ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿವಾಣ ಬಿದ್ದರೆ ದೇಶದೆಲ್ಲಡೆ ಅದಕ್ಕೆ ತಡೆಯೊಡ್ಡಬಹುದು-ಅಖಿಲೇಶ್ ಯಾದವ್

ಎನ್ಡಿಟಿವಿ ಯೂತ್ ಕನ್ ಕ್ಲೇವ್ ನಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್" ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿವಾಣ ಬಿದ್ದರೆ ದೇಶದೆಲ್ಲಡೆ ಅದಕ್ಕೆ ತಡೆಯೊಡ್ಡಬಹುದು ಎಂದು ತಿಳಿಸಿದರು. 

Last Updated : Sep 16, 2018, 01:08 PM IST
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿವಾಣ ಬಿದ್ದರೆ ದೇಶದೆಲ್ಲಡೆ ಅದಕ್ಕೆ ತಡೆಯೊಡ್ಡಬಹುದು-ಅಖಿಲೇಶ್ ಯಾದವ್   title=
Photo:facebook

ನವದೆಹಲಿ: ಎನ್ಡಿಟಿವಿ ಯೂತ್ ಕನ್ ಕ್ಲೇವ್ ನಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್" ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿವಾಣ ಬಿದ್ದರೆ ದೇಶದೆಲ್ಲಡೆ ಅದಕ್ಕೆ ತಡೆಯೊಡ್ಡಬಹುದು ಎಂದು ತಿಳಿಸಿದರು. 

ಹಿರಿಯ ಪತ್ರಕರ್ತ ರವೀಶ್ ಕುಮಾರ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ " ಒಂದು ವೇಳೆ ನೀವು ಧರ್ಮ ಮತ್ತು ಜಾತಿ ಆಧಾರದ ಮೇಲೆ ಜಗಳವಾಡುತ್ತಿದ್ದರೆ  ಉದ್ಯೋಗ ಮತ್ತು ಆದಾಯ ಕುರಿತಾಗಿ ಪ್ರಶ್ನೆ ಎತ್ತುವ ವಿಚಾರವೇ ಬರುವುದಿಲ್ಲ ಆದ್ದರಿಂದ ಬಿಜೆಪಿ ಈ ರೀತಿ ಯೋಜನೆಯನ್ನು ರೂಪಿಸಿದೆ "ಎಂದು ತಿಳಿಸಿದರು.

ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾಯಕತ್ವದ ವಿಚಾರವಾಗಿ ಮಾತನಾಡಿದ ಅಖಿಲೇಶ " ನಾವು ಮಹಾ ಮೈತ್ರಿಕೂಟದ ನಾಯಕನನ್ನು ಚುನಾವಣೆಯ ನಂತರ ಆರಿಸುತ್ತೇವೆ. ಈಗ ನಾವು ಬಿಜೆಪಿಯನ್ನು ತಡೆಯೊಡ್ಡಬೇಕಾಗಿದೆ ನಾವು ಯುಪಿಯಲ್ಲಿ ಬಿಜೆಪಿಯನ್ನು ತಡೆದರೆ ದೇಶದೆಲ್ಲಡೆ ಬಿಜೆಪಿಗೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅಖಿಲೇಶ್ " ಪ್ರಧಾನಿ ಮೋದಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ವಾರಣಾಸಿಯಲ್ಲಿ ಮೂರು ದಿನ ವಾಸ್ತವ್ಯ ಹುಡಬೇಕಾಗಿ ಬಂದಿದೆ ಎಂದು  ವ್ಯಂಗವಾಡಿದರು.

Trending News