CWG 2022: ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದು ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. ಇದುವರೆಗೆ ಭಾರತ ಈ ಪಂದ್ಯಾವಳಿಯಲ್ಲಿ ಒಟ್ಟು 49 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಸ್ಕ್ವ್ಯಾಷ್ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತದ ಸೌರವ್ ಘೋಶಾಲ್ ಹಾಗೂ ದೀಪಿಕಾ ಪಲ್ಲಿಕಲ್ ಜೋಡಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಇದು ಭಾರತದ ಪಾಲಿಗೆ ಈ ಪಂದ್ಯಾವಳಿಯಲ್ಲಿ 50ನೇ ಪದಕವಾಗಿದೆ.
#CommonwealthGames2022 | India's Saurav Ghosal & Dipika Pallikal win a bronze medal in mixed doubles squash
— ANI (@ANI) August 7, 2022
ಇದನ್ನೂ ಓದಿ-CWG 2022: ಪುರುಷರ ಟೇಬಲ್ ಟೆನ್ನಿಸ್ ಡಬಲ್ಸ್ ನಲ್ಲಿ ಶರತ್ ಕಮಲ್ ಹಾಗೂ ಸಥಿಯನ್ ಗಣಸೆಕರನ್ ಗೆ ಒಲಿದ ಬೆಳ್ಳಿ
ಇಂದು ಟೇಬಲ್ ಟೆನ್ನಿಸ್ ವಿಭಾಗದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತದ ಶರತ್ ಕಮಲ್ ಹಾಗೂ ಸಥಿಯನ್ ಜೋಡಿ ಪುರುಷರ ಡಬಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಮತ್ತೊಂದೆಡೆ ಶರತ್ ಕಮಲ್ ಅಚಂತಾ ಅವರು ಟೇಬಲ್ ಟೆನ್ನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಫೈನಲ್ ಹಂತಕ್ಕೆ ತಲುಪಿದ್ದು, ತನ್ನ ಮುಂದಿನ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸಲಿದ್ದಾರೆ.
#CommonwealthGames2022 | India's Sharath Kamal Achanta qualify for men's singles final in Table tennis, to fight for Gold
— ANI (@ANI) August 7, 2022
#CommonwealthGames2022 | India's G Sathiyan loses to England's Liam Pitchford in table tennis men's singles semi-final, to play for bronze
— ANI (@ANI) August 7, 2022
ಇದನ್ನೂ ಓದಿ- CWG 2022: ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಒಲಿದ ಮತ್ತೊಂದು ಚಿನ್ನ, ನಿಕಹತ್ ಜರೀನ್ ಅದ್ಭುತ ಸಾಧನೆ
ಕೆಲವು ಸಮಯದ ಮುಂಚೆಯೇ ಭಾರತೀಯ ಬಾಕ್ಸರ್ ಆಗಿರುವ ನಿಖಹತ್ ಜರೀನ್ ಅವರು ಕೂಡ ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.