ಬೊಜ್ಜಿನಿಂದ ಬಳಲುತ್ತಿರುವ ಭಾರತೀಯ ಮೂಲದ (ಎನ್ಆರ್‌ಐ) ಅಮೆರಿಕದ ಮಹಿಳೆಯೊಬ್ಬರಿಗೆ ಭಾರತದಲ್ಲಿ ಹೊಸ ಬದುಕು ಸಿಕ್ಕಿದೆ. ಅಮೆರಿಕದ ಚಿಕಿತ್ಸೆ ಬೇಡ ಎಂದು ಭಾರತಕ್ಕೆ ಆಗಮಿಸಿ ಆಪರೇಷನ್ ಮಾಡಿಸಿಕೊಂಡ ಆಕೆ 21 ದಿನಗಳಲ್ಲೇ ಸಾಕಷ್ಟು ತೂಕ ಇಳಿಸಿಕೊಂಡು ಬೊಜ್ಜಿನಿಂದ ಮುಕ್ತಿ ಪಡೆದಿದ್ದಾಳೆ. ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಆಕೆಗೆ ರೋಬೋಟಿಕ್ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಇದನ್ನೂ ಓದಿ: Mens Health : ಪುರುಷರೆ ನಿಮ್ಮ ದೇಹದಲ್ಲಿ 5 ಲಕ್ಷಣಗಳು ಕಂಡು ಬಂದರೆ ಅದು Testosterone ಕೊರತೆ ಸಮಸ್ಯೆ!
44 ವರ್ಷದ ಮಹಿಳೆ ಕಳೆದ ಕೆಲವು ವರ್ಷಗಳಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಸಾಂಪ್ರದಾಯಿಕ ವಿಧಾನಗಳ ಮೂಲಕ ತೂಕವನ್ನು ಕಳೆದುಕೊಳ್ಳುವ ಆಕೆಯ ಎಲ್ಲಾ ಪ್ರಯತ್ನಗಳು ವಿಫಲವಾದವು. ಸಮಸ್ಯೆಯನ್ನು ಹೋಗಲಾಡಿಸಲು ಆಹಾರ ಮತ್ತು ವ್ಯಾಯಾಮ ಪದ್ಧತಿ ಬದಲಾಯಿಸಲು ನಿರ್ಧರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ (ಹೈಪರ್ ಥೈರಾಯ್ಡಿಸಮ್) ನಂತಹ ಇತರ ಸಮಸ್ಯೆಗಳು ಆಕೆಯನ್ನು ಕಾಡುತ್ತಿದ್ದವು. ಸದ್ಯಕ್ಕೆ ಶಸ್ತ್ರಚಿಕಿತ್ಸೆ ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಅಮೆರಿಕದ ವೈದ್ಯರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ ಅವರು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಸದ್ಯ ತಮ್ಮ ತೂಕ ಇಳಿಸಿಕೊಂಡಿದ್ದಾರೆ.
ಮೊದಲು ರೋಗಿಯನ್ನು ಪರೀಕ್ಷಿಸಿದ ಅಪೋಲೋ ಆಸ್ಪತ್ರೆಯ ವೈದ್ಯರು ತಕ್ಷಣವೇ ರೋಬೋಟಿಕ್ ಬಾರಿಯಾಟ್ರಿಕ್ ಆಪರೇಷನ್ ಮಾಡಲು ಸೂಚಿಸಿದರು. ಜೊತೆಗೆ ಬಿಪಿ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸೂಚಿಸಿದರು. ಸದ್ಯ ಆಕೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಹಾವಳಿ: 1 ಲಕ್ಷ ಮೀರಿದ ಸಕ್ರಿಯ ಪ್ರಕರಣಗಳ ಸಂಖ್ಯೆ
ಶಸ್ತ್ರಚಿಕಿತ್ಸೆಯ ನಂತರ, ಅವರು ಎರಡು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿದ್ದರು. ಅವರ ಆರೋಗ್ಯವು ಕ್ರಮೇಣ ಸುಧಾರಿಸಿದ್ದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕಾರ್ಯಾಚರಣೆಯ ಮೊದಲು 114.2 ಕೆ.ಜಿ. ಇದ್ದ ಅವರು ಕೇವಲ 21 ದಿನಗಳಲ್ಲಿ 8 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದರೊಂದಿಗೆ. ಆಕೆಯ ಆರೋಗ್ಯ ಮತ್ತಷ್ಟು ಸುಧಾರಿಸಿದೆ. ಇತ್ತೀಚಿನ ಮಾಧ್ಯಮಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯರು ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ