ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಂಚದ ಪ್ರಮಾಣ 65% ಹೆಚ್ಚಳವಾಗಿತ್ತು ಎಂದು ಸಮೀಕ್ಷೆ ಬಹಿರಂಗ ಪಡಿಸಿತ್ತು ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Jul 19, 2022, 05:10 PM IST
  • ಸಿದ್ದರಾಮಯ್ಯ ಸರ್ಕಾರ ಲಂಚಗುಳಿತನದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು ಮರೆತು ಹೋಯಿತೇ?
  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಂಚದ ಪ್ರಮಾಣ 65% ಹೆಚ್ಚಳವಾಗಿತ್ತು ಎಂದು ಸಮೀಕ್ಷೆ ಬಹಿರಂಗ ಪಡಿಸಿತ್ತು
  • ನಿರ್ಲಜ್ಜತನದ ಮೂಲಕ‌ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ ಎಂದು ಬಿಜೆಪಿ ಆಕ್ರೋಶ
ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿಯನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #ಭ್ರಷ್ಟಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಸಿ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘2017‌ರಲ್ಲಿ ಆಂಗ್ಲ ದೈನಿಕ ಸೇರಿದಂತೆ ಕನ್ನಡದ ಪತ್ರಿಕೆಗಳಲ್ಲಿ ‘ಕರ್ನಾಟಕ ದಿ‌ ಮೋಸ್ಟ್ ಕರಪ್ಟ್ ಸ್ಟೇಟ್’, ‘ಲಂಚಗುಳಿತನ, ರಾಜ್ಯಕ್ಕೆ ಪ್ರಥಮ ಸ್ಥಾನ’ ಎಂಬ ತಲೆಬರಹದಡಿ ಖಾಸಗಿ ಸಂಸ್ಥೆ ನಡೆಸಿದ್ದ ವರದಿ ಪ್ರಕಟವಾಗಿತ್ತು. ಸಿದ್ದರಾಮಯ್ಯನವರೇ ‘ಭ್ರಷ್ಟಾಚಾರದ ಜನಕ’ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ನ್ಯಾಯಾಂಗ ವಶಕ್ಕೆ ಚಂದ್ರಶೇಖರ ಗುರೂಜಿ ಹಂತಕರು

‘ದೀಪದ ಬುಡದಲ್ಲಿ ಕತ್ತಲು ಎಂಬಂತೆ ಕಾಂಗ್ರೆಸ್ಸಿಗರಿಗೆ ತಾವು ಮಾಡಿದ ತಪ್ಪುಗಳು ಕಾಣುವುದಿಲ್ಲ. ಆಧಾರವೇ ಇಲ್ಲದ % ಭೂತವನ್ನು ವ್ಯವಸ್ಥಿತವಾಗಿ ಜನಮಾನಸದಲ್ಲಿ ತುರುಕಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಲಂಚಗುಳಿತನದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು ಕಾಂಗ್ರೆಸ್‌ ನಾಯಕರಿಗೆ ಮರೆತು ಹೋಯಿತೇ?’ ಎಂದು ಬಿಜೆಪಿ ಟೀಕಿಸಿದೆ.

‘ಸರ್ಕಾರಿ ಸೇವೆಗಳನ್ನು ಪಡೆಯಲು ಲಂಚಕೊಡುವ ಪದ್ಧತಿಯನ್ನು ಪರಿಚಯಿಸಿದ್ದೇ ಕಾಂಗ್ರೆಸ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಂಚದ ಪ್ರಮಾಣ 65% ಹೆಚ್ಚಳವಾಗಿತ್ತು ಎಂದು ಸಮೀಕ್ಷೆ ಬಹಿರಂಗ ಪಡಿಸಿತ್ತು. ಅಂದರೆ ಸಿದ್ದರಾಮಯ್ಯರ ಅವಧಿಯ ಕಾಂಗ್ರೆಸ್‌ ಸರ್ಕಾರ 65% ಸರ್ಕಾರವಾಗಿತ್ತೇ?’ ಎಂದು 40% ಕಮಿಷನ್ ಸರ್ಕಾರವೆಂದು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತಿರುಗೇಟು ನೀಡಿದೆ.

ಇದನ್ನೂ ಓದಿ: ಹೆಂಡತಿ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ ಕೊಂದ ಪತಿ ಅರೆಸ್ಟ್‌

‘2017ರಲ್ಲಿ ಕಾಂಗ್ರೆಸ್‌ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬಸವರಾಜ್ ಬೊಮ್ಮಾಯಿ ಅವರ ಫೋಟೋ ಹಾಕಿ ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ಬಣ ವೈರಲ್‌ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯರನ್ನು ಕಟ್ಟಿಹಾಕಲೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ನಿರ್ಲಜ್ಜತನದ ಮೂಲಕ‌ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ. "ಲಂಚಗುಳಿತನ : ರಾಜ್ಯಕ್ಕೆ ಅಗ್ರಸ್ಥಾನ" ಎಂದು ಪ್ರಕಟವಾದ ಮಾಧ್ಯಮ ವರದಿಯ ದಿನಾಂಕವನ್ನೂ ಓದಲಾರದಷ್ಟು ದೊಡ್ಡ ದೃಷ್ಟಿದೋಷ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆಯೇ?’ ಎಂದು ಬಿಜೆಪಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News