Car Offers: ಮಾರುತಿ ಸುಜುಕಿ ಕಂಪನಿಯ ಈ ಅಗ್ಗದ ಕಾರುಗಳ ಮೇಲೆ ಸಿಗ್ತಿದೆ ಬಂಪರ್ ಡಿಸ್ಕೌಂಟ್, ಯಾವ ಕಾರಿನ ಮೇಲೆ ಎಷ್ಟು?

Maruti Suzuki Car Discounts Offers: ಮಾರುತಿ ಸುಜುಕಿ ತನ್ನ ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಸೆಡಾನ್, ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಸೇರಿದಂತೆ ಆಯ್ದ ಮಾದರಿಯ ಕಾರುಗಳ ಮೇಲೆ ಬಂಪರ್  ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ನಗದು ರಿಯಾಯಿತಿ ಅಥವಾ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಆದರೆ, ಈ ಕೊಡುಗೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಖರೀದಿಸಲಾಗುವ ಕಾರುಗಳಿಗ ಮಾತ್ರ ಅನ್ವಯಿಸಲಿವೆ.  

Written by - Nitin Tabib | Last Updated : Sep 5, 2022, 05:59 PM IST
  • ಮಾರುತಿ ಸುಜುಕಿ ತನ್ನ ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಸೆಡಾನ್, ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಸೇರಿದಂತೆ ಆಯ್ದ ಮಾದರಿಗಳ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ.
  • ಸಾಮಾನ್ಯವಾಗಿ ಭಾರತದಲ್ಲಿ ಈ ಎಲ್ಲಾ ಕಾರುಗಳನ್ನು ಅತ್ಯಂತ ಕೈಗೆಟುಕುವ ದರದ ಕಾರುಗಳೆಂದು ಪರಿಗಣಿಸಲಾಗುತ್ತವೆ.
Car Offers: ಮಾರುತಿ ಸುಜುಕಿ ಕಂಪನಿಯ ಈ ಅಗ್ಗದ ಕಾರುಗಳ ಮೇಲೆ ಸಿಗ್ತಿದೆ ಬಂಪರ್ ಡಿಸ್ಕೌಂಟ್, ಯಾವ ಕಾರಿನ ಮೇಲೆ ಎಷ್ಟು? title=
Maruti Suzuki Discount Offers

Car Discounts Offers: ಮಾರುತಿ ಸುಜುಕಿ ತನ್ನ ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಸೆಡಾನ್, ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಸೇರಿದಂತೆ ಆಯ್ದ ಮಾದರಿಗಳ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಭಾರತದಲ್ಲಿ ಈ ಎಲ್ಲಾ ಕಾರುಗಳನ್ನು ಅತ್ಯಂತ ಕೈಗೆಟುಕುವ ದರದ ಕಾರುಗಳೆಂದು ಪರಿಗಣಿಸಲಾಗುತ್ತವೆ. ಪ್ರಸ್ತುತ ಕಂಪನಿ ನೀಡುತ್ತಿರುವ ಆಫರ್ ನಗದು ರಿಯಾಯಿತಿ ಅಥವಾ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಈ ಕೊಡುಗೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಖರೀದಿಸಲಾಗುವ ಕಾರುಗಳಿಗೆ ಅನ್ವಯಿಸಲಿವೆ. ಮಾರುತಿ ಸುಜುಕಿ ಸೆಲೆರಿಯೊ ಬಗ್ಗೆ ಹೇಳುವುದಾದರೆ, ಅದರ ಮ್ಯಾನುವಲ್ ರೂಪಾಂತರದ ಮೇಲೆ ಒಟ್ಟು 49,000 ರೂ.ಗಳ ಕೊಡುಗೆ ನೀಡಲಾಗುತ್ತಿದೆ. ಇದೇ ವೇಳೆ, ಮಾರುತಿ ಸುಜುಕಿ ಸೆಲೆರಿಯೊದ AMT ರೂಪಾಂತರದ ಮೇಲೆ  34,000 ರೂಗಳ ಕೊಡುಗೆ ನೀಡಲಾಗುತ್ತಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ
ಇತ್ತೀಚಿನ ಅಪ್ಡೇಟೆಡ್ ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೇಲೂ ಕೂಡ ಕೊಡುಗೆ ಲಭ್ಯವಿದೆ. ಎಸ್-ಪ್ರೆಸ್ಸೊ ಹ್ಯಾಚ್‌ಬ್ಯಾಕ್‌ನ ಮ್ಯಾನುವಲ್ ರೂಪಾಂತರದ ಮೇಲೆ ರೂ 49,000 ಮೌಲ್ಯದ ಕೊಡುಗೆಗಳನ್ನು ನೀಡಲಾಗುತ್ತಿದೆ ಮತ್ತು AMT ರೂಪಾಂತರದ ಮೇಲೆ ರೂ 34,000 ಮೌಲ್ಯದ ಕೊಡುಗೆಗಳನ್ನು ನೀಡಲಾಗುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್‌ನ AMT ರೂಪಾಂತರದ ಮೇಲೆ 45,000 ರೂಗಳ ಕೊಡುಗೆ ನೀಡಲಾಗುತ್ತಿದೆ, ಆದರೆ ಮ್ಯಾನುವಲ್ ರೂಪಾಂತರಕ್ಕೆ  25,000 ರೂ ಮೌಲ್ಯದ ಕೊಡುಗೆಗಳು ಲಭ್ಯವಿವೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು 5-ಸ್ಪೀಡ್ ಮ್ಯಾನ್ಯುವಲ್ ಅಥವಾ AMT ಗೇರ್‌ಬಾಕ್ಸ್‌ಗೆ ಸಂಯೋಜಿತವಾಗಿದೆ.

ಮಾರುತಿ ಸುಜುಕಿ ಡಿಜೈರ್
ಭಾರತದ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್ ಸೆಡಾನ್ ಮಾರುತಿ ಸುಜುಕಿ ಡಿಜೈರ್ AMT ರೂಪಾಂತರದ ಮೇಲೆ ರೂ 40,000 ಮತ್ತು ಮ್ಯಾನುವಲ್ ರೂಪಾಂತರದಲ್ಲಿ ರೂ 20,000 ಮೌಲ್ಯದ ಕೊಡುಗೆಗಳನ್ನು ನೀಡಲಾಗುತ್ತಿದೆ. ಸ್ವಿಫ್ಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಇದನ್ನೂ ಓದಿ-ಮುಂದಿನ ತಿಂಗಳಿನಿಂದ ಸರ್ಕಾರದ ಈ ಜನಪ್ರಿಯ ಯೋಜನೆ ಸ್ಥಗಿತ.! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಮಾರುತಿ ಸುಜುಕಿ ವ್ಯಾಗನ್ ಆರ್
ವ್ಯಾಗನ್ ಆರ್ ಸತತವಾಗಿ ಹಲವಾರು ತಿಂಗಳುಗಳಿಂದ ಮಾರುತಿ ಸುಜುಕಿಯ ಅತ್ಯುತ್ತಮ ಮಾರಾಟಗೊಳ್ಳುವ  ಮಾದರಿಯಾಗಿದೆ. ಇದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಕೂಡ ಆಗಿದೆ. ಈ ತಿಂಗಳು, ಅದರ ಮ್ಯಾನುವಲ್ ರೂಪಾಂತರದ ಮೇಲೆ ರೂ 39,000 ಮತ್ತು AMT ರೂಪಾಂತರದ ಮೇಲೆ ರೂ 34,000 ಮೌಲ್ಯದ ಕೊಡುಗೆಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ-Kisan Credit Card: ಮನೆಯಲ್ಲಿಯೇ ಕುಳಿತು ಎಸ್‌ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಸುಲಭ ಪ್ರಕ್ರಿಯೆ

ಮಾರುತಿ ಸುಜುಕಿ ಆಲ್ಟೊ
ಮಾರುತಿ ಸುಜುಕಿ ಆಲ್ಟೊ 800 ನ ಮೂಲ STD ಟ್ರಿಮ್ ಹೊರತುಪಡಿಸಿ, ಎಲ್ಲಾ ರೂಪಾಂತರಗಳಲ್ಲಿ 29,000 ರೂ. ಮೌಲ್ಯದ ಕೊಡುಗೆಗಳು ಲಭ್ಯವಿವೆ. ಹ್ಯಾಚ್‌ಬ್ಯಾಕ್ 800 cc ಎಂಜಿನ್ (47 Bhp) ನಿಂದ ಚಾಲಿತವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News