Students fight Viral Video: ಶಾಲೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯೆ ನೀಡಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವವನ್ನು ಪಡೆಯುವಂತೆ ಮಾಡುತ್ತದೆ. ಪರಸ್ಪರ ಗೌರವಿಸಲು ನಮಗೆ ಕಲಿಸಲಾಗುತ್ತದೆ. ಆದರೆ ಶಾಲೆಯಲ್ಲಿಯೇ ವಿದ್ಯಾರ್ಥಿಗಳು ಕೆಟ್ಟದಾಗಿ ಹೊಡೆದಾಡಿಕೊಂಡರೆ ಅದೆಂಥ ದುಸ್ಥಿತಿ ಅಲ್ಲವೇ! ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಜಗಳವಾಡುತ್ತಿದ್ದಾರೆ. ಇದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಕೆಟ್ಟದಾಗಿ ಬೈದುಕೊಳ್ಳುತ್ತಿದ್ದಾರೆ. ಇವರ ಈ ಜಡೆ ಜಗಳ ಕಂಡು ಅಲ್ಲಿದ್ದ ಶಿಕ್ಷಕರೇ ದಂಗಾಗಿದ್ದಾರೆ. ಶಾಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಜುಟ್ಟು ಹಿಡಿದುಕೊಂಡು ಜಗಳವಾಡುವ ಈ ದೃಶ್ಯ ಕಂಡು ನೆಟ್ಟಿಗರೂ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ, ಶಿಕ್ಷಕರು ಇರುವ ಭಯವೂ ಇಲ್ಲದೆಯೇ ಈ ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುತ್ತಿರುವುದು ನೋಡುವವರಿಗೆ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!
ಶಿಕ್ಷಕರ ಮುಂದೆಯೇ ಜಗಳ :
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕೆಲವೇ ಸೆಕೆಂಡುಗಳದ್ದಾಗಿದೆ. ಇಬ್ಬರೂ ವಿದ್ಯಾರ್ಥಿನಿಯರು ಜಗಳವಾಡುವಾಗ ಪರಸ್ಪರ ಹೊಡೆದಾಡುಕೊಳ್ಳುತ್ತಾರೆ. ವಾಸ್ತವವಾಗಿ, ಮೊದಲಿಗೆ ಬಾಯಿ ಮಾತಿನಲ್ಲಿ ಜಗಳ ಶುರು ಮಾಡುವ ವಿದ್ಯಾರ್ಥಿನಿಯರು. ವಾಗ್ವಾದದ ಮಧ್ಯೆ, ಹುಡುಗಿಯರು ಇದ್ದಕ್ಕಿದ್ದಂತೆ ಒಬ್ಬರನ್ನೊಬ್ಬರು ಹೊಡೆಯಲು ಪ್ರಾರಂಭಿಸಿದರು. ಇದರಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಾರೆ. ಕೂದಲನ್ನು ಎಳೆದುಕೊಂಡು ಒಬ್ಬರನ್ನೊಬ್ಬರು ಬಡಿದುಕೊಳ್ಳುತ್ತಾರೆ. ತರಗತಿಗೆ ಟೀಚರ್ ಬಂದರೂ ಇಬ್ಬರೂ ಒಬ್ಬರನ್ನೊಬ್ಬರು ಹೊಡೆಯುತ್ತಲೇ ಇರುತ್ತಾರೆ. ಇವರಿಬ್ಬರ ಜಗಳ ನೋಡಿ ಟೀಚರ್ ಕೂಡ ಬೆಚ್ಚಿಬಿದ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. bhutni_ke_memes ಹೆಸರಿನ ಪುಟದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ನೆಟಿಜನ್ಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral Video: ಜಲಪಾತದ ಬಳಿ ಫೋಟೋಗೆ ಪೋಸ್ ನೀಡುತ್ತಿದ್ದ ಯುವಕನಿಗೆ ಏನಾಯ್ತು ನೋಡಿ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.