Dolo-650 mg ಬೆಲೆಯ ಮೇಲೆ ಸರ್ಕಾರದ ನಿಯಂತ್ರಣ: ಪ್ರಸ್ತುತ ಹೆಚ್ಚು ಚರ್ಚೆಯಾಗುತ್ತಿರುವ ಔಷಧಿ ಎಂದರೆ Dolo-650. ಕರೋನಾ ಅವಧಿಯಲ್ಲಿ ಡೋಲೊ ಮಾತ್ರೆಯ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಜ್ವರದ ಔಷಧ ಡೋಲೊ 650 ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, 650 ಮಿಗ್ರಾಂ ಪ್ಯಾರೆಸಿಟಮಾಲ್ ಉಪ್ಪನ್ನು ಹೊಂದಿರುವ ಡೋಲೊ-650 ಬೆಲೆಯು ಸರ್ಕಾರದ ನಿಯಂತ್ರಣವನ್ನು ಮೀರಿದೆ ಎಂದು ಆರೋಪಿಸಿದೆ. ಇದರ ಬೆಲೆಯನ್ನು ಔಷಧಿ ತಯಾರಕರು ನಿಗದಿಪಡಿಸಿದ್ದಾರೆ. ಏಕೆಂದರೆ ಭಾರತ ಸರ್ಕಾರವು 500mg ವರೆಗಿನ ಪ್ಯಾರೆಸಿಟಮಾಲ್ ಔಷಧಿಗಳ ಬೆಲೆಗಳನ್ನು ಮಾತ್ರ ನಿಯಂತ್ರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಕಕ್ಷಿದಾರರೊಬ್ಬರ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು ಎಂದು ಜೀ ಮಾಧ್ಯಮ ನಡೆಸಿದ ಸಂಶೋಧನೆಯಲ್ಲಿ ಕಂಡು ಬಂದಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮಾಡಿರುವ ಹಕ್ಕು ತಪ್ಪು:
ಈ ವಾದದ ಸತ್ಯಾಸತ್ಯತೆ ತಿಳಿಯಲು ನಮ್ಮ ತಂಡ ಸಂಶೋಧನೆ ನಡೆಸಿದಾಗ ಸುಪ್ರೀಂ ಕೋರ್ಟ್‌ನಲ್ಲಿ ಕಕ್ಷಿದಾರರೊಬ್ಬರು ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಪ್ಯಾರೆಸಿಟಮಾಲ್ 650 ಮಿಗ್ರಾಂನ ಗರಿಷ್ಠ ಬೆಲೆಯನ್ನು 30 ಮಾರ್ಚ್ 2022 ರಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA), ಔಷಧಗಳ ಗರಿಷ್ಠ ಬೆಲೆಯನ್ನು ನಿಗದಿಪಡಿಸುವ ಭಾರತ ಸರ್ಕಾರದ ಏಜೆನ್ಸಿಯ ಆದೇಶದಲ್ಲಿ ನಿಗದಿಪಡಿಸಲಾಗಿದೆ. ಈ ಕ್ರಮದಲ್ಲಿ ಪ್ಯಾರಸಿಟಮಾಲ್ ಜೊತೆಗೆ ಹಲವು ಔಷಧಿಗಳ ಗರಿಷ್ಟ ಬೆಲೆಯನ್ನು ನಿಗದಿಪಡಿಸಲಾಗಿದೆ ಎಂಬ ಅಂಶ ಸ್ಪಷ್ಟವಾಗಿದೆ.
ಪ್ಯಾರಸಿಟಮಾಲ್ ಎಷ್ಟು ವೆಚ್ಚವಾಗಬಹುದು?
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಮಾರ್ಚ್ 2022 ರಲ್ಲಿ ಪ್ಯಾರೆಸಿಟಮಾಲ್ 650 mg ಟ್ಯಾಬ್ಲೆಟ್‌ನ ಬೆಲೆಯನ್ನು 2.04 ರೂ. ನಿಗದಿಗೊಳಿಸಿದೆ. ಇದಲ್ಲದೇ, ಪ್ಯಾರಸಿಟಮಾಲ್ 500 ಮಿಗ್ರಾಂ ಬೆಲೆಯನ್ನು ಎನ್‌ಪಿಪಿಎ 1.01 ರೂ.ಗೆ ನಿಗದಿಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ಯಾರೆಸಿಟಮಾಲ್ 500 ಮಿಗ್ರಾಂ ಬೆಲೆಯೊಂದಿಗೆ 650 ಮಿಗ್ರಾಂ ಪ್ಯಾರೆಸಿಟಮಾಲ್ ಬೆಲೆಯನ್ನೂ ಸರ್ಕಾರ ನಿಗದಿಪಡಿಸಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ- ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಭೂಕಂಪದ ಅನುಭವ
ಪ್ಯಾರಸಿಟಮಾಲ್ 500 ಮಿಗ್ರಾಂಗಿಂತ 650 ಮಿಗ್ರಾಂ ಏಕೆ ಹೆಚ್ಚು?
ಈಗ ಪ್ಯಾರಾಸಿಟಮಾಲ್ 500 ಮಿ.ಗ್ರಾಂ ಬೆಲೆ 1.01 ರೂ.ಗೆ ನಿಗದಿಯಾಗಿರುವಾಗ ಪ್ಯಾರಾಸಿಟಮಾಲ್ 650 ಮಿ.ಗ್ರಾಂ ಬೆಲೆ ದುಪ್ಪಟ್ಟಾಗಿ 2.04 ರೂ.ಗೆ ಏರುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಏಕೆಂದರೆ ಇವೆರಡರ ನಡುವಿನ ವ್ಯತ್ಯಾಸ ಕೇವಲ 150 ಮಿ.ಗ್ರಾಂ. ಈ ಕುರಿತಂತೆ ಜೀ ನ್ಯೂಸ್ ಜೊತೆ ಮಾತನಾಡಿರುವ ಫಾರ್ಮಾ ಕಂಪನಿ ಮತ್ತು ಪ್ರಧಾನ ಮಂತ್ರಿ ಜನೌಷಧಿ ಯೋಜನೆಯ ಮಾಜಿ ಸಲಹೆಗಾರ ನವೀನ್ ಜೈನ್ 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಔಷಧಿಗಳ ಬೆಲೆ ನಿಗದಿಗೆ ಮಾನದಂಡವನ್ನು ಬದಲಾಯಿಸಲಾಗಿತ್ತು. ಯುಪಿಎ ಸರ್ಕಾರವು ಮಾರಾಟಕ್ಕೆ ಕಚ್ಚಾ ವಸ್ತುಗಳ ಬೆಲೆಗೆ ಬದಲಾಗಿ ಔಷಧಿಗಳ ಬೆಲೆಯನ್ನು ನಿಗದಿಪಡಿಸಿತ್ತು. ಈ ಕಾರಣಕ್ಕಾಗಿ, ಪ್ಯಾರೆಸಿಟಮಾಲ್ 650 ಮಿಗ್ರಾಂ ಬೆಲೆಯು ಪ್ಯಾರೆಸಿಟಮಾಲ್ 500 ಮಿಗ್ರಾಂಗಿಂತ ದ್ವಿಗುಣವಾಗಿದೆ ಎಂದು ತಿಳಿಸಿದ್ದಾರೆ.
Dolo-650 ಕಂಪನಿ Microlabs ಅನ್ನು ಸಮರ್ಥಿಸಿಕೊಂಡಿರುವ ನವೀನ್ ಜೈನ್, Dolo-650 ಅನ್ನು ಹೊರತುಪಡಿಸಿ, 650 mg ಪ್ಯಾರೆಸಿಟಮಾಲ್ ಅನ್ನು ತಯಾರಿಸುವ ಇತರ ಕಂಪನಿಗಳು ತಮ್ಮ ಪ್ಯಾರೆಸಿಟಮಾಲ್ 650 mg ಔಷಧಿಯನ್ನು ಮೈಕ್ರೋಲ್ಯಾಬ್ಸ್ ಡೋಲೋವನ್ನು ಮಾರಾಟ ಮಾಡುವ ಬೆಲೆಯಂತೆಯೇ ಮಾರಾಟ ಮಾಡುತ್ತವೆ. ಅಲ್ಲದೆ, 650 ಮಿಗ್ರಾಂ ಪ್ಯಾರೆಸಿಟಮಾಲ್ ಬೆಲೆ ಸರ್ಕಾರದ ನಿಯಂತ್ರಣದಿಂದ ಹೊರಗಿದೆ ಎಂದು ಹೇಳಿರುವುದು ತಪ್ಪು ಕಲ್ಪನೆ ಎಂದಿದ್ದಾರೆ.
ಇದನ್ನೂ ಓದಿ- ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಮತ್ತೆ ವಿದ್ಯಾರ್ಥಿ ವೀಸಾ ನೀಡಲಿದೆ ಚೀನಾ
ಕರೋನಾ ನಂತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆ:
ಪ್ಯಾರೆಸಿಟಮಾಲ್ ಔಷಧಿಯನ್ನು ತಯಾರಿಸುವ ಔಷಧೀಯ ಕಂಪನಿಗಳ ಮತ್ತೊಂದು ಸಮಸ್ಯೆಯನ್ನು ಪ್ರಸ್ತಾಪಿಸಿದ ನವೀನ್ ಜೈನ್, ಕರೋನಾ ಮೊದಲು, ಪ್ಯಾರೆಸಿಟಮಾಲ್ ಔಷಧವನ್ನು ತಯಾರಿಸಲು ಕಚ್ಚಾ ವಸ್ತುವು ಕೆಜಿಗೆ ಸುಮಾರು 300 ರೂ.ಗಳಷ್ಟಿತ್ತು, ಅದು ಇಂದು ಕೆಜಿಗೆ ರೂ.850 ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ಯಾರಾಸಿಟಮಾಲ್ ಗರಿಷ್ಠ ಬೆಲೆ ಹೆಚ್ಚಿಸುವಂತೆ ಔಷಧ ಕಂಪನಿಗಳು ಸರಕಾರಕ್ಕೆ ಪತ್ರ ಬರೆದಿದ್ದರೂ ಇದುವರೆಗೂ ಸರಕಾರ ಬೆಲೆ ಏರಿಕೆ ಮಾಡಿಲ್ಲ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.