WhatsApp Ban 23 Lakhs Accounts: ಲಕ್ಷಾಂತರ ಬಳಕೆದಾರರಿಗೆ ವಾಟ್ಸಾಪ್ ಭಾರಿ ಹೊಡೆತ ನೀಡಿದೆ. ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ ಜುಲೈ ತಿಂಗಳಿನಲ್ಲಿ ಸಂಸ್ಥೆ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಕಂಪನಿಯು ಗುರುವಾರ ಈ ಮಾಹಿತಿಯನ್ನು ನೀಡಿದೆ. ಭಾರತದಲ್ಲಿ ಜುಲೈ ತಿಂಗಳಿನಲ್ಲಿ WhatsApp ಒಟ್ಟು 574 ದೂರುಗಳನ್ನು ಸ್ವೀಕರಿಸಿದ್ದು ಮತ್ತು 27 ರಂದು ಕ್ರಮ ಕೈಗೊಂಡಿದೆ. ದೇಶದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಪ್ಲಾಟ್ಫಾರ್ಮ್ ಜೂನ್ನಲ್ಲಿ ಕಳಪೆ ದಾಖಲೆ ಹೊಂದಿರುವ 22 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ.
23 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ
ಈ ಕುರಿತು ಮಾಹಿತಿಯನ್ನು ನೀಡಿರುವ ಕಂಪನಿಯ ವಕ್ತಾರರು, “ಐಟಿ ನಿಯಮಗಳು 2021 ರ ಪ್ರಕಾರ, ನಾವು ಜುಲೈ 2022 ಕ್ಕೆ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಮಾಸಿಕ ವರದಿಯಲ್ಲಿ ದಾಖಲಾಗಿರುವಂತೆ, ಜುಲೈ ತಿಂಗಳಲ್ಲಿ WhatsApp 2.3 ಮಿಲಿಯನ್ ಖಾತೆಗಳನ್ನು (2,387,000) ನಿಷೇಧಿಸಿದೆ" ಎಂದಿದ್ದಾರೆ.
ಇದನ್ನೂ ಓದಿ-WhatsApp Updates : ಇನ್ಮುಂದೆ ವಾಟ್ಸಾಪ್ ತೆರೆಯದೆಯೇ ಆಡಿಯೋ ಕಾಲ್ ಮಾಡಬಹುದು
ಷರತ್ತುಗಳ ಉಲ್ಲಂಘನೆ
ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ 4(1)(ಡಿ) ಪ್ರಕಾರ ಪ್ರಕಟಿಸಲಾದ ವರದಿಯು ಭಾರತದಲ್ಲಿನ ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ WhatsApp ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ಒಳಗೊಂಡಿದೆ. ದೂರು ಕಾರ್ಯವಿಧಾನದ ಮೂಲಕ ಈ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಮತ್ತು ಸೇವಾ ನಿಯಮಗಳ ಉಲ್ಲಂಘನೆಗಾಗಿ ಅದನ್ನು ತಡೆಗಟ್ಟುವಿಕೆ ಮತ್ತು ಪತ್ತೆ ವಿಧಾನಗಳಿಗಾಗಿ ಖಾತೆಗಳನ್ನು ಪ್ರಕ್ರಿಯೆಗೊಳಿಸಲಾಗಿದೆ ಎನ್ನಲಾಗಿದೆ
ಇದನ್ನೂ ಓದಿ-ಟಿವಿ, ಲ್ಯಾಪ್ಟಾಪ್ ಮತ್ತು ಮೊಬೈಲ್ ಗಾಗಿ ಇಲ್ಲಿದೆ ಅತ್ಯುತ್ತಮ ಇಂಟರ್ ನೆಟ್ ಪ್ಲಾನ್ .!
ಐಟಿ ನಿಯಮಗಳು 2021 ರ ಅಡಿಯಲ್ಲಿ, 5 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಪ್ರತಿ ತಿಂಗಳಿಗೆ ತನ್ನ ಅನುಸರಣಾ ವರದಿಯನ್ನು ಪ್ರಕಟಿಸುವ ಅಗತ್ಯವಿದೆ. ಈ ಕುರಿತು ಮಾತನಾಡಿರುವ ಕಂಪನಿಯ ವಕ್ತಾರರು, “WhatsApp ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ದುರ್ಬಳಕೆಯನ್ನು ತಡೆಯುವಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್ಫಾರ್ಮ್ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು ಮತ್ತು ತಜ್ಞರು ಮತ್ತು ಪ್ರಕ್ರಿಯೆಗಳಲ್ಲಿ ಹೂಡಿಕೆ ಮಾಡಿದ್ದೇವೆ" ಎಂದಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.