ನವದೆಹಲಿ: ಬೀದಿ ನಾಯಿಗಳು ಯಾವಾಗ ಹೇಗೆ ದಾಳಿ ಮಾಡುತ್ತವೆ ಅಂತಾ ಗೊತ್ತಾಗುವುದೇ ಇಲ್ಲ. ಯಾವುದೋ ಗುಂಗಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗಿ ಇದ್ದಕ್ಕಿದ್ದಂತೆಯೇ ಪ್ರತ್ಯೇಕ್ಷವಾಗುವ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಇದಕ್ಕೆ ನಿದರ್ಶನವೇ ಕೇರಳದಲ್ಲಿ ನಡೆದಿರುವ ಘಟನೆ
ಹೌದು, ಕೇರಳದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಇಬ್ಬರು ವ್ಯಕ್ತಿಗಳ ಮೇಲೆ ಬೀದಿ ನಾಯಿಗಳು ಗುಂಪು ದಾಳಿ ನಡೆಸಿದೆ. ಈ ಭಯಾನಕ ವಿಡಿಯೋವನ್ನು ಸುದ್ದಿಸಂಸ್ಥೆ ANI ಹಂಚಿಕೊಂಡಿದೆ. ಕೇರಳದ ಕನ್ನೂರಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಬ್ಬರ ಮೇಲೆ ಬೀದಿನಾಯಿಗಳು ಅಟ್ಟಾಡಿಸಿವೆ.
ಇದನ್ನೂ ಓದಿ: ಆಹಾರಕ್ಕಾಗಿ ಮನೆಗೆ ನುಗ್ಗಿದ ಆನೆ, ಹೊರ ಬರಲಾರದೆ ಪರದಾಟ ! ಇಲ್ಲಿದೆ ವಿಡಿಯೋ
ಇದ್ದಕ್ಕಿದ್ದಂತೆಯೇ ಪ್ರತ್ಯೇಕ್ಷವಾದ ನಾಯಿಗಳು ಗುಂಪು ಗುಂಪಾಗಿ ದಾಳಿ ನಡೆಸಿವೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಶರವೇಗದಲ್ಲಿ ಓಡಿದ್ದಾರೆ. ಆದರೂ ಅವರನ್ನು ಬೆನ್ನಟ್ಟಿದ ಐದಾರು ನಾಯಿಗಳು ಕಚ್ಚಲು ಮುಂದಾಗಿವೆ. ಈ ವೇಳೆ ಮನೆಯೊಂದಕ್ಕೆ ಹೊಕ್ಕ ವಿದ್ಯಾರ್ಥಿಗಳು ಗೇಟ್ ಹಾಕಿ ನಾಯಿ ತಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
#WATCH | Kerala: Students in Kannur manage to escape unharmed as stray dogs chase them in the locality (12.09) pic.twitter.com/HPV27btmix
— ANI (@ANI) September 13, 2022
ಮತ್ತೊಂದು ದೃಶ್ಯದಲ್ಲಿ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ. ವಾಕಿಂಗ್ ತೆರಳಿದ್ದ ವ್ಯಕ್ತಿಯ ಮೇಲೆ ಇದ್ದಕ್ಕಿದ್ದಂತೆಯೇ ನಾಯಿಗಳು ದಾಳಿ ನಡೆಸಿವೆ. ಜೋರಾಗಿ ಕಿರುಚಾಡಿದ ವ್ಯಕ್ತಿ ನಾಯಿ ದಾಳಿಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ವಿಡಿಯೋ ನೊಡಿದ ಪ್ರತಿಯೊಬ್ಬರು ನಾಯಿ ದಾಳಿಯ ದೃಶ್ಯ ಕಂಡು ಹೌಹಾರಿದ್ದಾರೆ.
ಇದನ್ನೂ ಓದಿ: Snake Found In Scooty: ಸ್ಕೂಟರ್ ಒಳಗಿನಿಂದ ಹೊರಬಂತು 5 ಅಡಿ ಉದ್ದದ ಹಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.