ನಮ್ಮ ಹಿರಿಯರು ಯಾವಾಗಲೂ ನಮ್ಮಲ್ಲಿ ಒಳ್ಳೆಯ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಬಾಲ್ಯದಲ್ಲಿ ದಯೆ, ನಿಸ್ವಾರ್ಥತೆ, ಒಳ್ಳೆಯ ಅಭ್ಯಾಸಗಳು, ಔದಾರ್ಯ ಮತ್ತು ಸಹಾನುಭೂತಿಯನ್ನು ಕಲಿಸಿದರೆ ಅದು ಜೀವನದುದ್ದಕ್ಕೂ ಸಹಾಯ ಮಾಡುತ್ತದೆ ಎಂಬ ನಂಬಿಕೆ. ಇದೀಗ ಈ ಮಾತುಗಳಿಗೆ ಪೂರಕ ಎಂಬಂತೆ ಶಾಲೆಯೊಂದರಲ್ಲಿ ಚಿಕ್ಕ ಮಕ್ಕಳಿಗೆ ಔದಾರ್ಯದ ರೂಪಕವನ್ನು ಮಾಡಿ ತೋರಿಸಲಾಗಿದ್ದು, ಅದನ್ನು ಆ ಕಂದಮ್ಮಗಳು ಅನುಸರಿಸಿ ಸಾರ್ವಜನಿಕ ಶಿಷ್ಟಾಚಾರದ ಬಗ್ಗೆ ಕಲಿತುಕೊಳ್ಳುವ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಟರ್ಕ್ನ ಶಿಕ್ಷಕರೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಶಿಶುವಿಹಾರದ ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ಕಿಟ್ಗಳನ್ನು ಮಾಡುವುದನ್ನು ನೋಡಬಹುದು.
ಇದನ್ನೂ ಓದಿ: 'ಒಕ್ಕಲಿಗರ ಬಗ್ಗೆ ನಾನು ಎಲ್ಲಿಯೂ ತಪ್ಪು ಮಾತನಾಡಿಲ್ಲ'
ಟ್ವಿಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಫೀಗೆನ್ ಎಂಬ ಶಿಕ್ಷಕ, 'ಇದನ್ನು ಉತ್ತಮ ಶಿಕ್ಷಣ ಎಂದು ಕರೆಯಲಾಗುತ್ತದೆ' ಎಂದು ಶೀರ್ಷಿಕೆ ನೀಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದ ಆರಂಭದಲ್ಲಿ, ಮಕ್ಕಳು ಚಲಿಸುವ ಬಸ್ನ ಸೀಟಿನಲ್ಲಿ ಕುಳಿತಿರುವ ಮಕ್ಕಳ ದೃಶ್ಯವನ್ನು ನೋಡಬಹುದು. ಎರಡು ಸಾಲುಗಳಲ್ಲಿ ಕುಳಿತು ಪ್ರಯಾಣಿಕರಂತೆ ವರ್ತಿಸುವ ಮಕ್ಕಳು, ಒಂದು ಮಗು ಬಸ್ ಚಾಲಕನ ಪಾತ್ರವನ್ನು ನಿರ್ವಹಿಸುತ್ತಿದೆ.
ಕೈಯಲ್ಲಿ ಕೋಲು ಹಿಡಿದು ಬಸ್ಸಿನೊಳಗೆ ಕಾಲಿಡುವ ಮಗುವೊಂದು ಮುದುಕನಂತೆ ವರ್ತಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಅಷ್ಟೇ ಅಲ್ಲದೆ, ಆ ಮುದುಕ ಪಾತ್ರ ಮಾಡುವ ಮಗು, ಬಸ್ಸಿನೊಳಗೆ ಖಾಲಿ ಸೀಟುಗಳಿಲ್ಲದ ಕಾರಣ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಆ ಸಮಯದಲ್ಲಿ ತನ್ನ ಲ್ಯಾಪ್ಟಾಪ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗು ಇದನ್ನು ನೋಡಿ ಮುದುಕನಿಗೆ ತನ್ನ ಸೀಟನ್ನು ನೀಡಿ ಔದಾರ್ಯ ಮೆರೆಯುತ್ತದೆ.
ವಿಡಿಯೋ ನೋಡಿ:
This is great education. ❤️pic.twitter.com/6C54y2ahQM
— Figen (@TheFigen) July 21, 2022
ಇದಾದ ನಂತರ, ವಿಡಿಯೋದಲ್ಲಿ, ಚಿಕ್ಕ ಮಗುವೊಂದು ಮಹಿಳೆಯಂತೆ ವರ್ತಿಸುತ್ತಿದ್ದು, ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬಸ್ನೊಳಗೆ ಬರುತ್ತಾರೆ. ಈ ಸಮಯದಲ್ಲಿ, ಮತ್ತೊಂದು ಮಗು ಎದ್ದು ನಿಂತು ಮಹಿಳೆಗೆ ತನ್ನ ಸೀಟ್ನ್ನು ನೀಡುತ್ತದೆ. ಗರ್ಭಿಣಿ ಮಹಿಳೆಯೊಬ್ಬರು ಬಸ್ ಹತ್ತುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇನ್ನೊಂದು ಮಗು ಆ ಮಹಿಳೆ ಪಾತ್ರಧಾರಿಗೆ ತನ್ನ ಸೀಟ್ ಅನ್ನು ನೀಡುತ್ತದೆ.
ಇದನ್ನೂ ಓದಿ: ರಾಜಕೀಯ ಪಕ್ಷಗಳು ಪಕ್ಷ ಮೀರಿ 'ರಾಷ್ಟ್ರ ಮೊದಲು' ಎನ್ನಬೇಕು : ನಿರ್ಗಮಿತ ರಾಷ್ಟ್ರಪತಿ
ಇಲ್ಲಿಯವರೆಗೆ ವೀಡಿಯೊವನ್ನು 2 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 100 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಮಕ್ಕಳಿಗಷ್ಟೇ ಅಲ್ಲ ಅನೇಕ ನೆಟಿಜನ್ಗಳಿಗೂ ಅಮೂಲ್ಯವಾದ ಪಾಠವನ್ನು ಕಲಿಸುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.