ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ವಹಿಸಿದ್ದಾರೆ. ಸೋಮವಾರ, ಕೈಲಾಶ್ ಮಾನಸರೋವರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ದೆಹಲಿಗೆ ಹಿಂದಿರುಗಿದ ನಂತರ ಇಂದು ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಯವರ ಸಮಾಧಿಗೆ ಗೌರವಾರ್ಪಣೆ ಸಲ್ಲಿಸಿದರು.
ಅದೇ ಸಮಯದಲ್ಲಿ, ಅವರು ಕೈಲಾಶ್ ಮಾನಸರೋವರದಿಂದ ತಂದ ಜಲವನ್ನು ಸಮಾಧಿ ಮೇಲೆ ಹಾಕಿದರು. ಒಂದು ಬಾಟಲಿನಲ್ಲಿ ಈ ನೀರನ್ನು ರಾಹುಲ್ ತನ್ನ ಕುತ್ರಾದ ಕಿಸೆಯಲ್ಲಿಟ್ಟು ತಂದಿದ್ದರು.
Delhi: NCP Chief Sharad Pawar, Congress President Rahul Gandhi and Sharad Yadav at bandh protest against fuel price hike pic.twitter.com/Dy7DFBV0uR
— ANI (@ANI) September 10, 2018
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಪ್ರತಿಭಟಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಗೆ 21 ವಿರೋಧ ಪಕ್ಷಗಳ ಬೆಂಬಲ ದೊರೆತಿದೆ.
Delhi: Congress President Rahul Gandhi and opposition party leaders march from Rajghat towards Ramlila Maidan, to protest against fuel price hike. #BharatBandh pic.twitter.com/X7DQcVRgIA
— ANI (@ANI) September 10, 2018
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜ್ಘಾಟ್ ನಿಂದ ರಾಮ್ ಲೀಲಾ ಮೈದಾನಕ್ಕೆ ತೆರಳಿದರು. ಅಲ್ಲಿ ಅವರು ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ.