ಬೆಂಗಳೂರು : ಮೈಸೂರು-ಕೆಂಗೇರಿ ರಸ್ತೆ ನಡುವೆ ಮೆಟ್ರೋ ಸಂಚಾರ ವ್ಯತ್ಯಯಾಗಲಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ, ಮೆಟ್ರೋ ತಾಂತ್ರಿಕ ಕಾರಣದಿಂದ ಈ ಮಾರ್ಗದ ಒಂದೇ ಟ್ರಾಕ್ ನಲ್ಲಿ ರೈಲು ಓಡಾಟ 25 ರಿಂದ 30 ನಿಮಿಷಕ್ಕೆ ಒಂದು ರೈಲು ಮಾತ್ರ ಓಡಾಟ ನಡೆಸುತ್ತಿದೆ. ನಿರ್ವಹಣಾ ತಂಡದಿಂದ ಸಮಸ್ಯೆ ಸರಿಪಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಪರಿಶಿಷ್ಟ ಪಂಗಡಕ್ಕೆ ಬೆಟ್ಟ ಕುರುಬ ಸಮುದಾಯ ಸೇರ್ಪಡೆ, ಸಿದ್ಧರಾಮಯ್ಯ ಸ್ವಾಗತ
ಮೆಟ್ರೋ ಪ್ರಯಾಣಿಕರಿಗೆ 5 ದಿನದ ಪಾಸ್
ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿ ಸುಖಕರ ಪ್ರಯಾಣದಿಂದ ಜನರ ಮನಗೆದ್ದಿರೋ ನಮ್ಮ ಮೆಟ್ರೋ, ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೆ ಬಿಎಂಆರ್ ಸಿಎಲ್ 1 ಹಾಗೂ 3 ದಿನಗಳ ಪಾಸ್ ಜಾರಿಗೆ ತಂದಿದ್ದ , ಇದೀಗ 5 ದಿನಗಳ ಪಾಸ್ನನ್ನು ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲೆಂದು ಈ ಪಾಸ್ (Pass) ಬಿಡುಗಡೆ ಮಾಡಿರೋದಾಗಿ ಬಿಎಂಆರ್ ಸಿಎಲ್ ತಿಳಿಸಿದೆ.
5 ದಿನದ ಮೆಟ್ರೋ ಪಾಸ್
1 ದಿನ ಹಾಗೂ 3 ದಿನದ ಮೆಟ್ರೋ ಪಾಸ್ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ ಮೇ 23, 2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್ ಎಂದರೆ 5 ದಿನದ ಪಾಸ್ ಅನ್ನು ಪರಿಚಯಿಸುತ್ತಿದೆ. 5 ದಿನದ ಪಾಸ್ ಬೆಲೆ 550 ರೂ. ಇರಲಿದೆ. ಮರುಪಾವತಿಸಬಹುದಾದ ಸ್ಮಾರ್ಟ್ ಕಾರ್ಡ್ ಭದ್ರತಾ ಠೇವಣಿ 50 ರೂ. ಇರಲಿದೆ.
ಇದನ್ನೂ ಓದಿ : "ಕಾರ್ಮಿಕರ ಬದುಕನ್ನು ಹಸನ ಮಾಡಲು ರಾಹುಲ್ ಗಾಂಧಿಯವರು ಹೋರಾಟ ಮಾಡುತ್ತಿದ್ದಾರೆ"-ಡಿಕೆಶಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.