ಭಾರತ-ಪಾಕ್ ಪರಮಾಣು ಯುದ್ಧ ನಡೆದರೆ 2 ಬಿಲಿಯನ್ ಜನರ ಪ್ರಾಣ ಹೋಗುತ್ತೆ! ವರದಿಯಲ್ಲಿ ಮಾಹಿತಿ ಬಹಿರಂಗ

ಉಕ್ರೇನ್‌ನೊಂದಿಗೆ ಯುದ್ಧ ಪ್ರಾರಂಭವಾದಾಗ, ಅಮೆರಿಕದ ಹಸ್ತಕ್ಷೇಪದ ಜೊತೆ ಪರಮಾಣು ದಾಳಿ ಮಾಡುವ ಬೆದರಿಕೆಯನ್ನು ರಷ್ಯಾ ಹಾಕಿತು. ಮತ್ತೊಂದೆಡೆ, ಚೀನಾ ಕೂಡ ಪರಮಾಣು ಹೊಂದಿರುವ ರಾಷ್ಟ್ರವಾಗಿದ್ದು, ತೈವಾನ್‌ನಿಂದಾಗಿ ಅದು ಅಮೆರಿಕದೊಂದಿಗೆ ಹೋರಾಡುತ್ತಿದೆ.

Written by - Bhavishya Shetty | Last Updated : Aug 17, 2022, 10:02 AM IST
    • ಎರಡು ಮಹಾಶಕ್ತಿಗಳು ಡಿಕ್ಕಿ ಹೊಡೆದರೆ ಪರಮಾಣು ದಾಳಿಯ ಭೀತಿ ಉಂಟಾಗುತ್ತದೆ.
    • ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ಪರಮಾಣು ಯುದ್ಧದ ಬೆದರಿಕೆ ಆಗಾಗ್ಗೆ ಕಂಡುಬರುತ್ತದೆ
    • ಇದಕ್ಕೆ ಸಂಬಂಧಿಸಿ ರಟ್ಜರ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಧ್ಯಯನ ಮಾಹಿತಿಯನ್ನು ನೀಡಿದೆ
ಭಾರತ-ಪಾಕ್ ಪರಮಾಣು ಯುದ್ಧ ನಡೆದರೆ 2 ಬಿಲಿಯನ್ ಜನರ ಪ್ರಾಣ ಹೋಗುತ್ತೆ! ವರದಿಯಲ್ಲಿ ಮಾಹಿತಿ ಬಹಿರಂಗ title=
nuclear india

ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ 7 ತಿಂಗಳಿನಿಂದ ಯುದ್ಧ ನಡೆಯುತ್ತಿದ್ದು, ಚೀನಾ ಮತ್ತು ತೈವಾನ್ ನಡುವೆ ಯುದ್ಧದ ಸಾಧ್ಯತೆ ಕಂಡುಬರುತ್ತಿದೆ. ಈ ಎರಡೂ ಬಿಕ್ಕಟ್ಟುಗಳು ಇಡೀ ಜಗತ್ತನ್ನು ಎರಡು ಬಣಗಳಾಗಿ ವಿಂಗಡಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಪರಿಸ್ಥಿತಿಯು ಮಹಾಯುದ್ಧ ಮತ್ತು ಪರಮಾಣು ದಾಳಿಯ ಕಡೆ ತಿರುಗಿ ನೋಡಿವಂತೆ ಮಾಡುತ್ತದೆ. 

ಇದನ್ನೂ ಓದಿ: ಆಧಾರ್ ಕಾರ್ಡ್ ಮೂಲಕ ಪಡೆಯಬಹುದು 5 ಲಕ್ಷದವರೆಗೆ ಲೋನ್ ? ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಇಲ್ಲಿದೆ

ಉಕ್ರೇನ್‌ನೊಂದಿಗೆ ಯುದ್ಧ ಪ್ರಾರಂಭವಾದಾಗ, ಅಮೆರಿಕದ ಹಸ್ತಕ್ಷೇಪದ ಜೊತೆ ಪರಮಾಣು ದಾಳಿ ಮಾಡುವ ಬೆದರಿಕೆಯನ್ನು ರಷ್ಯಾ ಹಾಕಿತು. ಮತ್ತೊಂದೆಡೆ, ಚೀನಾ ಕೂಡ ಪರಮಾಣು ಹೊಂದಿರುವ ರಾಷ್ಟ್ರವಾಗಿದ್ದು, ತೈವಾನ್‌ನಿಂದಾಗಿ ಅದು ಅಮೆರಿಕದೊಂದಿಗೆ ಹೋರಾಡುತ್ತಿದೆ. ಇಲ್ಲಿ ಎರಡು ಮಹಾಶಕ್ತಿಗಳು ಡಿಕ್ಕಿ ಹೊಡೆದರೆ ಪರಮಾಣು ದಾಳಿಯ ಭೀತಿ ಉಂಟಾಗುತ್ತದೆ.

ಇನ್ನು ಏಷ್ಯಾದಲ್ಲಿಯೇ ಭಾರತ ಮತ್ತು ಪಾಕಿಸ್ತಾನಗಳಿವೆ. ಈ ಎರಡೂ ರಾಷ್ಟ್ರಗಳ ನಡುವೆ ಪರಮಾಣು ಯುದ್ಧದ ಬೆದರಿಕೆ ಆಗಾಗ್ಗೆ ಕಂಡುಬರುತ್ತಿದೆ. ಈ ಅಪಾಯಗಳ ನಡುವೆ, ರಟ್ಜರ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ಅಧ್ಯಯನವು ದೊಡ್ಡ ವಿಚಾರವೊಂದನ್ನು ಬಹಿರಂಗಪಡಿಸಿದೆ. ರಷ್ಯಾ ಮತ್ತು ಅಮೆರಿಕ, ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ನಡೆದರೆ ಪರಿಸ್ಥಿತಿ ಏನಾಗಬಹುದು ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ರಷ್ಯಾ ಮತ್ತು ಅಮೆರಿಕ ಘರ್ಷಣೆಯಾದರೆ, ವಿಶ್ವದ ಜನಸಂಖ್ಯೆಯ ನಾಲ್ಕನೇ ಮೂರು ಭಾಗದಷ್ಟು ಜನರು ಸಾಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೇಚರ್ ಫುಡ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಜಾಗತಿಕ ಅಣುಬಾಂಬ್‌ಗಳ ಸಂಗ್ರಹಣೆಯ 3% ಕ್ಕಿಂತ ಕಡಿಮೆ ಯುದ್ಧದಲ್ಲಿ ಬಳಸಿದರೆ, ಎರಡು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸಾಯಬಹುದು. ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಪರಮಾಣು ಯುದ್ಧ ಸಂಭವಿಸಿದರೆ, ವಿಶ್ವದ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ಒಂದೇ ಸಮಯದಲ್ಲಿ ಸಾಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಇದಲ್ಲದೆ, 5 ಶತಕೋಟಿಗೂ ಹೆಚ್ಚು ಜನರು ಹಸಿವಿನಿಂದ ಸಾಯುತ್ತಾರೆ ಎಂದು ಆತಂಕದ ಮುನ್ಸೂಚನೆಯನ್ನು ನೀಡಿದ್ದಾರೆ.

ಈ ಅಧ್ಯಯನದ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಯುದ್ಧವು ಒಂದು ವಾರಕ್ಕಿಂತ ಕಡಿಮೆ ಅವಧಿಯವರೆಗೆ ಇರುತ್ತದೆ. ಇದರಲ್ಲಿ 5 ರಿಂದ 12.5 ಮಿಲಿಯನ್ ಜನರು ದಾಳಿಯ ನಂತರ ಸಾಯಬಹುದು. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಬಹುದು. ಇದು ಪ್ರಪಂಚದಾದ್ಯಂತ ಆಹಾರ ಪೂರೈಕೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಹುದು ಮತ್ತು ಪ್ರಪಂಚದಾದ್ಯಂತ ಹಸಿವಿನಿಂದ ಭಾರಿ ಸಾವುನೋವುಗಳಿಗೆ ಕಾರಣವಾಗಬಹುದು. ಪರಮಾಣು ದಾಳಿಯ ತಕ್ಷಣದ ಪರಿಣಾಮವಾಗಿ ಸುಮಾರು 2 ಬಿಲಿಯನ್ ಜನರು ಸಾಯಬಹುದು ಎಂದು ಸಂಶೋಧನೆ ಹೇಳಿದೆ. ಸಂಶೋಧಕರು ಜೀವಹಾನಿಯ ಜೊತೆಗೆ US, ರಷ್ಯಾ, ಪಾಕಿಸ್ತಾನ ಮತ್ತು ಭಾರತದ ಆಹಾರ ಉತ್ಪಾದನೆಯ ಮೇಲೆ ವಿವಿಧ ಗಾತ್ರದ ಪರಮಾಣು ಸಂಘರ್ಷಗಳ ಪರಿಣಾಮ ಉಂಟಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.  

ಇದನ್ನೂ ಓದಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ - ಇಬ್ಬರು ಸಾವು , 15 ಕ್ಕೂ ಹೆಚ್ಚು ಮಂದಿಗೆ ಗಾಯ

ಇದು ಮಾತ್ರವಲ್ಲದೆ, ಪರಮಾಣು ಯುದ್ಧದ ನಂತರ ಜಾಗತಿಕ ಆಹಾರ, ಪ್ರಾಣಿ ಮತ್ತು ಮೀನು ಉತ್ಪಾದನೆಯು ಮೂರರಿಂದ ನಾಲ್ಕು ವರ್ಷಗಳ ನಂತರ 90 ಪ್ರತಿಶತದಷ್ಟು ಕುಸಿಯಬಹುದು. ಇದರಿಂದ ಹಸಿವು ಹೆಚ್ಚಾಗುತ್ತದೆ. ಶೀತಲ ಸಮರದ ಅಂತ್ಯದ 30 ವರ್ಷಗಳ ನಂತರ, ಪರಮಾಣು ಯುದ್ಧದ ಸಾಧ್ಯತೆಯು ಎಂದಿಗಿಂತಲೂ ಹೆಚ್ಚಾಗಿದೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಕೂಡ 'ಒಮ್ಮೆ ಊಹಿಸಲೂ ಸಾಧ್ಯವಾಗದ ಪರಮಾಣು ಸಂಘರ್ಷದ ಸಾಧ್ಯತೆಯು ಈಗ ಮತ್ತೆ ಸಾಧ್ಯತೆಯ ಕ್ಷೇತ್ರಕ್ಕೆ ಮರಳಿದೆ' ಎಂದು ಎಚ್ಚರಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News