ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿ ಬಿಟ್ಟು ಬಂದ ವ್ಯಕ್ತಿಯ ಇಂದಿನ ಸಂಪಾದನೆ ಎಷ್ಟು ಗೊತ್ತಾ ?

ಇಲ್ಲೊಬ್ಬ ವ್ಯಕ್ತಿ  ಕತ್ತೆ ಸಾಕುವ ಸಲುವಾಗಿ  ಮಲ್ಟಿ ನ್ಯಾಷನಲ್ ಕಂಪನಿಯ  ಉದ್ಯೋಗವನ್ನೇ ತೊರೆದಿದ್ದಾನೆ. ಈತನ ನಿರ್ಧಾರ ಕೇಳಿ ಗೆಳೆಯರೆಲ್ಲರೂ ಆಡಿಕೊಂಡು ನಕ್ಕಿದ್ದೂ ಆಗಿದೆ. ಆದರೆ ಈ ಯುವಕ ಮಾತ್ರ ಯಾವುದಕ್ಕೂ ಬಗ್ಗಲಿಲ್ಲ, ಜಗ್ಗಲಿಲ್ಲ.

Written by - Ranjitha R K | Last Updated : Jun 14, 2022, 02:56 PM IST
  • ಕೈ ತುಂಬಾ ಸಂಪಾದನೆ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು
  • ಆದರೆ ಇದ್ದ ಕೆಲಸ ಬಿಟ್ಟು ಸ್ವಂತ ಉದ್ಯೋಗಕ್ಕೆ ಕೈ ಹಾಕಿದ ವ್ಯಕ್ತಿ
  • ಇಂದಿನ ಸಂಪಾದನೆ ಕೇಳಿದರೆ ಹೆಮ್ಮೆ ಎನಿಸುತ್ತದೆ
ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿ ಬಿಟ್ಟು ಬಂದ ವ್ಯಕ್ತಿಯ ಇಂದಿನ ಸಂಪಾದನೆ ಎಷ್ಟು ಗೊತ್ತಾ ?  title=
Donkey farming

ಬೆಂಗಳೂರು : ಹೆಚ್ಚು ವಿದ್ಯಾಭ್ಯಾಸ ಪಡೆಯಬೇಕು, ಒಳ್ಳೆಯ ಕೆಲಸಕ್ಕೆ ಸೇರಬೇಕು ಕೈ ತುಂಬಾ ಸಂಪಾದನೆ ಮಾಡಬೇಕು. ಇದು ಪ್ರತೊಯೊಬ್ಬ ಕಾಣುವ ಕನಸು. ಇನ್ನು ಓದುವುದರಲ್ಲಿ ಬರೆಯುವುದರಲ್ಲಿ ಅಸಡ್ಡೆ ತೋರಿ ಹಿಂದೆ ಬೀಳುವ ಮಕ್ಕಳಿಗೆ ಕತ್ತೆ ಕಾಯಲು ಹೋಗು ಎಂದು ಬೈಯ್ಯುವುದು ವಾಡಿಕೆ.   ಅಥವಾ ಮೊದಲು ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿ ಕಡಿಮೆ ಅಂಕ ಪಡೆದರೆ ಬರ ಬರುತ್ತಾ ರಾಯರ ಕುದುರೆ ಕತ್ತೆಯಾಗಿತ್ತು ಎಂದು ಬೈಯ್ಯುವುದನ್ನು ಕೂಡಾ ಕೇಳಿರಬಹುದು.  ಆದರೆ ಇಲ್ಲೊಬ್ಬ ವ್ಯಕ್ತಿ  ಕತ್ತೆ ಸಾಕುವ ಸಲುವಾಗಿ  ಮಲ್ಟಿ ನ್ಯಾಷನಲ್ ಕಂಪನಿಯ  ಉದ್ಯೋಗವನ್ನೇ ತೊರೆದಿದ್ದಾನೆ. ಈತನ ನಿರ್ಧಾರ ಕೇಳಿ ಗೆಳೆಯರೆಲ್ಲರೂ ಆಡಿಕೊಂಡು ನಕ್ಕಿದ್ದೂ ಆಗಿದೆ. ಆದರೆ ಈ ಯುವಕ ಮಾತ್ರ ಯಾವುದಕ್ಕೂ ಬಗ್ಗಲಿಲ್ಲ, ಜಗ್ಗಲಿಲ್ಲ. ತನ್ನ ನಿರ್ಧಾರವೇ ಸರಿ ಎಂದು ತನ್ನ ಭವಿಷ್ಯವನ್ನು ತಾನೇ ಬರೆದಿದ್ದಾನೆ. 

2020 ರಲ್ಲಿ ಉದ್ಯೋಗ ಆರಂಭಿಸುವ ನಿರ್ಧಾರ :
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀನಿವಾಸ್ ಗೌಡ ಅವರಿಗೆ 42 ವರ್ಷ. ಪದವಿ ಮುಗಿದ ನಂತರ ಶ್ರೀವಾಸ ಗೌಡ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಆರಂಭಿಸುತ್ತಾರೆ. ಆದರೆ ಅದ್ಯಾಕೋ ಆ ಕೆಲಸ ಅವರಿಗೆ ಹಿಡಿಸುವುದಿಲ್ಲ. ತನ್ನಿಷ್ಟದಂತೆ ಸ್ವಂತ ಉದ್ಯೋಗ ಮಾಡುವ ಬಗ್ಗೆ ಯೋಚಿಸುತ್ತಾರೆ. ಈ ನಿಟ್ಟಿನಲ್ಲಿ  2020 ರಲ್ಲಿ, ಕೆಲಸ ಬಿಟ್ಟು ಇರಾ ಗ್ರಾಮಕ್ಕೆ ಆಗಮಿಸುತ್ತಾರೆ. ಈ ಗ್ರಾಮದಲ್ಲಿ ಸುಮಾರು 2.3 ಎಕರೆ ಜಾಗದಲ್ಲಿ ಕತ್ತೆಗಳನ್ನು ಸಾಕುವ ನಿರ್ಧಾರಕ್ಕೆ ಬರುತ್ತಾರೆ. 

ಇದನ್ನೂ ಓದಿ :  ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ಏಕೆ ತುಟಿ ಬಿಚ್ಚುವುದಿಲ್ಲ?: ಕಾಂಗ್ರೆಸ್

ಆದರೆ ತಾವು ಅಂದುಕೊಂಡಂತೆ ನಡೆದುಕೊಳ್ಳುವುದು ಶ್ರೀನಿವಾಸ್ ಗೌಡ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಮನೆಯವರಿಂದ ಸಾಕಷ್ಟು ವಿರೋಧ ಕೇಳಿ ಬಂತು. ಆದರೆ  ಶ್ರೀನಿವಾಸ್ ಗೌಡ  ಮಾತ್ರ ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದರು. ತಮ್ಮ ಉದ್ಯಮವನ್ನು  20 ಕತ್ತೆಗಳೊಂದಿಗೆ ಪ್ರಾರಂಭಿಸಿದರು. ಅದೆಷ್ಟೋ ಜನರ ಕುಹಕ ಮಾತುಗಳನ್ನು ಕೇಳ ಬೇಕಾಯಿತು. ಸಿಕ್ಕ ಸಿಕ್ಕವರೆಲ್ಲಾ ಬುದ್ದಿ ಹೇಳುವವರೇ ಆಗಿದ್ದರು. ಆದರೆ ಶ್ರೀನಿವಾಸಗೌಡ ಅವರಿಗೆ ಮಾತ್ರ ತಾನು ಏನು ಮಾಡಬೇಕು ಎನ್ನುವುದು ಸ್ಪಷ್ಟವಾಗಿತ್ತು. 

17 ಲಕ್ಷಕ್ಕಿಂತ ಹೆಚ್ಚಿನ ಆರ್ಡರ್‌ಗಳು :
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ವಂತ ಫಾರ್ಮ್ ಮಾಡಿಕೊಂಡಿದ್ದಾರೆ ಶ್ರೀನಿವಾಸಗೌಡ. ಕರ್ನಾಟಕದಲ್ಲಿ ಈ ರೀತಿಯ ಫಾರ್ಮ್ ಅನ್ನು ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ. ತಾನು ಈ ಉದ್ಯಮ ಆರಂಭಿಸುವಾಗ ಇದರ ಬಗ್ಗೆ ಸಂಪೂರ್ಣ ಸಂಶೋಧನೆ ನಡೆಸಿದ್ದರು. ಕತ್ತೆಯ ಹಾಲು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಅದಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನುವುದು ಶ್ರೀನಿವಾಸಗೌಡ ಅವರಿಗೆ ಮೊದಲೇ ತಿಳಿದಿತ್ತು.ಕತ್ತೆಯ 30 ಮಿಲಿ ಹಾಲಿನ ಬೆಲೆ 150 ರೂ. ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಇದರ ಅಗತ್ಯ ಬಹಳ ಇರುತ್ತದೆ.  ಇವರಿಗೆ ಈವರೆಗೆ 17 ಲಕ್ಷ ರೂ.ಗಳ  ಆರ್ಡರ್ ಬಂದಿದೆಯಂತೆ.  ಸದ್ಯದಲ್ಲೇ ನೇರವಾಗಿ ಕತ್ತೆ ಹಾಲು ಮಾರಾಟ ಮಾಡುವ ಬಗ್ಗೆ ಕೂಡಾ ಯೋಚನೆ ಮಾಡಿದ್ದಾರೆ. ಅದನ್ನು ಮಾಲ್‌ಗಳು, ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳಿಗೆ ಸರಬರಾಜು ಮಾಡುವ ಉದ್ದೇಶ ಇವರದ್ದು. 

ಇದನ್ನೂ ಓದಿ : Arecanut Price: ರಾಜ್ಯದಲ್ಲಿ ಮತ್ತೆ ಭಾರೀ ಕುಸಿತ ಕಂಡ ಅಡಿಕೆ ಧಾರಣೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News