Shah Rukh Khan Viral Video: ಶರ್ಟ್‌ಲೆಸ್‌ ಆಗಿ ಕಾಣಿಸಿಕೊಂಡ ಶಾರುಖ್ ಖಾನ್.!

Shah Rukh Khan Shirtless Video : ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ದೇಹ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈಗ ಮತ್ತೊಮ್ಮೆ ಶಾರುಖ್ ಅವರ ಶರ್ಟ್ ಲೆಸ್ ಸ್ಟೈಲ್ ಕಂಡು ಫ್ಯಾನ್ಸ್‌ ಪ್ರತಿಕ್ರಿಯಿಸಿದ್ದಾರೆ.

Written by - Chetana Devarmani | Last Updated : Jul 9, 2022, 01:13 PM IST
  • ಬಾಲಿವುಡ್‌ ನಟ ಶಾರುಖ್ ಖಾನ್ ದೇಹ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ
  • ಈಗ ಮತ್ತೊಮ್ಮೆ ಶಾರುಖ್ ಅವರ ಶರ್ಟ್ ಲೆಸ್ ಸ್ಟೈಲ್ ಕಂಡು ಫ್ಯಾನ್ಸ್‌ ಪ್ರತಿಕ್ರಿಯಿಸಿದ್ದಾರೆ
  • ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ
Shah Rukh Khan Viral Video: ಶರ್ಟ್‌ಲೆಸ್‌ ಆಗಿ ಕಾಣಿಸಿಕೊಂಡ ಶಾರುಖ್ ಖಾನ್.!  title=
ನಟ ಶಾರುಖ್ ಖಾನ್

Shah Rukh Khan Shirtless Video : ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ದೇಹ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈಗ ಮತ್ತೊಮ್ಮೆ ಶಾರುಖ್ ಅವರ ಶರ್ಟ್ ಲೆಸ್ ಸ್ಟೈಲ್ ಕಂಡು ಫ್ಯಾನ್ಸ್‌ ಪ್ರತಿಕ್ರಿಯಿಸಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ.

ಇದನ್ನೂ ಓದಿ: ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಎರಡು ವರ್ಷ ಜೈಲು ಶಿಕ್ಷೆ

ವಾಸ್ತವವಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಶಾರುಖ್ ಅವರ ಹೊಸ ಕಮರ್ಷಿಯಲ್ ಜಾಹೀರಾತಿನ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ. ಇದನ್ನು ಅಭಿಮಾನಿಗಳು ನೋಡಿ ಸಂತೋಷಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಶಾರುಖ್ ಖಾನ್ ಬಾತ್ ರೂಂನಲ್ಲಿ ಶರ್ಟ್ ಧರಿಸದೇ ಕಾಣಿಸಿಕೊಂಡಿದ್ದಾರೆ. ಶಾರುಖ್ ಬಾಡಿವಾಶ್ ಸಲಹೆ ನೀಡುವಾಗ ಅವರ ಫಿಟ್ ದೇಹದ ನೋಟವನ್ನು ತೋರಿಸಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Godrej magic (@godrejmagic)

 

ಶಾರುಖ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಶಾರುಖ್ ಖಾನ್ ಅವರ ಶರ್ಟ್‌ಲೆಸ್ ಸ್ಟೈಲ್‌ನಿಂದಾಗಿ ನೆಟಿಜನ್‌ಗಳು ಅವರ ಈ ಜಾಹೀರಾತು ವಿಡಿಯೋವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಮತ್ತು ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬರುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಶಾರುಖ್ ಎಂದಿನಂತೆ ಯಂಗ್ ಆಗಿ ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ. 

ಸಿದ್ಧಾರ್ಥ್ ಆನಂದ್ ಅವರ ಮುಂಬರುವ 'ಪಠಾಣ್' ಚಿತ್ರದ ಮೂಲಕ ಶಾರುಖ್ ಖಾನ್ ಮತ್ತೆ ಬಿಗ್‌ ಸ್ಕ್ರೀನ್‌ಗೆ ಮರಳಲು ಸಿದ್ಧರಾಗಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಿತ್ಯಾನಂದನ ಜೊತೆ ಖ್ಯಾತ ನಟಿ ಪ್ರಿಯಾ ಮದುವೆ!? ಏನಿದು ಶಾಕಿಂಗ್‌ ಹೇಳಿಕೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News