ಭಾರತದಲ್ಲಿ ಐಪಿಎಲ್ ಶಕೆಯನ್ನು ಆರಂಭಿಸಿದ ಲಲಿತ್ ಮೋದಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಡೇಟಿಂಗ್ ವಿಚಾರ. ಇತ್ತೀಚೆಗಷ್ಟೇ ಮಾಜಿ ವಿಶ್ವಸುಂದರಿ ಹಾಗೂ ನಟಿ ಸುಶ್ಮಿತಾ ಸೇನ್ ಜತೆಗಿನ ಸಂಬಂಧವನ್ನು ಜಗತ್ತಿನ ಮುಂದೆ ಇಟ್ಟಿದ್ದರು. ಅಷ್ಟೇ ಅಲ್ಲದೆ, ಸುಶ್ಮಿತಾ ಸೇನ್ ಜತೆಗಿರುವ ಅವರ ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ಸಂಬಂಧದ ಬಗ್ಗೆ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅವೆಲ್ಲದರ ನಡುವೆ ಲಲಿತ್ ಮೋದಿ ಪುತ್ರನ ಪ್ರತಿಕ್ರಿಯೆಯೂ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಇಂದು ಬುಂದೇಲ್‌ಖಂಡ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ!
ತಂದೆಯ ಸಂಬಂಧದ ಬಗ್ಗೆ ಮಗನ ಪ್ರತಿಕ್ರಿಯೆ:
ಲಲಿತ್ ಮೋದಿ ಅವರ ಮಗ ರುಚಿರ್ ಮೋದಿ, ತಮ್ಮ ತಂದೆಯ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. "ಅವರು ತಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕುಟುಂಬದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ವ್ಯವಹಾರ ಅಥವಾ ಇತರ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನನಗೆ ಯಾವುದೇ ಸಮಸ್ಯೆ ಇಲ್ಲ. ಈ ವಿಷಯಗಳ ಬಗ್ಗೆ ಮಾತನಾಡಲು ನಾನು ಯಾವಾಗಲೂ ಸಂತೋಷಪಡುತ್ತೇನೆ" ಎಂದರು. ರುಚಿರ್ ತನ್ನ ತಂದೆಯ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಹಿಂಜರಿದಿದ್ದಾರೆ.
ಲಲಿತ್ ಮೋದಿ ಅವರು ಸುಶ್ಮಿತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಪೋಸ್ಟ್ ಬಿಡುಗಡೆಯಾದ 20 ಗಂಟೆಗಳ ನಂತರ, ಸುಶ್ಮಿತಾ ಸೇನ್ ಪ್ರತಿಕ್ರಿಯೆ ನೀಡಿದ್ದು, "ನಾನು ಪ್ರಸ್ತುತ ನನ್ನ ಸಂತೋಷದ ಸ್ಥಳದಲ್ಲಿದ್ದೇನೆ. ನಾನು ಮದುವೆಯಾಗಿಲ್ಲ. ಉಂಗುರ ಇಲ್ಲ. ಪ್ರೀತಿ ಸಾಕು" ಎಂದು ಶೀರ್ಷಿಕೆ ನೀಡಿ, ತಮ್ಮ ಇಬ್ಬರು ದತ್ತುಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಸುಶ್ಮಿತಾ ಸೇನ್ ರೆನೆ ಮತ್ತು ಅಲಿಶಾ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ದತ್ತುಪಡೆದಿದ್ದರು.
ಇದನ್ನೂ ಓದಿ: ದೇಶದಲ್ಲಿ ಈರುಳ್ಳಿ ಕೊರತೆ ನೀಗಲು ಕೇಂದ್ರ ಸರ್ಕಾರದಿಂದ ಭರ್ಜರಿ ಪ್ಲ್ಯಾನ್
ಮಾಜಿ ಪ್ರಿಯಕರನ ಪ್ರತಿಕ್ರಿಯೆ:
ಸುಶ್ಮಿತಾ ಸೇನ್ ಅವರ ಮಾಜಿ ಗೆಳೆಯ ರೋಹ್ಮನ್ ಶಾಲ್ ಕೂಡ ಈ ಸಂಬಂಧದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಅವರು ಸಂತೋಷವಾಗಿರಲಿ. ಈ ಪ್ರೀತಿ ಸುಂದರವಾಗಿದೆ. ಅವರು ಯಾರನ್ನಾದರೂ ಆಯ್ಕೆ ಮಾಡಿದರೆ, ಅದು ಅವರಿಗೆ ಯೋಗ್ಯವಾಗಿರುತ್ತದೆ ಎಂದು ನನಗೆ ತಿಳಿದಿದೆ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.