ಬೆಂಗಳೂರು : ಹೆಂಡ್ತಿ ಮಾಡಿದ ಕಬಾಬ್ ರುಚಿಯಾಗಿಲ್ಲ ಅಂತಾ ಗಂಡ ನೇಣಿಗೆ ಶರಣಾದ ಘಟನೆ ನಡೆದಿದೆ.
ಇದು ವಿಚಿತ್ರ, ಆದ್ರೂ ಸತ್ಯ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಂ.ಸುರೇಶ್(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಈತ ಸುರೇಶ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಶಾಲಿನಿಗೆ ಕಬಾಬ್ ಮಾಡಲು ಹೇಳಿದ್ದ.ಕಬಾಬ್ ತಿಂದು ಟೆಸ್ಟ್ ಇಲ್ಲ ಅಂತಾ ಗಲಾಟೆ ಮಾಡಿ ಪತ್ನಿ ಶಾಲಿನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದ. ಸದ್ಯ ಪತ್ನಿ ಶಾಲಿನಿ ಹೊಡೆತ ತಿಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಇದನ್ನೂ ಓದಿ-JioFi ಖರೀದಿಯ ಮೇಲೆ ರೂ.1500 ಕ್ಯಾಶ್ ಬ್ಯಾಕ್, ಇಂದೇ ಈ ಅದ್ಭುತ ಕೊಡುಗೆಯ ಲಾಭ ಪಡೆಯಿರಿ
ಪೊಲೀಸರಿಗೆ ಪತ್ನಿ ಗಂಡನ ವಿರುದ್ಧ ಹೇಳಿಕೆ ನೀಡಿದ್ದಾಳೆ.ಈ ಹಿನ್ನೆಲೆ ಬನ್ನೇರುಘಟ್ಟ ಪೊಲೀಸರು ಸುರೇಶ್ಗೆ ಹುಡಕಾಟ ನಡೆಸಿದ್ದಾರೆ.ಆದರೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ್ ಮೃತದೇಹ ಪತ್ತೆಯಾಗಿದೆ. ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.