ಬೆಂಗಳೂರು: ನಟಿ ಪ್ರಿಯಾಮಣಿ ತಮ್ಮ ಪತಿ ಮುಸ್ತಾಪಾ ರಾಜ್ ನಿಂದ ವಿಚ್ಚೇದನ ಪಡೆಯುತ್ತಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಬೆನ್ನಲ್ಲೇ ಈಗ ಬಹುಭಾಷಾ ನಟಿ ಪ್ರಿಯಾಮಣಿ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರಿಯಾಮಣಿ ಮುಸ್ತಾಪಾ ರಾಜ್ ರಿಂದ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿ ತೀವ್ರಗೊಂಡಿತ್ತು, ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ಈ ವದಂತಿಗಳು ಆಧಾರರಹಿತವಾಗಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: PNB ಗ್ರಾಹಕರೇ ಆಗಸ್ಟ್ 31ರ ಮೊದಲು ಈ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಿ
ಸಾಮಾನ್ಯವಾಗಿ ಸಿನಿರಂಗದಲ್ಲಿ ಮದುವೆಯಾದ ನಂತರ ನಟಿಯರು ತೆರೆಮರೆಗೆ ಸರಿಯುವುದು ಸಾಮಾನ್ಯ, ಇಂತಹ ಸಂದರ್ಭದಲ್ಲಿ ಪ್ರಿಯಾಮಣಿ ಮದುವೆಯ ನಂತರವು ತಮ್ಮನ್ನು ಹಲವು ಬಗೆಯ ಪಾತ್ರಗಳಿಗೆ ತೆರೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಅವರು ಹಿಟ್ ಟಿವಿ ಸೀರೀಸ್ ಫ್ಯಾಮಿಲಿ ಮ್ಯಾನ್ ಮತ್ತು ಆಹಾ ಮೂಲ ಭಾಮಾಕಲಾಪಂನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕನ್ನಡದ ರಿಯಾಲಿಟಿ ಷೋವೊಂದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ