ಚಡ್ಡಿಯಲ್ಲಿ ಮೂತ್ರ ಮಾಡುತ್ತಿದ್ದ ಬಾಲಕನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಅಂಗನವಾಡಿ ಸಹಾಯಕಿ...!

ಅಂಗನವಾಡಿ ಬಾಲಕನೊಬ್ಬ ಚಡ್ಡಿಯಲ್ಲಿ ಪದೇಪದೇ ಮೂತ್ರ ಮಾಡಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಗದರಿಸಲು ಹೋಗಿ ಅಂಗನವಾಡಿ ಸಹಾಯಕಿ ಬಾಲಕನಿಗೆ ವಿಚಿತ್ರ ಶಿಕ್ಷೆ ಕೊಟ್ಟಿರುವ ಘಟನೆ  ಚಿಕ್ಕನಾಯಕನಹಳ್ಳಿ ಗೋಡೆಕೆರೆ ಅಂಗನವಾಡಿಯಲ್ಲಿ ನಡೆದಿದೆ.

Last Updated : Aug 30, 2022, 09:30 PM IST
  • ಬಾಲಕ ಚಡ್ಡಿಯಲ್ಲೇ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಈ ಅಭ್ಯಾಸ ಬಿಡಲು ಸಾಕಷ್ಟು ಬಾರಿ ಹೇಳಿದ್ದಾರೆ.
ಚಡ್ಡಿಯಲ್ಲಿ ಮೂತ್ರ ಮಾಡುತ್ತಿದ್ದ ಬಾಲಕನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಅಂಗನವಾಡಿ ಸಹಾಯಕಿ...! title=

ತುಮಕೂರು: ಅಂಗನವಾಡಿ ಬಾಲಕನೊಬ್ಬ ಚಡ್ಡಿಯಲ್ಲಿ ಪದೇಪದೇ ಮೂತ್ರ ಮಾಡಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಗದರಿಸಲು ಹೋಗಿ ಅಂಗನವಾಡಿ ಸಹಾಯಕಿ ಬಾಲಕನಿಗೆ ವಿಚಿತ್ರ ಶಿಕ್ಷೆ ಕೊಟ್ಟಿರುವ ಘಟನೆ  ಚಿಕ್ಕನಾಯಕನಹಳ್ಳಿ ಗೋಡೆಕೆರೆ ಅಂಗನವಾಡಿಯಲ್ಲಿ ನಡೆದಿದೆ.

ತಾಲೂಕಿನ ಗೋಡೆಕೆರೆ ಅಂಗನವಾಡಿ ಕೇಂದ್ರದ ಬಾಲಕನೊಬ್ಬಅಂಗನವಾಡಿ ಕೇಂದ್ರದ ಒಳಗೆ ಪದೇಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಾನೆಂದು ಬಾಲಕನ ಗುಪ್ತಾಂಗಕ್ಕೆ ಅಂಗನವಾಡಿ ಸಹಾಯಕಿ ಬೆಂಕಿ ಕಡ್ಡಿ ಹಚ್ಚಿ  ಸುಟ್ಟಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಕ ಚಡ್ಡಿಯಲ್ಲೇ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದ್ದು ಈ ಅಭ್ಯಾಸ ಬಿಡುವಂತೆ ಸಾಕಷ್ಟು ಬಾರಿ ಹೇಳಿದ್ದಾರೆ.ಆದರೂ ಅರಿಯದ ಬಾಲಕ ಪುನಃ ಪುನಃ ಚಡ್ಡಿಯಲ್ಲಿ ಮೂತ್ರ ವಿಸರ್ಜನೆಯನ್ನು ಮಾಡಿಕೊಳ್ಳುತ್ತಿದ್ದರಿಂದ ಈ ಅಭ್ಯಾಸವನ್ನು ಬಿಡಿಸಲು ಆತುರದಲ್ಲಿ ಅಂಗನವಾಡಿ ಸಹಾಯಕಿ ಬಾಲಕನ ಗುಪ್ತಾಂಗಕ್ಕೆ ಬೆಂಕಿ ಕಡ್ಡಿಯಿಂದ ಬೆಂಕಿಹಚ್ಚಿ ಸುಟ್ಟಿದ್ದಾರೆ, ಇದರಿಂದ ಬಾಲಕನ ಗುಪ್ತಾಂಗ ಮತ್ತು ತೊಡೆ ಮೇಲೆ ಸುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಮೇಕಪ್ ಇಲ್ಲದೆ ಕಾಣಿಸಿಕೊಂಡ ನಟಿ ಲಾರಾದತ್, ಫ್ಯಾನ್ಸ್ ಹೇಳಿದ್ದೇನು ಗೊತ್ತೇ?

ಪ್ರಕರಣ ಬೆಳಕಿಗೆ ಬಂದ ಕೂಡಲೇ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಅಂಗನವಾಡಿ ಶಿಕ್ಷಕಿ ಹಾಗೂ ಬಾಲಕನ ಪೋಷಕರನ್ನು ಭೇಟಿ ಮಾಡಿ ಹೇಳಿಕೆ ಪಡೆದಿದ್ದು ಸಹಾಯಕಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

ಈ ಘಟನೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿರುವುದು ಬಿಟ್ಟರೆ ಪೋಷಕರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News