ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಭಾರೀ ಮಳೆಯಾಗಿದೆ. ಕೈವಾರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗಳಲ್ಲಿದ್ದ ದವಸ ಧಾನ್ಯ ಹಾನಿಯಾಗಿವೆ. ಮಹಾಮಳೆಯಿಂದ ರಾತ್ರಿಯಿಡೀ ಗ್ರಾಮಸ್ಥರು ಜಾಗರಣೆ ಮಾಡುವಂತಾಗಿದೆ.