ಇದೀಗ ಮೀನ ರಾಶಿಯಲ್ಲಿರುವ ಗುರುವು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಬೆಳಗಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
Jupiter Transit: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದ್ದರೆ ಅವರ ವೈವಾಹಿಕ ಜೀವನ ಸಂತಸಮಯವಾಗಿರುವುದರ ಜೊತೆಗೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಶುಭ ಸ್ಥಾನದಲ್ಲಿರುವ ಗುರುವು ಆ ವ್ಯಕ್ತಿಯ ಅದೃಷ್ಟವನ್ನು ಬೆಳಗುತ್ತಾನೆ ಎಂದು ಹೇಳಲಾಗುತ್ತದೆ. ಇದೀಗ ಮೀನ ರಾಶಿಯಲ್ಲಿರುವ ಗುರುವು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಬೆಳಗಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗುರು ರಾಶಿ ಪರಿವರ್ತನೆ: ಈ ವರ್ಷದ ಏಪ್ರಿಲ್ನಲ್ಲಿ ಗುರು ಗ್ರಹವು ರಾಶಿಯನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶಿಸಿತ್ತು. ಈಗ ಗುರುವು 1 ವರ್ಷ ಮೀನ ರಾಶಿಯಲ್ಲಿರುತ್ತಾನೆ ಮತ್ತು ಈ ಸಮಯದಲ್ಲಿ ಗುರು ಗ್ರಹವು ಮೂರು ರಾಶಿಯ ಜನರಿಗೆ ಆಶೀರ್ವಾದವನ್ನು ಸುರಿಸಲಿದ್ದು ವರ್ಷಪೂರ್ತಿ ಹಣದ ಮನೆ ಸುರಿಸಲಿದ್ದಾನೆ. ಅವರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ವೃಷಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ಮೀನ ರಾಶಿಯಲ್ಲಿ ಸಂಕ್ರಮಿಸುವುದರಿಂದ ವೃಷಭ ರಾಶಿಯ ಭವಿಷ್ಯ ಉಜ್ವಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಈ ಸಮಯದಲ್ಲಿ ನೀವು ರಾಜಯೋಗವನ್ನು ಪಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿ: ಮೀನ ರಾಶಿಗೆ ಗುರು ಪ್ರವೇಶವು ಮಿಥುನ ರಾಶಿಯವರ ಜೀವನವನ್ನು ಆನಂದದಿಂದ ತುಮ್ಬಿಸಲಿದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶಗಳು ಲಭಿಸಲಿವೆ. ವ್ಯಾಪಾರ-ವ್ಯವಹಾರವು ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಕರ್ಕಾಟಕ ರಾಶಿ : ಗುರುವು ಮೀನ ರಾಶಿಯನ್ನು ಪ್ರವೇಶಿಸುವುದರಿಂದ, ಕರ್ಕ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಅಂತಹ ಸಮಯದಲ್ಲಿ, ನಿಮ್ಮ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.