ಇದನ್ನೂ ಓದಿ : ತೆರೆ ಕಂಡಾಯ್ತು ಮಾನ್ಸೂನ್ ರಾಗ, ಚಿತ್ರಕ್ಕೆ ಪ್ರೇಕ್ಷಕ ಕೊಟ್ಟ ಮಾಕ್ಸ್ ಎಷ್ಟು ಗೊತ್ತಾ ?

ಇಂದು (ಸೆ.17) ಸಂಜೆ ಕಬ್ಜ ಸಿನಿಮಾ ಟೀಸರ್‌ ರಿಲೀಸ್‌ ಕಾರ್ಯಕ್ರಮ ಬೆಂಗಳೂರಿನ ಓರಾಯನ್​ ಮಾಲ್‌ನಲ್ಲಿ ನಡೆಯಲಿದ್ದು, ತೆಲುಗಿನ ಖ್ಯಾತ ನಟ ರಾಣಾ ದುಗ್ಗುಬಾಟಿ ಮತ್ತು ಕನ್ನಡದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿಗಳಾಗಿ ಟೀಸರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಐದು ಭಾಷೆಗಳಲ್ಲಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು, ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಚಿತ್ರತಂಡ ಈ ಉಡುಗೊರೆ ನೀಡುತ್ತಿದೆ. 

 

 

ಚಿತ್ರದ ಶೂಟಿಂಗ್​ ಬಹುತೇಕ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಓರಿಯಾ ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಶುರುವಾಗಿದೆ. ಉಪೇಂದ್ರ ಮತ್ತು ಆರ್​. ಚಂದ್ರು ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ʻಐ ಲವ್​ ಯೂʼ ಸಿನಿಮಾ ಸಖತ್‌ ಹಿಟ್​ ಆಗಿತ್ತು. ಈಗ ಮತ್ತೊಮ್ಮೆ ಕಬ್ಜ ಸಿನಿಮಾಗಾಗಿ ಇವರಿಬ್ಬರು ಒಂದಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತವಿದ್ದು, ಮತ್ತೊಮ್ಮೆ ಸಂಗೀತದ ರಸದೌತಣ ನೋಡುಗರಿಗೆ ಸಿಗಲಿದೆ. 

ಇದನ್ನೂ ಓದಿ : Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News