ಅಮುಲ್ ಜೊತೆ ವ್ಯಾಪಾರ ಮಾಡುವುದು ತುಂಬಾ ಸುಲಭ. ಕಡಿಮೆ ಬಂಡವಾಳ ಹೂಡಿಕೆ ಮೂಲಕ ನೀವು ಬಂಪರ್ ಲಾಭ ಪಡೆಯಬಹುದು.
ನವದೆಹಲಿ: ನೀವು ಸಹ ವ್ಯವಹಾರ ಪ್ರಾರಂಭಿಸಲು ಯೋಜಿಸುತ್ತಿದ್ದರೆ ಮತ್ತು ಸಣ್ಣ ಮೊತ್ತದ ಹೂಡಿಕೆ ಮಾಡಿ ಪ್ರತಿ ತಿಂಗಳು ಕೈತುಂಬಾ ಗಳಿಸಲು ಬಯಸಿದರೆ ಇಲ್ಲಿದೆ ಖುಷಿ ಸುದ್ದಿ. ಕಡಿಮೆ ಹಣ ಹೂಡಿಕೆ ಮಾಡಿ ನೀವು ಬಂಪರ್ ಲಾಭವನ್ನು ಗಳಿಸುವ ಬ್ಯುಸಿನೆಸ್ ಐಡಿಯಾವನ್ನು ನಾವು ನಿಮಗೆ ತಿಳಿಸಲಿದ್ದೇವೆ. ನಿಮಗೆ ಡೈರಿ ಉತ್ಪನ್ನಗಳ ಹೆಸರಾಂತ ಕಂಪನಿ ಅಮುಲ್ ಜೊತೆ ವ್ಯಾಪಾರ ಮಾಡಲು ಅವಕಾಶವಿದೆ. ಅಮುಲ್ನ ಫ್ರಾಂಚೈಸಿ ತೆಗೆದುಕೊಳ್ಳುವುದು ದೊಡ್ಡ ವ್ಯವಹಾರವಾಗಿದೆ. ಅಷ್ಟೇ ಅಲ್ಲ ಅಮುಲ್ನ ಫ್ರಾಂಚೈಸಿಯನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಆದರೆ, ನೀವು ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವುದು ಬಹಳ ಮುಖ್ಯ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಮುಲ್ ಫ್ರಾಂಚೈಸಿಯ ಮಾಹಿತಿ ಪ್ರಕಾರ, ಫ್ರಾಂಚೈಸಿ ಮೂಲಕ ನೀವು ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂ. ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಅಮುಲ್ ಔಟ್ಲೆಟ್ ತೆಗೆದುಕೊಳ್ಳುವಾಗ ಕಂಪನಿಯು ಅಮುಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (MRP) ಮೇಲೆ ಉತ್ತಮ ಕಮಿಷನ್ ನೀಡುತ್ತದೆ. ಇದರಲ್ಲಿ ಒಂದು ಹಾಲಿನ ಪೌಚ್ ಮೇಲೆ ಶೇ.2.5, ಹಾಲಿನ ಉತ್ಪನ್ನಗಳ ಮೇಲೆ ಶೇ.10 ಮತ್ತು ಐಸ್ ಕ್ರೀಂ ಮೇಲೆ ಶೇ.20ರಷ್ಟು ಕಮಿಷನ್ ಲಭ್ಯವಿರುತ್ತದೆ. ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ನ ಫ್ರಾಂಚೈಸಿಯನ್ನು ತೆಗೆದುಕೊಳ್ಳುವಲ್ಲಿ ಪಾಕವಿಧಾನ ಆಧಾರಿತ ಐಸ್ ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್ವಿಚ್, ಹಾಟ್ ಚಾಕೊಲೇಟ್ ಪಾನೀಯಗಳ ಮೇಲೆ ಶೇ.50ರಷ್ಟು ಕಮಿಷನ್ ಲಭ್ಯವಿದೆ. ಅದೇ ರೀತಿ ಕಂಪನಿಯು Pre-packed ಐಸ್ ಕ್ರೀಮ್ ಮೇಲೆ ಶೇ.20ರಷ್ಟು ಮತ್ತು ಅಮುಲ್ ಉತ್ಪನ್ನಗಳ ಮೇಲೆ ಶೇ.10ರಷ್ಟು ಕಮಿಷನ್ ನೀಡುತ್ತದೆ.
ನೀವು ಅಮುಲ್ ಔಟ್ಲೆಟ್ ಫ್ರಾಂಚೈಸ್ ತೆಗೆದುಕೊಂಡರೆ 150 ಚದರ ಅಡಿ ಜಾಗವನ್ನು ಹೊಂದಿರಬೇಕು. ನಿಮಗೆ ಸಾಕಷ್ಟು ಸ್ಥಳವಿದ್ದರೆ ಅಮುಲ್ ನಿಮಗೆ ಫ್ರಾಂಚೈಸಿಯನ್ನು ನೀಡುತ್ತದೆ. ಆದಾಗ್ಯೂ, ಅಮುಲ್ ಐಸ್ ಕ್ರೀಮ್ ಪಾರ್ಲರ್ನ ಫ್ರಾಂಚೈಸಿ ಕನಿಷ್ಠ 300 ಚದರ ಅಡಿ ಜಾಗವನ್ನು ಹೊಂದಿರಬೇಕು. ನಿಮ್ಮ ಬಳಿ ಅಷ್ಟು ಸ್ಥಳವಿಲ್ಲದಿದ್ದರೆ ಅಮುಲ್ ಫ್ರಾಂಚೈಸಿ ನೀಡುವುದಿಲ್ಲ.
ನೀವು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ನಡೆಸಲು ಬಯಸಿದರೆ ಮತ್ತು ಅದರ ಫ್ರ್ಯಾಂಚೈಸ್ಗಾಗಿ ಯೋಜಿಸಿದರೆ ಸ್ವಲ್ಪ ಹೆಚ್ಚು ಹೂಡಿಕೆಯ ಅಗತ್ಯವಿರುತ್ತದೆ. ಇದನ್ನು ತೆಗೆದುಕೊಳ್ಳಲು ನೀವು ಸುಮಾರು 5 ಲಕ್ಷ ರೂ. ಹೂಡಿಕೆ ಮಾಡಬೇಕು. ಅದೇ ರೀತಿ ಬ್ರಾಂಡ್ ಭದ್ರತೆಗಾಗಿ 50 ಸಾವಿರ ರೂ., ನವೀಕರಣಕ್ಕೆ 4 ಲಕ್ಷ ರೂ. ಮತ್ತು ಉಪಕರಣಗಳಿಗೆ 1.50 ಲಕ್ಷ ರೂ. ಬೇಕಾಗುತ್ತದೆ.
ಅಮುಲ್ ತನ್ನ ವ್ಯಾಪಾರ ಹೆಚ್ಚಿಸಲು 2 ರೀತಿಯ ಫ್ರಾಂಚೈಸಿಗಳನ್ನು ನೀಡುತ್ತಿದೆ. ನೀವು ಅಮುಲ್ ಔಟ್ಲೆಟ್, ಅಮುಲ್ ರೈಲ್ವೆ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ನ ಫ್ರಾಂಚೈಸಿ ತೆಗೆದುಕೊಳ್ಳಲು ಬಯಸಿದರೆ ಸುಮಾರು 2 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಪೈಕಿ 25 ಸಾವಿರ ರೂ. ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆ, 1 ಲಕ್ಷ ರೂ. ನವೀಕರಣಕ್ಕೆ ಮತ್ತು ಉಪಕರಣಕ್ಕೆ 75 ಸಾವಿರ ರೂ. ಖರ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಅಮುಲ್ ವೆಬ್ಸೈಟ್ ಅಥವಾ ಫ್ರ್ಯಾಂಚೈಸ್ ಪುಟಕ್ಕೆ ಭೇಟಿ ನೀಡಬಹುದು.
ಅಮುಲ್ ಜೊತೆ ವ್ಯಾಪಾರ ಮಾಡುವುದು ತುಂಬಾ ಸುಲಭ. ವಾಸ್ತವವಾಗಿ ಇದರ ಹಿಂದೆ 2 ಕಾರಣಗಳಿವೆ. ಮೊದಲನೆಯದು ಅಮುಲ್ನ ಗ್ರಾಹಕರ ನೆಲೆ ಮತ್ತು 2ನೇಯದಾಗಿ ಇದು ನಗರದ ಪ್ರತಿಯೊಂದು ಸ್ಥಳಕ್ಕೂ ಹೊಂದಿಕೊಳ್ಳುತ್ತದೆ. ಪ್ರತಿ ನಗರದಲ್ಲಿ ಅಮುಲ್ ಬಲವಾದ ಗ್ರಾಹಕರ ನೆಲೆಯನ್ನು ಹೊಂದಿದೆ. ಪ್ರತಿ ನಗರದ ಜನರು ಈ ಕಂಪನಿಯ ಉತ್ಪನ್ನಗಳನ್ನು ಹೆಸರಿನಿಂದಲೇ ಗುರುತಿಸುತ್ತಾರೆ. ಇದು ದೊಡ್ಡ ನಗರಗಳು ಮತ್ತು ಸಣ್ಣ ಪಟ್ಟಣಗಳನ್ನೂ ತಲುಪಿದೆ. ಆದ್ದರಿಂದ ಅಮುಲ್ ಫ್ರಾಂಚೈಸಿ ತೆಗೆದುಕೊಳ್ಳುವುದರಿಂದ ನಿಮಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ.