SBI ಗ್ರಾಹಕರಿಗೆ ಸಿಹಿ ಸುದ್ದಿ; ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚಳ!

ಈ ದರ ಜುಲೈ 30ರಿಂದಲೇ ಜಾರಿಗೆ ಬರಲಿದ್ದು, 1 ಕೋಟಿ ರೂ. ಒಳಗಿನ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ. 

Last Updated : Jul 30, 2018, 03:54 PM IST
SBI ಗ್ರಾಹಕರಿಗೆ ಸಿಹಿ ಸುದ್ದಿ; ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚಳ! title=

ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಅವಧಿಯ ಠೇವಣಿ(ಫಿಕ್ಸೆಡ್ ಡೆಪಾಸಿಟ್)ಗಳ ಮೇಲಿನ ಬಡ್ಡಿದರವನ್ನು 10 ಬೇಸಿಕ್ ಪಾಯಿಂಟ್ಗಳವರೆಗೆ ಹೆಚ್ಚಿಸಿದೆ. ಈ ದರ ಜುಲೈ 30ರಿಂದಲೇ ಜಾರಿಗೆ ಬರಲಿದ್ದು, 1 ಕೋಟಿ ರೂ. ಒಳಗಿನ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ. 

ಈ ಪರಿಷ್ಕೃತ ಬಡ್ಡಿ ದರ ರಚನೆಯಡಿಯಲ್ಲಿ, 1 ವರ್ಷದಿಂದ 2 ವರ್ಷಗಳವರೆಗಿನ ಠೇವಣಿಗಳಿಗೆ ಇದ್ದ ಶೇ.6.65 ಬಡ್ಡಿ ದರ, ಶೇ.6.7ರಷ್ಟು ಹೆಚ್ಚಾಗಲಿದೆ. ಹಿರಿಯ ನಾಗರಿಕರಿಗೆ ಈ ಹಿಂದೆ ಇದ್ದ ಶೇ.7.15 ಬಡ್ಡಿ ದರ, ಪರಿಷ್ಕರಣೆ ನಂತರ ಶೇ.7.2ರಷ್ಟು ಹೆಚ್ಚಾಗಲಿದೆ. 2 ವರ್ಷದಿಂದ 3 ವರ್ಷಗಳವರೆಗೆ ಹೂಡಿಕೆಯಲ್ಲಿ ಬಡ್ಡಿಯ ದರವನ್ನು ಶೇ.7.15 ರಿಂದ ಶೇ.7.3ಕ್ಕೆ ಪರಿಷ್ಕರಿಸಲಾಗಿದೆ.

ಅವಧಿ  28.05.2018ರಿಂದ ಅನ್ವಯವಾಗಿರುವ ಪ್ರಸ್ತುತ ಬಡ್ಡಿ ದರ  ಪರಿಷ್ಕೃತ ಬಡ್ಡಿದರ-30.07.2018ರಿಂದ ಅನ್ವಯ
7 ದಿನಗಳಿಂದ 45 ದಿನಗಳವರೆಗೆ 5.75 5.75
46 ದಿನಗಳಿಂದ 179 ದಿನಗಳವರೆಗೆ  6.25 6.25
180 ದಿನಗಳಿಂದ 210 ದಿನಗಳವರೆಗೆ 6.35 6.35
211 ದಿನಗಳಿಂದ 1 ವರ್ಷದ ವರೆಗೆ 6.40 6.40
1 ವರ್ಷದಿಂದ 2 ವರ್ಷಗಳ ಒಳಗೆ  6.65 6.70
2 ವರ್ಷಗಳಿಂದ 3 ವರ್ಷಗಳವರೆಗೆ  6.65 6.75
3 ವರ್ಷಗಳಿಂದ 5 ವರ್ಷಗಳ ಒಳಗೆ  6.70 6.80
5 ವರ್ಷಗಳಿಂದ 10 ವರ್ಷಗಳವರೆಗೆ 6.75 6.85

ಹಿರಿಯ ನಾಗರಿಕರ ನಿಶ್ಚಿತ ಠೇವಣಿ ಮೇಲಿನ ಪರಿಷ್ಕೃತ ಬಡ್ಡಿ ದರ

ಅವಧಿ  28.05.2018ರಿಂದ ಅನ್ವಯವಾಗಿರುವ ಪ್ರಸ್ತುತ ಬಡ್ಡಿ ದರ  ಪರಿಷ್ಕೃತ ಬಡ್ಡಿದರ-30.07.2018ರಿಂದ ಅನ್ವಯ
7 ದಿನಗಳಿಂದ 45 ದಿನಗಳವರೆಗೆ 6.25 6.25
46 ದಿನಗಳಿಂದ 179 ದಿನಗಳವರೆಗೆ  6.75 6.75
180 ದಿನಗಳಿಂದ 210 ದಿನಗಳವರೆಗೆ 6.85 6.85
211 ದಿನಗಳಿಂದ 1 ವರ್ಷದ ವರೆಗೆ 6.90 6.90
1 ವರ್ಷದಿಂದ 2 ವರ್ಷಗಳ ಒಳಗೆ  7.15 7.20
2 ವರ್ಷಗಳಿಂದ 3 ವರ್ಷಗಳವರೆಗೆ  7.15 7.25
3 ವರ್ಷಗಳಿಂದ 5 ವರ್ಷಗಳ ಒಳಗೆ  7.20 7.30
5 ವರ್ಷಗಳಿಂದ 10 ವರ್ಷಗಳವರೆಗೆ 7.25 7.35

 

Trending News