Virat Kohli Earning : ಕೊಹ್ಲಿ 'Instagram' ಒಂದು ಪೋಸ್ಟ್ ನಿಂದ ಗಳಿಸುತ್ತಾರೆ 8 ಕೋಟಿ ಆದಾಯ!

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನ ಬರಿ ಪೋಸ್ಟ್ ನಿಂದ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. 

Written by - Channabasava A Kashinakunti | Last Updated : Jul 21, 2022, 06:02 PM IST
  • ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಕಳಪೆ ಫಾರ್ಮ್‌
  • ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಗೆ ಅಭಿಮಾನಿಗಳ ಕೊರತೆ ಇಲ್ಲ
  • ಇನ್ಸ್ಟಾಗ್ರಾಮ್ ನ ಬರಿ ಪೋಸ್ಟ್ ನಿಂದ 8 ಕೋಟಿ ರೂ. ಸಂಭಾವನೆ
Virat Kohli Earning : ಕೊಹ್ಲಿ 'Instagram' ಒಂದು ಪೋಸ್ಟ್ ನಿಂದ ಗಳಿಸುತ್ತಾರೆ 8 ಕೋಟಿ ಆದಾಯ! title=

Virat Kohli : ಬಹಳ ದಿನಗಳಿಂದ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಕಳಪೆ ಫಾರ್ಮ್‌ನಿಂದ ಹೋರಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಾವುದೇ ಶತಕಗಳು, ರನ್ ಗಳು ಹೊರಬಿದ್ದಿಲ್ಲ. ಹೀಗಾಗ ಟೀಂ ಇಂಡಿಯಾದಲ್ಲಿ ಅವರು ಉಳಿಯುವ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ, ಆದರೆ ಮೈದಾನದ ಹೊರಗೆ ಕಿಂಗ್ ಕೊಹ್ಲಿಯ ಕ್ರೇಜ್ ತುಂಬಾ ಹೆಚ್ಚಾಗುತ್ತಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಗೆ ಅಭಿಮಾನಿಗಳ ಕೊರತೆ ಇಲ್ಲ. 33 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಇನ್ನೂ ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಯಾಗಿ ಪ್ರಾಬಲ್ಯ ಹೊಂದಿದ್ದಾರೆ. ಕೊಹ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂದು ಹೆಸರಾಗಿದ್ದಾರೆ. ಹೌದು, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನ ಬರಿ ಪೋಸ್ಟ್ ನಿಂದ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. 

ಗಳಿಕೆಯಲ್ಲಿ ನಂಬರ್ ಒನ್..!

ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್ ಮಳೆಸುರಿಯದೆ ಇರಬಹುದು, ಆದರೆ ಅವರು ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 8 ಕೋಟಿ ಆದಾಯ ಗಳಿಸುತ್ತಾರೆ. hopperhq.com ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ವಿರಾಟ್ ಕೊಹ್ಲಿ ಇದರಲ್ಲಿ 14ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹೆಸರೂ ಸೇರಿದೆ. 27ನೇ ಸ್ಥಾನದಲ್ಲಿರುವವರು ಪ್ರತಿ ಪೋಸ್ಟ್ ಗೆ ಸುಮಾರು 3 ಕೋಟಿ ರೂ. ಆದಾಯ ಪಡೆಯುತ್ತಾರೆ. ವಿರಾಟ್ ಕೊಹ್ಲಿ ಟಾಪ್ 15 ರಲ್ಲಿರುವ ಏಕೈಕ ಭಾರತೀಯ ಆಟಗಾರನಾಗಿದ್ದರೆ. ಈ ಪಟ್ಟಿಯಲ್ಲಿ ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಕೊಹ್ಲಿಗಿದ್ದಾರೆ 200 ಮಿಲಿಯನ್ ಫಾಲೋವರ್ಸ್!

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇಷ್ಟೊಂದು  ಫಾಲೋವರ್ಸ್ ಗಳನ್ನು ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ, ಕಳೆದ ವರ್ಷ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ  ಮೊದಲ ಭಾರತೀಯ ವಿರಾಟ್ ಆಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ (451 ಮಿಲಿಯನ್), ಕೈಲಿ ಜೆನ್ನರ್ (345 ಮಿಲಿಯನ್), ಲಿಯೋನೆಲ್ ಮೆಸ್ಸಿ (327 ಮಿಲಿಯನ್ ಫಾಲೋವರ್ಸ್), ಸೆಲೆನಾ ಗೋಮ್ಸ್ (325 ಮಿಲಿಯನ್) ಮತ್ತು ಡ್ವೇನ್ ಜಾನ್ಸನ್ (320) ಮಾತ್ರ ವಿರಾಟ್‌ಗಿಂತ ಮುಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News