Viral Video: ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಭೂಪ..!

ಕಾರು ಮಾಲೀಕರಾದ ಸಂಗೀತಾ ಗಾವಡಾಳ್ಕರ್ ವಿರುದ್ಧ ಮಾಪುಸಾದ ಪೊಲೀಸರು ಆರ್‌ಟಿಒಗೆ ವರದಿ ಸಲ್ಲಿಸಿದ್ದಾರೆ. ವಾಹನ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Written by - Puttaraj K Alur | Last Updated : Jun 17, 2022, 06:13 PM IST
  • ಬಾಡಿಗೆಗೆ ಕಾರು ಪಡೆದ ದೆಹಲಿ ಮೂಲದ ಯುವಕನಿಂದ ಹುಚ್ಚಾಟ
  • ಗೋವಾದ ನಿಷೇಧಿತ ಪ್ರದೇಶದಲ್ಲಿ ಕಾರು ಚಲಾಯಿಸಿ ಪೇಚಿಗೆ ಸಿಲುಕಿದ ಭೂಪ
  • ವೇಗವಾಗಿ ಕಾರು ಚಲಾಯಿಸಿ ನೀರಿನಲ್ಲಿ ಮುಳುಗಿಸಿದ ವ್ಯಕ್ತಿ ಬಂಧನ
Viral Video: ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಭೂಪ..!  title=
ಬಾಡಿಗೆ ಕಾರು ಪಡೆದು ಯುವಕನ ಹುಚ್ಚಾಟ!

ಪಣಜಿ: ಬಾಡಿಗೆಗೆ ಕಾರು ಪಡೆದ ಪ್ರವಾಸಿಗನೊಬ್ಬ ಅದನ್ನು ಗೋವಾದ ಬೀಚ್‍ನಲ್ಲಿ ಮುಳುಗಿಸಿ ಹುಚ್ಚಾಟ ಮೆರೆದಿದ್ದಾನೆ. ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಎಂಬಾತನೇ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಪೇಚಿಗೆ ಸಿಲುಕಿದ್ದಾನೆ.

ಬಾಡಿಗೆಗೆ ಕಾರು ಪಡೆದುಕೊಂಡಿದ್ದ ಲಲಿತ್ ಕುಮಾರ್ ಅದನ್ನು ಕಡಲ ತೀರದಲ್ಲಿ ಚಲಾಯಿಸಿದ್ದಾನೆ. ಈ ವೇಳೆ ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ಹಣಜುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೀಚ್‍ನಲ್ಲಿ ವಾಹನ ಚಲಾಯಿಸಿದ ಪ್ರವಾಸಿಗರನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: 46 ವರ್ಷಗಳಿಂದ ತೇಲುತ್ತಿದ್ದ ಪ್ರಸಿದ್ಧ ರೆಸ್ಟೋರೆಂಟ್‌ ಅಂತ್ಯ: ಸೆಲೆಬ್ರಿಟಿಗಳ ಫೇವರೇಟ್‌ ಸ್ಪಾಟ್‌ ಕಥೆ ಇನ್ನೇನು?

ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು ಶೇಟಯೆವಾಡಾದ ಸಂಗೀತಾ ಗವಂಡಾಳಕರ್ ಗೆ ಸೇರಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ಘಟನೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಬಿರುಗಾಳಿಯ ವಾತಾವರಣದಲ್ಲಿ ಗೋವಾ ಕಡಲತೀರದಲ್ಲಿ ಹ್ಯುಂಡೈ ಕ್ರೆಟಾವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದು ನೀರಿನಲ್ಲಿ ಮುಳುಗಡೆಯಾಗಿದೆ. ಅದನ್ನು ಮೆಲಕ್ಕೆತ್ತಲು ಯುವಕರ ಗುಂಪು ಹರಸಾಹಸಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

‘ಗೋವಾ ನೋಂದಣಿಯ ಹ್ಯುಂಡೈ ಕ್ರೆಟಾವನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ಗೋವಾದ ನಿಷೇಧಿತ ಪ್ರದೇಶದಲ್ಲಿ ಓಡಿಸಲಾಗಿದೆ. ಕಾರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 336ರಡಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟಿಕ್ ಟಾಕ್ ಗೆ ಸೆಡ್ಡು ಹೊಡೆದ ಯೂಟ್ಯೂಬ್, ಶಾರ್ಟ್ಸ್ ಗಳಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ?

ಇದಲ್ಲದೆ ಕಾರು ಮಾಲೀಕರಾದ ಸಂಗೀತಾ ಗಾವಡಾಳ್ಕರ್ ವಿರುದ್ಧ ಮಾಪುಸಾದ ಪೊಲೀಸರು ಆರ್‌ಟಿಒಗೆ ವರದಿ ಸಲ್ಲಿಸಿದ್ದಾರೆ. ವಾಹನ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೇಶದ ದಕ್ಷಿಣ ಭಾಗದಲ್ಲಿ ಮುಂಗಾರು ಮಳೆ ಅಬ್ಬರವಿದ್ದು, ಗೋವಾದ ಭಾಗಗಳಲ್ಲಿಯೂ ಮಳೆಯಾಗುತ್ತಿದೆ. ಹೀಗಾಗಿ ಗೋವಾದ ಕಡಲತೀರಗಳಲ್ಲಿ ವಾಹನ ಚಲಾವಣೆ ನಿಷೇಧಿಸಲಾಗಿದೆ. ಆದರೆ, ಹೊರಗಿನ ಪ್ರವಾಸಿಗರು ನಿಷೇಧಿತ ಪ್ರದೇಶಗಳಲ್ಲಿ ವಾಹನ ಚಲಾಯಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News