ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಮಧ್ಯ ಟ್ವೀಟ್ ವಾರ್

 ಟ್ವಿಟ್ಟರ್ ನಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಾಯಕರ  ನಡುವೆ ಟ್ವೀಟಿನ ಚಕಮಕಿ ನಡೆದಿದೆ.

Last Updated : Aug 4, 2018, 12:30 PM IST
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಮಧ್ಯ ಟ್ವೀಟ್ ವಾರ್ title=

ಬೆಂಗಳೂರು: ಟ್ವಿಟ್ಟರ್ ನಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಾಯಕರ  ನಡುವೆ ಟ್ವೀಟಿನ ಚಕಮಕಿ ನಡೆದಿದೆ.

ಗದಗನಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ದಿಢೀರ್ ಭೇಟಿ ನೀಡಿ ಹಾಸ್ಟೆಲ್ ನಲ್ಲಿನ ಅವ್ಯವಸ್ಥೆ ಕಂಡು ಅಲ್ಲಿನ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಾದ ನಂತರ ಟ್ವೀಟ್ ಮಾಡಿರುವ ಪೂಜಾರಿಯವರು"ಮಾನ್ಯ ಸಮಾಜ ಕಲ್ಯಾಣ ಸಚಿವ ಶ್ರೀ  @PriyankKharge ರವರೇ, ಕೆಳಗಿನ ದೃಶ್ಯ ನೋಡಿ.. ಈ ಪುರುಷಾರ್ಥಕ್ಕೆ ಮಂತ್ರಿಗಿರಿ ಬೇಕೆ? ಕೂಡಲೇ ಬಡ ಮಕ್ಕಳಿರುವ ಸರಕಾರಿ ಹಾಸ್ಟೆಲ್ ಸರಿಪಡಿಸಿ, ಇಲ್ಲವೇ ರಾಜೀನಾಮೆ ನೀಡಿ"ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಇದಕ್ಕೆ  ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ "ಶ್ರೀ @KotasBJP  ನಮ್ಮಲ್ಲಿ ಸುಮಾರು 3000  ವಸತಿಶಾಲೆ ಇದೆ, ಅದರ ಪರಿಸ್ಥಿತಯ ಅರಿವು ನನಗೆ ಇದೆ. ಪ್ರಾಮಾಣಿಕವಾಗಿ ವಸತಿಶಾಲೆಯ ಸುಧಾಹರಣೆಗೂ ಪ್ರಯತ್ನ ನನ್ನದಾಗಿದೆ. ತಮ್ಮ ಶಾಸಕರ ಅನುದಾನದಲ್ಲಿ ತಾವು ಎಷ್ಟು ನೆರವು SC/ST ವಸತಿಶಾಲೆಗೆ ಕೊಟ್ಟಿದೀರಾ ಎಂದು ಹೇಳಿರಿ. ನಿಮಗೆ SCST ಅವರ ಬಗ್ಗೆ ಕಾಳಜಿ ಇದ್ದರೇ @narendramodi ರಾಜೀನಾಮೆ ಕೇಳಿ" ಎಂದು ಪ್ರತಿಕ್ರಿಯಿಸಿದ್ದಾರೆ " ಇಷ್ಟಕ್ಕೆ  ಸುಮ್ಮನಾಗದ ಸಚಿವರು ಎಸ್ಸಿ ಎಸ್ಟಿ ಕಾಯ್ದೆ ವಿಚಾರವಾಗಿ ಪ್ರಸ್ತಾಪಿಸುತ್ತಾ "ಶ್ರೀ @KotasBJP ತಾವು ಪ್ರಬುದ್ಧರು , ಈ ಪ್ರಸ್ತಾವನೆ ಯಾಕೆ ಹೀಗಾಯ್ತು ಎಂದು ಜನರಿಗೆ ಹೇಳಿ ಅಥವಾ ......." ಎಂದು ಕೋಟಾ ಶ್ರೀನಿವಾಸ್ ಪುಜಾರಿಯವರನ್ನ ಪ್ರಶ್ನಿಸಿದ್ದಾರೆ.

ಆದರೆ ಸಚಿವರ ಉತ್ತರ ಸಮರ್ಪಕವಿಲ್ಲ ಎಂದು ಟ್ವಿಟಾರ್ತಿಗಳು ಸಚಿವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

 

Trending News