Budh Rashi Parivartan 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧಗ್ರಹ ಆಗಸ್ಟ್ ತಿಂಗಳಿನಲ್ಲಿ ಎರಡು ಭಾರಿ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಜೋತಿಷ್ಯದಲ್ಲಿ ಬುಧನನ್ನು ಬುದ್ಧಿ, ವಾಣಿ ಹಾಗೂ ವಾಣಿಜ್ಯಕ್ಕೆ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಪಂಚಾಂಗದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಹೇಳಲಾಗುವ ಬುಧ ಆಗಸ್ಟ್ 21 ರಂದು ಅಂದರೆ ಭಾನುವಾರ ಸಿಂಹ ರಾಶಿಯಿಂದ ಹೊರಟು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಕನ್ಯಾ ಗೋಚರ ಎಲ್ಲಾ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಈ ಬುಧ ಗೋಚರದಿಂದ ಕನ್ಯಾ ರಾಶಿಯ ಜನರಿಗೆ ಹೆಚ್ಚಿನ ಲಾಭ ಸಿಗಲಿದೆ. ಅಂದರೆ ಕನ್ಯಾ ರಾಶಿಯ ಜನರ ಮೇಲೆ ಅತಿ ಹೆಚ್ಚು ಶುಭ ಪ್ರಭಾವವನ್ನು ಅದು ಬೀರಲಿದೆ.
ಆಗಸ್ಟ್ ತಿಂಗಳಿನಲ್ಲಿ ಎರಡು ಬಾರಿ ಬುಧನ ರಾಶಿ ಪರಿವರ್ತನೆ
ಪಂಚಾಂಗದ ಪ್ರಕಾರ ಬುಧ ಆಗಸ್ಟ್ ತಿಂಗಳಿನಲ್ಲಿ ಒಟ್ಟು ಎರಡು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಆಗಸ್ಟ್ 1 ರಂದು ಬೆಳಂಬೆಳಗ್ಗೆ 3.45ಕ್ಕೆ ಈಗಾಗಲೇ ಬುಧ ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ ಹಾಗೂ ಇದುವರೆಗೂ ಕೂಡ ಆತ ಅಲ್ಲಿಯೇ ವಿರಾಜಮಾನನಾಗಿದ್ದಾನೆ. ಇದೀಗ ಆಗಸ್ಟ್ 21 ರಂದು ಎರಡನೇ ಬಾರಿಗೆ ಬುಧ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಗೆ ಬುಧ ರಾಷ್ಯಾಧಿಪತಿ. ಹೀಗಾಗಿ ಆಗಸ್ಟ್ 21 ರಂದು ಬುಧ ತನ್ನ ಸ್ವರಾಶಿಯಲ್ಲಿಯೇ ಗೋಚರಿಸಲಿದ್ದಾನೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-Name Astrology: ಈ ಹೆಸರು ಹೊಂದಿರುವ ಹುಡುಗಿಯರು ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ
ಕನ್ಯಾ ರಾಶಿಯಲ್ಲಿ ಬುಧನ ಸ್ಥಿತಿ
ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಕನ್ಯಾ ರಾಶಿಯಲ್ಲಿ ಬುಧ ಉಚ್ಛನಾಗಿದ್ದರೆ, ಮೀನ ರಾಶಿಯಲ್ಲಿ ನೀಚನಾಗಿರುತ್ತಾನೆ. ಹೀಗಾಗಿ ಬುಧನ ಕನ್ಯಾ ಗೋಚರದಿಂದ ಜನರ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಹಾಗೂ ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಉಂಟಾಗಲಿದೆ.
ಇದನ್ನೂ ಓದಿ-Astro Tips: ವ್ಯಕ್ತಿಯನ್ನು ಸಾಲದ ಸುಲಿಗೆ ಸಿಲುಕಿಸುತ್ತವೆ ಈ ಮೂರು ಗ್ರಹಗಳು, ಬಡತನ ನಿವಾರಣೆಗೆ ಈ ಕೆಲಸ ಮಾಡಿ
ಬುಧ ಗೋಚರದಿಂದ ಕನ್ಯಾ ರಾಶಿಯ ಜಾತಕದವರ ಮೇಲೆ ಏನು ಪ್ರಭಾವ
ಕನ್ಯಾ ರಾಶಿಯಲ್ಲಿ ಬುಧ ಗೋಚರ ಕನ್ಯಾ ರಾಶಿಯವರಿಗೆ ಬಹಳ ಒಳ್ಳೆಯ ಸಮಯವನ್ನು ತರಲಿದೆ. ಈ ಸಮಯದಲ್ಲಿ ಈ ರಾಶಿಯನ್ನು ಹೊಂದಿದ ಜನರಿಗೆ ಶುಭ ಸಮಾಚಾರಗಳು ಪ್ರಾಪ್ತಿಯಾಗಲಿವೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಕನ್ಯಾ ರಾಶಿಯ ಜನರು ಸಮಾಜದಲ್ಲಿ ಘನತೆ ಮತ್ತು ಗೌರವವನ್ನು ಪಡೆಯುತ್ತಾರೆ. ಅವರ ಸುಖ ಸಮೃದ್ಧಿ ,ಸಂಪತ್ತು ಮತ್ತು ಸಂತೋಷ ಹೆಚ್ಚಾಗಲಿದೆ. ಉದ್ಯೋಗ ಮಾಡುವವರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಉದ್ಯೋಗ ಹುಡುಕುತ್ತಿರುವ ಜನರಿಗೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.