Single Plan ಅಡಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್, ಜೀ 5 ಸೇರಿದಂತೆ ಒಟ್ಟು 13 ಓಟಿಟಿ ವೇದಿಕೆಗಳ ಚಂದಾದಾರಿಕೆ ಉಚಿತ, ಇಲ್ಲಿದೆ ಡೀಟೇಲ್ಸ್

Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jul 9, 2022, 04:20 PM IST
  • ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು,
  • ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ.
  • ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ.
Single Plan ಅಡಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್, ಜೀ 5 ಸೇರಿದಂತೆ ಒಟ್ಟು 13 ಓಟಿಟಿ ವೇದಿಕೆಗಳ ಚಂದಾದಾರಿಕೆ ಉಚಿತ, ಇಲ್ಲಿದೆ ಡೀಟೇಲ್ಸ್ title=
Broadband Plan With 13 OTT Subscriptions Free

RailWire Broadband Plan Bundled with 13 OTT Subscriptions: ಇಂಟರ್ನೆಟ್ ನ ಈ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್ ಗಾಗಿ ಇಂಟರ್ನೆಟ್ ಜೊತೆಗೆ ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ಕೂಡ ನಿರೀಕ್ಷಿಸುತ್ತಿದ್ದಾರೆ. ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಯಾವ ಕಂಪನಿ ಈ ರೀತಿಯ ಪ್ಲಾನ್ ಹೊಂದಿದೆ ಮತ್ತು ಮೇಲಿನ ವೇದಿಕೆಗಳನ್ನು ಹೊರತುಪಡಿಸಿ ಇತರ ಯಾವ ಯಾವ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಪಿ‌ ತಪ್ಪಿಯೂ ಈ ಕೆಲಸ ಮಾಡಬೇಡಿ, ಜೈಲು ಸೇರಬೇಕಾದೀತು!

ಈ ಕಂಪನಿಯ ಯೋಜನೆ ಕುರಿತು ಚರ್ಚಿಸಲಾಗುತ್ತಿದೆ
ಈ ರೀತಿಯ ಅದ್ಭುತ ಪ್ಲಾನ್ ಯಾವ ಕಂಪನಿ ನೀಡುತ್ತಿದೆ ಎಂಬುದನ್ನು ನೀವೂ ಕೂಡ ಯೋಚಿಸುತ್ತಿದ್ದರೆ. ಏರ್ಟೆಲ್, ವೊಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ ನಂತನ ಟೆಲಿಕಾಂ ಕಂಪನಿಗಳು ಅಲ್ಲ ಎಂಬುದನ್ನು ನಾವು ಮೊದಲೇ ಸ್ಪಷ್ಟಪಡಿಸುತ್ತಿದ್ದೇವೆ. ರೈಲ್ ಟೆಲ್ ಹೆಸರಿನ ಬ್ರಾಡ್ ಬ್ಯಾಂಡ್ ಕಂಪನಿ ಈ ರೀತಿಯ ಸೇವೆಯನ್ನು ಒದಗಿಸುತ್ತಿದೆ. ರೈಲ್ ವೈರ್ ಕಂಪನಿಯ ಈ ಬ್ರಾಡ್ ಬ್ಯಾಂಡ್ ಸೇವೆ ಅತ್ಯಂತ ಅಗ್ಗದ ಬೆಲೆಯ ಬ್ರಾಡ್ ಬ್ಯಾಂಡ್ ಸೇವೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಅಷ್ಟೇ ಅಲ್ಲ ಅದರ ನೆಟ್ವರ್ ಕೂಡ ತುಂಬಾ ಉತ್ತಮವಾಗಿದ್ದು, ಇಂಟರ್ನೆಟ್ ವೇಗ ಕೂಡ ಅದ್ಭುತವಾಗಿದೆ.

ಇದನ್ನೂ ಓದಿ-Twitter ಜೊತೆಗಿನ ಡೀಲ್ ಕ್ಯಾನ್ಸಲ್ ಎಂದ ಎಲಾನ್ ಮಸ್ಕ್, ಇಲ್ಲಿದೆ ಹೊಸ ಅಪ್ಡೇಟ್

ಒಂದೇ ಪ್ಲಾನ್ ಅಡಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಉಚಿತ
ಇತ್ತೀಚೆಗಷ್ಟೇ ಈ ಕುರಿತು ಅಧಿಕೃತ ಘೋಷಣೆ ಮಾಡಿರುವ ರೈಲ್ ಟೈಲ್ ಕಂಪನಿ, ತನ್ನ ಚಂದಾದಾರರಿಗೆ ಟ್ರೂಲೀ ಅನ್ ಲಿಮಿಟೆಡ್ 50 ಹಾಗೂ 100 ಎಂಬಿಪಿಎಸ್ ಪ್ಲಾನ್ ಗಳಲ್ಲಿ ರೈಲ್ ವೈರ್ ಸತರಂಗ್ ಅಡಿ 13 ಓಟಿಟಿ ಆಪ್ಗಳು ಹಾಗೂ ವೇದಿಕೆಗಳ ಉಚಿತ ಆಕ್ಸಸ್ ನೀಡಲಾಗುತ್ತಿದೆ ಎಂದು ಹೇಳಿದೆ. ಈ ಓಟಿಟಿ ವೇದಿಕೆಗಳಲ್ಲಿ Amazon Prime Video, Disney+Hotstar, Zee5, SonyLIV, ErosNow, SunNext, AHA telegu, Alt Balaji, Epicon, MX Player, VOOT, Hungama Movies & TV Shows ಹಾಗೂ Hungama Music Pro  ಶಾಮೀಲಾಗಿವೆ.ನೀವು ಈ ವೇದಿಕೆಗಳ ಮೂಲಕ ವೆಬ್ ಸಿರೀಸ್, ಚಿತ್ರಗಳು, ಹಾಡುಗಳು, ಲೈವ್ ನ್ಯೂಸ್ ಹಾಗೂ ಹಲವು ಮನರಂಜನೆಯ ಚಾನೆಲ್ ಗಳ ವೀಕ್ಷಣೆಯನ್ನು ಆನಂದಿಸಬಹುದಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News