ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಾಲೇಜು ವಿದ್ಯಾರ್ಥಿ ಅರ್ಬಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳ ಪೈಕಿ 6 ಮಂದಿಯನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಾದ್, ಸಫಾನ್ ಉಲ್ಲಾಖಾನ್, ಜೈನುಲ್ಲಾಖಾನ್, ಸೈಯದ್ ಫೈಸಲ್, ಅನಾಸ್ ಖಾನ್, ಜೈದ್ ಖಾನ್ ಬಂಧಿತರು. ಎಸ್ಕೇಪ್ ಆಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಕೊಲೆಗೆ ಕಾರಣವೇನೂ ಎಂಬ ವಿಷಯ ಗೊತ್ತಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಈ ಹತ್ಯೆ ನಡೆದಿದೆ. ಆರೋಪಿ ಮಹಮ್ಮದ್ ಸಾದ್ ಎಚ್.ಬಿ.ಆರ್ ಲೇಔಟ್ ಪ್ರೊವಿನ್ಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿಯಾಗಿದ್ದ.
ಆಗಸ್ಟ್ 11 ರಂದು ಕಾಲೇಜಿನಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಾದ್ ಡಾನ್ಸ್ ಮಾಡಿದ್ದ. ಈ ವೇಳೆ ಸಾದ್‌ಗೆ ಕೊಲೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ಹಾಗೂ ಗೆಳೆಯರು ಚುಡಾಯಿಸಿ, ನೀನು ಕಾಲೇಜಿನ ವಿದ್ಯಾರ್ಥಿಯಲ್ಲ ಏಕೆ ಬಂದಿದೀಯಾ ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಸಹ ಬೆಳೆದು ಸಾದ್ ಅರ್ಬಾಜ್ ಹಾಗೂ ಸ್ನೇಹಿತರಿಗೆ ವಾರ್ನ್ ಮಾಡಿ ಹೋಗಿದ್ದ. ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗುವ ಬಗ್ಗೆ ಕಾಲೇಜು ಮ್ಯಾನೇಜ್‌ಮೆಂಟ್ ಗಮನಕ್ಕೆ ಬಂದಿತ್ತು. ಆಡಳಿತ ಮಂಡಳಿ ಸಹ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳುವ ಕೆಲಸ ಮಾಡಿತ್ತು. ಆದರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮತ್ತೊಂದು ಕಡೆ ಅರ್ಬಾಜ್ ಹಾಗೂ ಗೆಳೆಯರ ಮೇಲೆ ರೊಚ್ಚಿಗೆದ್ದಿದ್ದ ಸಾದ್ ಕಾರ್ಯಕ್ರಮದ ಮಾರನೇ ದಿನ ತನ್ನ ಜೊತೆ ಏಳು ಮಂದಿ ಕರೆದುಕೊಂಡು ಬಂದಿದ್ದ. ಕಾಲೇಜು ಬಳಿ ಪಿಯುಸಿ ಹಾಗೂ ಡಿಗ್ರಿ ಹುಡುಗರ ನಡುವೆ ಮಾರಾಮಾರಿ ಶುರುವಾಗಿತ್ತು. ಗಲಾಟೆ ಅತಿರೇಕಕ್ಕೆ ತಿರುಗಿ ಆರೋಪಿ ಸಾದ್, ಅರ್ಬಾಜ್ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದ.
ಇದನ್ನೂ ಓದಿ : Karnataka: ಬಾಡಿಗೆ ಮನೆ ಸಿಗದೆ ದಯಾಮರಣಕ್ಕೆ ಮುಂದಾದ ತೃತೀಯಲಿಂಗಿ..!
ಕೊಲೆಗೆ ಬಳಸಿದ ವೆಪನ್ ನೋಡಿ ಪೊಲೀಸರೆ ಶಾಕ್
ಅರ್ಬಾಜ್ ಕೊಲೆಗೆ ಆರೋಪಿ ಸಾದ್ ಬಳಸಿದ ಹತ್ಯೆಗೆ ಬಳಸಿದ ವೆಪನ್ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಯಾಕೆಂದ್ರೆ ಸಾದ್ ಬಳಸಿದ್ದು ಪೆನ್ನಿನ ಹಿಂಭಾಗದಲ್ಲಿ ಚೂರಿಯನ್ನ. ಆಶ್ಚರ್ಯ ಎನ್ನಿಸಿದ್ರು ಇದು ಸತ್ಯ. ಇದೇ ವರ್ಷ ಫೆಬ್ರವರಿಯಲ್ಲಿ ಸಾದ್ ಆನ್‌ಲೈನ್‌ನಲ್ಲಿ ಈ ಪೆನ್ನನ್ನು ದೆಹಲಿಯಿಂದ ತರಿಸಿದ್ದ. ಇದೇ ಪೆನ್ನು ಬಳಸಿ ಈಗ ಅರ್ಬಾಜ್‌ನನ್ನು ಹತ್ಯೆ ಮಾಡಿದ್ದಾನೆ. ಈ ಹಿಂದೆ ಯಾವ ಹಂತಕರು ಸಹ ಇಂತಹ ಪೆನ್ ವೆಪನ್ ಬಳಸಿ ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೂ ಮಾಹಿತಿ ಇಲ್ಲಾ. ಸದ್ಯ ಕೊಲೆಗೆ ಬಳಸಿದ ಪೆನ್ ವೆಪನನ್ನು ಸಹ ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಯಸ್ಸು ಬಚ್ಚಿಟ್ಟು ಮದುವೆಯಾದ ಪತ್ನಿ ಕೊಂದು ಶಿರಾಡಿ ಘಾಟ್‌ನಲ್ಲಿ ಎಸೆದ ಪತಿರಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.