Surya Rashi Parivartan 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ದೇವ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಎನ್ನಲಾಗಿದೆ. ಈ ರೀತಿ ಒಂದು ವರ್ಷದಲ್ಲಿ ಸೂರ್ಯ ಎಲ್ಲಾ 12 ರಾಶಿಗಳಲ್ಲಿ ಗೋಚರಿಸುತ್ತಾನೆ. ನಾಳೆ ಅಂದರೆ ಜೂನ್ 15, 2022ರಂದು ಸೂರ್ಯ ಮಿಥುನ ರಾಶಿಯಲ್ಲಿ ಗೋಚರಿಸಲಿದ್ದಾನೆ. ಎಲ್ಲಾ ಗ್ರಹಗಳಿಗೆ ರಾಜ ಎನ್ನಲಾಗುವ ಸೂರ್ಯ, ಪ್ರಸ್ತುತ ಶುಕ್ರಾಧಿಪ ರಾಶಿಯಾಗಿರುವ ವೃಷಭ ರಾಶಿಯಲ್ಲಿದ್ದಾನೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಸಾಹಸ, ಯಶಸ್ಸು, ಆತ್ಮ ವಿಶ್ವಾಸ, ಘನತೆ-ಗೌರವ ಹಾಗೂ ಆರೋಗ್ಯದ ಕಾರಕ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಸೂರ್ಯ ಬಲಿಷ್ಠ ಸ್ಥಾನದಲ್ಲಿರುವುದು ವೃತ್ತಿಜೀವನದಲ್ಲಿ ಅಭಿವೃದ್ಧಿ ಹಾಗೂ ಘನತೆ-ಗೌರವವನ್ನು ದಯಪಾಲಿಸುತ್ತದೆ. ಸೂರ್ಯನ ಮಿಥುನ ರಾಶಿ ಪ್ರವೇಶ ಯಾವ ಯಾವ ರಾಶಿಗಳಿಗೆ ಶುಭ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
ಈ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ
ವೃಷಭ ರಾಶಿ: ಸೂರ್ಯನ ಮಿಥುನ ರಾಶಿ ಗೋಚರ ವೃಷಭ ರಾಶಿಯವರ ಆದಾಯ ಹೆಚ್ಚಿಸಲಿದೆ. ಅವರ ನಿಂತುಹೋಗಿರುವ ಹಣ ಅವರಿಗೆ ವಾಪಸ್ ಸಿಗಲಿದೆ. ಹೊಸ ನೌತರಿ ಅಥವಾ ಇದ್ದ ನೌಕರಿಯಲ್ಲಿಯೇ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜಾತಕದವರ ಪಾಲಿಗೆ ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ. ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಗೆ ಸೂರ್ಯ ಅಧಿಪತಿ. ಹೀಗಾಗಿ ಸೂರ್ಯನ ಈ ರಾಶಿ ಪರಿವರ್ತನೆ, ಸಿಂಹ ಜಾತಕದವರಿಗೆ ಅತ್ಯಂತ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆರ್ಥಿಕ ಲಾಭ ಸಿಗಲಿದೆ. ಆದಾಯ ಹೆಚ್ಚಾಗಿ, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಘನತೆ-ಗೌರವ ಹೆಚ್ಚಾಗಿ, ವೃತ್ತಿಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಬಡ್ತಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮಕರ ರಾಶಿ: ಮಕರ ರಾಶಿಯ ಜಾತಕದವರಿಗೆ ಸೂರ್ಯನ ಮಿಥುನ ರಾಶಿ ಪ್ರವೇಶ ಕೆಲಸದ ಕ್ಷೇತ್ರದಲ್ಲಿ ಜಬರ್ದಸ್ತ್ ಲಾಭ ನೀಡಲಿದೆ. ಈ ಅವಧಿಯಲ್ಲಿ ನೀವು ಸಾಹಸ ಹಾಗೂ ಆತ್ಮವಿಶ್ವಾಸದಿಂದ ತುಂಬಿರುವಿರಿ. ಇದರಿಂದ ನೀವು ಪ್ರತಿಯೊಂದು ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಿರಿ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ವಿವಾದಾತ್ಮಕ ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ.
ಇದನ್ನೂ ಓದಿ-Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ
ಕುಂಭ ರಾಶಿ: ಸೂರ್ಯನ ಮಿಥುನ ಗೋಚರ ಕುಂಭ ರಾಶಿಯ ಜಾತಕದವರ ಪಾಲಿಗೆ ಶುಭ ಫಲದಾಯಿ ಸಬೀತಾಗಲಿದೆ. ಹೊಸ ನೌಕರಿಯ ಹುಡುಕಾಟ ಅಂತ್ಯವಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ಕೌಟುಂಬಿಕ ವಾತಾವರಣ ಸಂತಸದಿಂದ ಕೂಡಿರಲಿದೆ. ವೈವಾಹಿಕ ಜೀವನ ಉತ್ತಮವಾಗಲಿದೆ. ಒಟ್ಟಾರೆ ಹೇಳುವುದಾದರೆ, ಈ ಸಮಯ ನಿಮಗೆ ಒಳ್ಳೆಯ ದಿನಗಳನ್ನು ತರಲಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-Rahu Gochar 2022: ನಾಳೆಯಿಂದ 8 ತಿಂಗಳವರೆಗೆ ಈ ರಾಶಿಗಳ ಮೇಲೆ ಧನವೃಷ್ಟಿ, ಸಿಗಲಿದೆ ರಾಹು ನಕ್ಷತ್ರ ಪರಿವರ್ತನೆಯ ಲಾಭ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.