ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಮತ್ತು ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಮೇಲೆ ಸಶಸ್ತ್ರ ಸಜ್ಜಿತ ವ್ಯಕ್ತಿಯೊಬ್ಬರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು " ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅವನ್ನನ್ನು ಕೊಲ್ಲಲು ಪ್ರಯತ್ನಿಸಿವೆ" ಎಂದು ಆರೋಪಿಸಿದ್ದಾರೆ.
On my way to Mahua, an armed person held my hand and was unwilling to leave. This is a conspiracy by RSS and BJP to kill me. MLA, ministers are not safe here, how can commoners be safe? The attacker is yet to be nabbed: RJD leader Tej Pratap Yadav #Bihar (22.8.2018) pic.twitter.com/JpvMMzZnHl
— ANI (@ANI) August 22, 2018
ಈ ಘಟನೆಯನ್ನು ವಿವರಿಸಿರುವ ತೇಜ್ ಪ್ರತಾಪ್ "ಮಹುವಾಗೆ ಹೋಗುವ ದಾರಿಯಲ್ಲಿ, ಶಸ್ತ್ರಸಜ್ಜಿತ ವ್ಯಕ್ತಿಯೋಬ್ಬನು ನನ್ನ ಕೈಯನ್ನು ಬಿಡಲಿಲ್ಲ , ಇದು ಆರ್ಎಸ್ಎಸ್ ಮತ್ತು ಬಿಜೆಪಿಗಳಿಂದ ನನ್ನನ್ನು ಹತ್ಯೆ ಮಾಡುವ ಪಿತೂರಿಯಾಗಿದೆ, ಎಂಎಲ್ಎ, ಮಂತ್ರಿಗಳು ಇಲ್ಲಿ ಸುರಕ್ಷಿತವಾಗಿಲ್ಲ, ಇನ್ನು ಜನ ಸಾಮಾನ್ಯರಿಗೆ ಹೇಗೆ ಸುರಕ್ಷಿತವಾಗಬಹುದು" ಎಂದು ಯಾದವ್ ಆರೋಪಿಸಿದ್ದಾರೆ.
ಹಲ್ಲೆ ಮಾಡಲು ಪ್ರಯತ್ನಿಸಿದವರನ್ನು ನ್ನೂ ಬಂಧಿಸಬೇಕಿದೆ ಎಂದೂ ಅವರು ತಿಳಿಸಿದರು.