ನವದೆಹಲಿ: ಇನ್ನು ಕೆಲವು ದಿನಗಳಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಮಯದಲ್ಲಿ ಈ ರಾಜ್ಯಗಳ ನಾಯಕರು ಸಾಕಷ್ಟು ಸಕ್ರಿಯರಾಗಿದ್ದಾರೆ. ನಾಯಕರುಗಳಿಗಿಂತ ಹೆಚ್ಚಾಗಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಎಡಿಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, 'ಬಾಹುಬಲಿ' ಚಿತ್ರದ ಕೆಲವು ದೃಶ್ಯಗಳನ್ನು ತೆಗೆದುಕೊಂಡು, ಕಾಂಗ್ರೆಸ್ ಮುಖಂಡರ ಮತ್ತು ಶಿವರಾಜ್ ಸಿಂಗ್ ಮುಖವನ್ನು ಹಾಕಿ ಎಡಿಟ್ ಮಾಡುವ ಮೂಲಕ ಅವರು ವಿಸ್ಮಯಕರ ವಿಡಿಯೋವನ್ನು ಮಾಡಿದರು.
ತಮ್ಮ ಖಾತೆಯಲ್ಲಿ ವೀಡಿಯೊ ಹಂಚಿಕೊಂಡ ಟ್ವಿಟರ್ ಬಳಕೆದಾರರಾದ ಜೈ ಶ್ರೀ ರಾಮ್ ಅವರು ಮಧ್ಯಪ್ರದೇಶ ಚುನಾವಣೆಗಳ ಸೃಜನಾತ್ಮಕ ಪ್ರಯತ್ನಗಳನ್ನು ಬರೆದಿದ್ದಾರೆ. ಮಧ್ಯಪ್ರದೇಶದ ಬಾಹುಬಲಿ ಶಿವರಾಜ್ ಸಿಂಗ್ ಚೌಹಾಣ್ರನ್ನು ಭೇಟಿ ಮಾಡಿ ಎಂದು ರಾಜ್ಯದ ಮುಖ್ಯಮಂತ್ರಿಯವರನ್ನು ಕೂಡ ಈ ಪೋಸ್ಟ್ನಲ್ಲಿ ಟ್ಯಾಗ್ ಮಾಡಲಾಗಿದೆ.
Creativity in overdrive ahead of the Madhya Pradesh elections. Here’s one which posits @ChouhanShivraj as MP Ka Bahubali. pic.twitter.com/ITXLgbuBVA
— जय श्री राम (@amarbansal241) August 31, 2018
ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಯಾರಿಗಾಗಿ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಹಣಾಹಣೆಗೆ ಸಜ್ಜಾಗಿವೆ.