ತಪಾಸಣೆ ನೆಪದಲ್ಲಿ ಹಣ ವಸೂಲಿ ಮಾಡಿದ್ದ ಟ್ರಾಫಿಕ್ ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್

ಕಾರಿನಲ್ಲಿ ವಾಶ್ ಬೇಸಿನ್ ಇದ್ದ ಕಾರಣ 2500 ಅಕ್ರಮವಾಗಿ ಸಂತೋಷ್ ರಿಂದ ವಸೂಲಿ ಮಾಡಿದ್ದರು. ಮಾತ್ರವಲ್ಲ ಹಣ ಪಡೆದುಕೊಂಡಿದಕ್ಕೆ ರಶೀದಿ ಸಹ ನೀಡಿರಲಿಲ್ಲ. 

Written by - Manjunath Hosahalli | Last Updated : Jun 27, 2022, 04:15 PM IST
  • ಹೊರ ರಾಜ್ಯದ ಚಾಲಕರಿಂದ ದಂಡ ವಸೂಲಿ
  • ಇದೇ 10ರಂದು ದೇವಾಂಗ ಜಂಕ್ಷನ್ ನಲ್ಲಿ ನಡೆದಿತ್ತು ಘಟನೆ
  • ಇಮೇಲ್ ಮೂಲಕ ನಗರ ಸಂಚಾರಿ ಪೊಲೀಸರಿಗೆ ದೂರು
ತಪಾಸಣೆ ನೆಪದಲ್ಲಿ ಹಣ ವಸೂಲಿ ಮಾಡಿದ್ದ ಟ್ರಾಫಿಕ್ ಎಎಸ್ಐ ಸೇರಿ ಇಬ್ಬರು ಸಸ್ಪೆಂಡ್ title=
traffic police (file photo)

ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ಸೋಗಿನಲ್ಲಿ‌ ರಶೀದಿ ನೀಡದೆ‌ ಅಕ್ರಮವಾಗಿ ಹಣ ಪಡೆದ ಆರೋಪದಡಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್ಐ ಹಾಗೂ ಹೆಡ್ ಕಾನ್ ಸ್ಟೇಬಲ್ ಅನ್ನು ಅಮಾನತುಗೊಳಿಸಿ ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಇದೇ ತಿಂಗಳು 10ರಂದು ದೇವಾಂಗ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮಹೇಶ್ ಹಾಗೂ ಹೆಡ್ ಕಾನ್ ಸ್ಟೇಬಲ್ ಗಂಗಾಧರಪ್ಪ ಅವರು ಕೇರಳ ಮೂಲದ ಸಂತೋಷ್ ಕುಮಾರ್ ಎಂಬಾತನ ಕಾರ್ ತಡೆದು ನಿಲ್ಲಿಸಿದ್ದರು. ಕಾರಿನಲ್ಲಿ ವಾಶ್ ಬೇಸಿನ್ ಇದ್ದ ಕಾರಣ 2500 ಅಕ್ರಮವಾಗಿ ಸಂತೋಷ್ ರಿಂದ ವಸೂಲಿ ಮಾಡಿದ್ದರು. ಮಾತ್ರವಲ್ಲ ಹಣ ಪಡೆದುಕೊಂಡಿದಕ್ಕೆ ರಶೀದಿ ಸಹ ನೀಡಿರಲಿಲ್ಲ. 

ಇದನ್ನೂ ಓದಿ : ರಮೇಶ್ ಜಾರಕಿಹೊಳಿ ಮೇಲೆ ದಾಳಿ ನಡೆಸಲು IT, ED & CBIಗಳಿಗೆ ಭಯವೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಈ ಸಂಬಂಧ ಇಮೇಲ್ ಮೂಲಕ ನಗರ ಸಂಚಾರಿ ಪೊಲೀಸರಿಗೆ ಸಂತೋಷ್ ದೂರು ನೀಡಿದ್ದರು‌. ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯದ ವೇಳೆ ಪೊಲೀಸರು ಬಾಡಿ ವೋರ್ನ್ ಕ್ಯಾಮರಾ ಧರಿಸಿರಲಿಲ್ಲ ಎನ್ನುವುದು ತಿಳಿದು ಬಂದಿದೆ. ಸದ್ಯ ಮೆಲ್ನೋಟಕ್ಕೆ ಸಿಬ್ಬಂದಿ ನಿರ್ಲಕ್ಷ್ಯತೆ ಹಾಗೂ ದುರ್ನಡತೆ ಆರೋಪದಡಿ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಲಾಗಿದೆ ಎಂದು ರವಿಕಾಂತೇಗೌಡ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News