ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ವಿವಿಯ ವಿದ್ಯಾರ್ಥಿನಿ ಸಂಜನಾ ನೇಣಿಗೆ ಶರಣಾಗಿದ್ದಾರೆ.
20 ವರ್ಷದ ಮೃತ ಯುವತಿ ಸಂಜನಾ ಬೆಂಗಳೂರಿನ ವಿಜಯನಗರದ ಗಂಗಾಧರ್ ಬಡವಾಣೆಯಲ್ಲಿ ಬುಧವಾರ ನೇಣು ಬಿಗಿದುಕೊಂಡಿದ್ದರು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರೂ ರಸ್ತೆ ಮಧ್ಯದಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದ್ವಿತೀಯ ಪಿಯೂಸಿ ಅನುತ್ತೀರ್ಣಳಾಗಿದ್ದ ಸಂಜನಾ ಮೈಸೂರು ಮುಕ್ತ ವಿವಿಯಲ್ಲಿ ಅನಿಮೇಷನ್ ಕೋರ್ಸ್ಗೆ ಸೇರಿದ್ದರು. ಕೆಎಸ್ಒಯು ನಿಯಮ ಉಲ್ಲಂಘಿಸಿ ಕೋರ್ಸ್ ಆರಂಭಿಸಿದಕ್ಕೆ ಯುಜಿಸಿ ವಿವಿಯ ಮಾನ್ಯತೆಯನ್ನು ರದ್ದು ಪಡಿಸಿತ್ತು. ಕೋರ್ಸ್ ಕೈ ತಪ್ಪಿದ್ದರಿಂದ ಸಂಜನಾ ಖಿನ್ನತೆಗೊಳಗಾಗಿದ್ದರು. ಈ ಸಂಬಂಧ ಆಕೆಗೆ ಚಿಕಿತ್ಸೆಯನ್ನು ಕೊಡಿಸಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಈ ಪ್ರಕರಣವು ವಿಜಯನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.