ಬೆಂಗಳೂರು : ದಿನೇ ದಿನೇ ಬೆಲೆ ಏರಿಕೆ ಸುದ್ದಿ ಮಧ್ಯೆ ಇದೀಗ ನೆಮ್ಮದಿಯ ಸುದ್ದಿಯೊಂದು ಕೇಳಿ ಬಂದಿದೆ. ಖಾದ್ಯ ತೈಲ ಬೆಲೆ ಮತ್ತೊಮ್ಮೆ ಇಳಿಕೆಯಾಗಿದೆ. ಧಾರಾ ಬ್ರಾಂಡ್ ನ ಖಾದ್ಯ ತೈಲದ ಬೆಲೆಯನ್ನು ಲೀಟರ್ಗೆ 15 ರೂ.ವರೆಗೆ ಇಳಿಸಲಾಗಿದೆ.
ಪ್ರತಿ ಲೀಟರ್ಗೆ 193 ರೂ. ದರ :
ವಿಶ್ವದಾದ್ಯಂತ ಖಾದ್ಯ ತೈಲದ ಬೆಲೆಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮದರ್ ಡೈರಿ ಹೇಳಿದೆ. ಕಂಪನಿಯು ತನ್ನ ಖಾದ್ಯ ತೈಲಗಳನ್ನು ಧಾರಾ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಧಾರಾ ಸಾಸಿವೆ ಎಣ್ಣೆ ಬೆಲೆಯನ್ನು ಪ್ರತಿ ಲೀಟರ್ ಗೆ 208 ರೂ.ನಿಂದ 193 ರೂ.ಗೆ ಇಳಿಸಲಾಗಿದೆ.
ಇದನ್ನೂ ಓದಿ : Gold Price Today : ಇಳಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ , ಬೆಳ್ಳಿ ಕೂಡಾ ಬಲು ದುಬಾರಿ
ಇದಲ್ಲದೆ, ಧಾರಾ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಬೆಲೆಯನ್ನು ಪ್ರತಿ ಲೀಟರ್ಗೆ 235 ರೂ.ಗಳಿಂದ 220 ಗೆ ಇಳಿಸಲಾಗಿದೆ. ಧಾರಾ ರಿಫೈನ್ಡ್ ಸೋಯಾಬೀನ್ ಎಣ್ಣೆಯ ಬೆಲೆ 209 ರೂ.ಯಿಂದ 194 ರೂ.ಗೆ ಇಳಿಕೆಯಾಗಲಿದೆ. ಧಾರಾ ಅಡುಗೆ ಎಣ್ಣೆಗಳ ಬೆಲೆಯನ್ನು ಲೀಟರ್ಗೆ 15 ರೂ.ವರೆಗೆ ಕಡಿಮೆ ಮಾಡುತ್ತಿರುವುದಾಗಿ ಮದರ್ ಡೈರಿ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಸರ್ಕಾರದ ಉಪಕ್ರಮಗಳು, ಅಂತರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವ ಮತ್ತು ಸೂರ್ಯಕಾಂತಿ ಎಣ್ಣೆಯ ಹೆಚ್ಚಿದ ಲಭ್ಯತೆಯಿಂದಾಗಿ ಹೊಸ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಹೊಸ ಎಂಆರ್ಪಿಯೊಂದಿಗೆ ಧಾರಾ ಖಾದ್ಯ ತೈಲವು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೆಚ್ಚಿನ ದರಗಳಿಂದಾಗಿ ಕಳೆದ ಒಂದು ವರ್ಷದಿಂದ ಖಾದ್ಯ ತೈಲ ಬೆಲೆಗಳು ದುಬಾರಿಯಾಗಿತ್ತು.
ಇದನ್ನೂ ಓದಿ : ಎಟಿಎಫ್ ದರದಲ್ಲಿ ದಾಖಲೆ ಹೆಚ್ಚಳ; ವಿಮಾನ ಪ್ರಯಾಣ ಇನ್ನು ಬಲು ದುಬಾರಿ
ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತವು ವಾರ್ಷಿಕವಾಗಿ ಸುಮಾರು 13 ಮಿಲಿಯನ್ ಟನ್ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. ಖಾದ್ಯ ತೈಲಗಳಿಗೆ ದೇಶದ ಆಮದು ಅವಲಂಬನೆಯು ಶೇಕಡಾ 60 ರಷ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.