ಆಧಾರ್ ನಲ್ಲಿ ವಿಳಾಸ ಬದಲಾವಣೆಗೆ UIDAI ಪರಿಚಯಿಸಲಿದೆ ಹೊಸ ಪ್ರಕ್ರಿಯೆ

ಈ ಸೇವೆಯಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಥವಾ ತಮ್ಮ ನಗರವನ್ನು ಬಿಟ್ಟು ಇತರ ನಗರಗಳಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

Last Updated : Aug 3, 2018, 12:02 PM IST
ಆಧಾರ್ ನಲ್ಲಿ ವಿಳಾಸ ಬದಲಾವಣೆಗೆ UIDAI ಪರಿಚಯಿಸಲಿದೆ ಹೊಸ ಪ್ರಕ್ರಿಯೆ title=

ನವದೆಹಲಿ: ಈಗ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಸುಲಭವಾಗಿ ಬದಲಾಯಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಏಪ್ರಿಲ್, 2019 ರಿಂದ ಹೊಸ ಸೇವೆಯನ್ನು ಪ್ರಾರಂಭಿಸುತ್ತದೆ. ಅದರಿಂದ, ಆಧಾರ್ ಕಾರ್ಡಿನಲ್ಲಿ ವಿಳಾಸವನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಾಗುತ್ತದೆ. ಸ್ಥಳೀಯ ನಿವಾಸದ ಪುರಾವೆ ಇಲ್ಲದವರಿಗೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಇದರಿಂದ ಸಹಾಯವಾಗಲಿದೆ. ಈ ಸೇವೆ ಅಡಿಯಲ್ಲಿ ಯುಐಡಿಎಐ ರಹಸ್ಯ ಪಿನ್(secret pin) ಅನ್ನು ಆಧಾರ್ ಕಾರ್ಡ್ ಹೊಂದಿರುವವರ ಹೆಸರಿಗೆ ಪತ್ರದ ಮೂಲಕ ಕಳುಹಿಸುತ್ತದೆ. ಬ್ಯಾಂಕುಗಳು ನಿಮ್ಮ ವಿಳಾಸಕ್ಕೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡಿನ ಸಿಕ್ರೆಟ್ ಪಿನ್ ಕಳುಹಿಸುವಂತೆಯೇ ಈ ಸಿಕ್ರೆಟ್ ಪಿನ್ ಸಹ ಆಗಿರುತ್ತವೆ.

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಪ್ರಸ್ತುತ ನಿವಾಸದ ಸ್ಥಳಕ್ಕೆ ಯಾವುದೇ ಪುರಾವೆ ಇಲ್ಲದಿದ್ದಲ್ಲಿ ಈ ವಿಳಾಸಕ್ಕೆ ತಲುಪುವ ಪಿನ್ ಸಂಖ್ಯೆ ಮೂಲಕ ಮಾತ್ರ ತಮ್ಮ ವಿಳಾಸವನ್ನು ಬದಲಿಸುವ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಯುಐಡಿಎಐ ತಿಳಿಸಿದೆ. ಈ ಹೊಸ ಸೇವೆಯನ್ನು ಏಪ್ರಿಲ್ 1 ರಿಂದ ಒದಗಿಸುವುದಾಗಿ ಯುಐಡಿಎಐ ಪ್ರಕಟಿಸಿದೆ. PIN ಸಂಕೇತದ ಆಧಾರದ ಮೇರೆಗೆ ವಿಳಾಸದ ಪರಿಶೀಲನೆಗಾಗಿ ಅವರು ವಿನಂತಿಸಬಹುದು. ಒಬ್ಬ ವ್ಯಕ್ತಿಯು ಈ ಪತ್ರವನ್ನು ಪಡೆದ ನಂತರ, ಈ ರಹಸ್ಯ ಪಿನ್ ಮೂಲಕ SSUP ಆನ್ಲೈನ್ ಪೋರ್ಟಲ್ ನಲ್ಲಿ ತನ್ನ ಆಧಾರ್ ವಿಳಾಸವನ್ನು ಬದಲಾಯಿಸಬಹುದು ಎಂದು ಯುಐಡಿಎಐ ತಿಳಿಸಿದೆ.

ಈ ಸೇವೆಯಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಥವಾ ತಮ್ಮ ನಗರವನ್ನು ಬಿಟ್ಟು ಇತರ ನಗರಗಳಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಹೊಸ ಸೇವೆ ಜನವರಿ 1, 2019 ರಿಂದ ಆರಂಭವಾಗಲಿದ್ದು, 2019 ರ ಏಪ್ರಿಲ್ 1 ರಿಂದ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಯುಐಡಿಎಐ ಹೇಳಿದೆ.

ಪ್ರಸ್ತುತ, ಆಧಾರ್ ವಿಳಾಸವನ್ನು ಬದಲಾಯಿಸಲು ಫಾರ್ಮ್ ಅನ್ನು ಭರ್ತಿ ಮಾಡುವಾಗ ಆಧಾರ್ ನಿಯಮಗಳಲ್ಲಿರುವ ದಾಖಲೆಗಳಲ್ಲಿ (ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್, ಮತದಾರ ID, ಚಾಲನಾ ಪರವಾನಗಿ, ಬಾಡಿಗೆ ಒಪ್ಪಂದದ ಕರಾರು ಮತ್ತು ಮದುವೆಯ ಪ್ರಮಾಣಪತ್ರ ಇತ್ಯಾದಿ) ಯಾವುದಾದರು ಒಂದು ದಾಖಲೆಯನ್ನು ನೀಡಬೇಕು. 

Trending News