ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.. ಚಿರತೆ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ನೀರಮಾನ್ವಿ ಗುಡ್ಡದಲ್ಲಿ ಚಿರತೆ ಇರೋದು ಖಚಿತವಾಗಿದೆ. ಚಿರತೆ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಳೀಯರ ಕಣ್ಣಿಗೆ ಬೀಳುತ್ತಿದ್ದು, ವಾರದ ಹಿಂದೆ ಮೇಕೆಯೊಂದನ್ನು ಕೊಂದು ಹಾಕಿತ್ತು. ಪದೇ ಪದೆ ಚಿರತೆ ಕಾಣಿಸಿಕೊಳ್ತಿದ್ರಿಂದ ಜನ ಆತಂಕಗೊಂಡಿದ್ದಾರೆ.