ಬೆಳಗಾವಿ : ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ. ಅವರ ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲಾ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನ ಎಳೆ ತಂದು ಅವರ ಮುಂದೆ ಪೈರ ಮಾಡಕ್ಕಾಗುತ್ತಾ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಹರ್ಷ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಿದೆಯೋ ಅಷ್ಟೇ ನೋವು ನನಗು ಆಗಿದೆ. ಕೊಲೆ ಆರೋಪಿಗಳು ಜೈಲಿನಿಂದ ಪೋನ ಬಳಕೆ ಮಾಡಿರುವುದು ಕಂಡು ಬಂದ ತಕ್ಷಣವೆ ಕ್ರಮ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನ ಕಳೆದಿ ಈಡಿ ಜೈಲನ್ನೆ ಜಾಲಾಡಿ ಬಿಟ್ಟಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರೀಯೆ ಮಾತ್ರ ಇತ್ತು ಈಗ ಅವರ ಮೇಲೆ ಹಾಗೂ ಒಳಗೆ ಬಿಟ್ಟ ಸಿಬ್ಬಂದಿಯ ಮೇಲು ಎಪ್.ಐ.ಆರ್. ಆಗಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನ ಅಮಾನತ್ತು ಮಾತ್ರ ಅವರನ್ನು ಅದೆ ಜೈಲಿನಲ್ಲಿ ತಂದು ಕೂಡಿಸುವ ಕೆಲಸ ಮಾಡುತ್ತೇವೆ. ನಾನು ಹರ್ಷ ಕುಟುಂಬ ಬೇಟಿ ಮಾಡಿಲ್ಲಾ ಅಂತಲ್ಲಾ ನಾನು ಕುಟುಂಬವನ್ನ ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಏನೇನೂ ಮಾತನಾಡುತ್ತಾರೆ. ಯಾವತ್ ಮಾಡುತ್ತಿರಿ, ಯಾವ ಕ್ಷಣದಲ್ಲಿ ಮಾಡುತ್ತಿರಿ ಅಂತೆಲ್ಲಾ ಕೇಳುತ್ತಾರೆ. ಹೀಗೆ ಮಾತನಾಡಿದ್ರೆ ನಾನು ಗ್ರಹ ಸಚಿವನಾಗಿ ಏನು ಮಾತನಾಡಲು ಸಾಧ್ಯ ಹಾಗಾಗಿ ಜಾಸ್ತಿ ಮಾತನಾಡಲ್ಲಾ ಎಂದಿರುವೆ ಎಂದರು.
ಇದನ್ನೂ ಓದಿ : ಪಿಎಸ್ಐ ಪ್ರಕರಣ : ಎಡಿಜಿಪಿ ಅಮೃತ್ ಪಾಲ್ ಹಠದಿಂದ ಸರ್ಕಾರಕ್ಕೆ ಗಂಡಾತರ!
ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿದ್ದಾರೆ. ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ. ಅವರ ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲಾ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನ ಎಳೆ ತಂದು ಅವರ ಮುಂದೆ ಪೈರ ಮಾಡಕ್ಕಾಗುತ್ತಾ?. ಹರ್ಷ ಕುಟುಂಬದ ಜೋತೆ ನಾವಿದ್ದೇವೆ ಆರೋಪಿಗಳಿಗೆ ಶಿಕ್ಷೆ ನೀಡಲು ಪ್ರತ್ಯೇಕ ಪಿಪಿ ಯನ್ನೆ ನೇಮಕ ಮಾಡಿದ್ದೇವೆ. ಜೈಲಿನೊಳಗೆ ಏನೊ ಒಂದು ಘಟನೆ ಆಗಿದೆ ಅದನ್ನೆ ಆ ಕುಟುಂಬ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಕುಟುಂಬದ ಎಲ್ಲರೂ ಸಾಂತ್ವನ ಹೇಳಿದ್ದೇವೆ ತೀರಿಕೊಂಡ ಹರ್ಷನ ಬದುಕಿಸಲು ಆಗಲ್ಲಾ. ಆದ್ರೆ ಅವರ ಆತ್ಮಕ್ಕೆ ಶಾಂತಿ ನೆಲೆಸುವ ನಿಟ್ಟಿನಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ