Britain ನೂತನ ಪ್ರಧಾನಿಯಾಗಿ Liz Truss ಆಯ್ಕೆ: ಕನ್ಸರ್ವೇಟಿವ್ ಪಕ್ಷದ 4ನೇ ಪಿಎಂ ಆಗಿ ನೇಮಕ

ಈ ಗೆಲುವಿನೊಂದಿಗೆ, ಟ್ರಸ್ 2015 ರ ಚುನಾವಣೆಯ ನಂತರ ಕನ್ಸರ್ವೇಟಿವ್‌ ಪಕ್ಷದ ನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದಾರೆ

Written by - Bhavishya Shetty | Last Updated : Sep 5, 2022, 05:42 PM IST
    • ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ಬಳಿಕ ಪ್ರಧಾನಿ ಹುದ್ದೆ ಖಾಲಿಯಿತ್ತು
    • ಪೈಪೋಟಿಯಲ್ಲಿ ಗೆದ್ದ ಬಳಿಕ ಲಿಜ್ ಟ್ರಸ್ ಅವರು ಬ್ರಿಟನ್ ನ ಮುಂದಿನ ಪ್ರಧಾನಿಯಾಗಿ ಆಯ್ಕೆ
    • ಮಾಜಿ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಗೆದ್ದ ಲಿಜ್ ಟ್ರಸ್
Britain ನೂತನ ಪ್ರಧಾನಿಯಾಗಿ Liz Truss ಆಯ್ಕೆ: ಕನ್ಸರ್ವೇಟಿವ್ ಪಕ್ಷದ 4ನೇ ಪಿಎಂ ಆಗಿ ನೇಮಕ title=
Liz Truss

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ ನಾಯಕತ್ವದ ಪೈಪೋಟಿಯಲ್ಲಿ ಗೆದ್ದ ಬಳಿಕ ಲಿಜ್ ಟ್ರಸ್ ಅವರು ಬ್ರಿಟನ್ ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಜುಲೈನಲ್ಲಿ ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ಬಳಿಕ ಪ್ರಧಾನಿ ಹುದ್ದೆ ಖಾಲಿಯಿತ್ತು. ಈ ಸ್ಥಾನಕ್ಕಾಗಿ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ಕಣಕ್ಕಿಳಿದಿದ್ದು, ತೀವ್ರ ಪ್ರಚಾರವನ್ನು ಕೈಗೊಂಡಿದ್ದರು. ಸದ್ಯ ಪ್ರಧಾನಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು 81,326 ಮತಗಳ ಅಂತರದಿಂದ ಲಿಜ್ ಟ್ರಸ್ ಸೋಲಿಸಿದ್ದಾರೆ. 

ಇದನ್ನೂ ಓದಿ: NRI: ಕೆನಡಾಕ್ಕೆ ವಲಸೆ ಹೋಗಲು ಬಯಸುತ್ತೀದ್ದೀರಾ? ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ…

ಈ ಗೆಲುವಿನೊಂದಿಗೆ, ಟ್ರಸ್ 2015 ರ ಚುನಾವಣೆಯ ನಂತರ ಕನ್ಸರ್ವೇಟಿವ್‌ ಪಕ್ಷದ ನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: Emmy Award : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಎಮಿ ಪ್ರಶಸ್ತಿ

ಸದ್ಯ ಬ್ರಿಟನ್ ದೇಶವು ಬಿಕ್ಕಟ್ಟಿಗೆ ಸಿಲುಕಿದ್ದು, ಜುಲೈನಲ್ಲಿ ಶೇ.10.1ರಷ್ಟು ಸ್ಕೈ-ರಾಕೆಟಿಂಗ್ ಹಣದುಬ್ಬರವನ್ನು ಎದುರಿಸುತ್ತಿದೆ, ಜೊತೆಗೆ ದೀರ್ಘ ಆರ್ಥಿಕ ಹಿಂಜರಿತದ ಮುನ್ಸೂಚನೆಯನ್ನು ಸಹ ಕಾಣುತ್ತಿದೆ. ಈ ಎಲ್ಲಾ ಸಮಸ್ಯೆಗಳು ತಕ್ಷಣದ ಪರಿಹಾರ ಕೈಗೊಳ್ಳುವುದಾಗಿ, ಲಿಜ್ ಟ್ರಸ್ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಈ ಎಲ್ಲಾ ಆಶೋತ್ತರಗಳನ್ನು ಈಡೇರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News