ಬೆಂಗಳೂರು: ಆನ್ಲೈನ್ ಸೇವಾ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಪ್ರಸಿದ್ಧ ‘ಎಕ್ಸ್ ಪೇ- ಲೈಫ್’(XPay.Life) ಸಂಸ್ಥೆಯು 3ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಗ್ರಾಮೀಣ ಪ್ರದೇಶಕ್ಕೂ ತಮ್ಮ ಸೇವೆಯನ್ನು ತಲುಪಿಸುವ ಉದ್ದೇಶ ಹೊಂದಿರುವ ಈ ಸಂಸ್ಥೆ ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಸಂಸ್ಥೆಯ 3ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿಯೇ XPay.Life ಯುಪಿಐ(Unified Payments Interface) ಸೇವೆ ಪ್ರಾರಂಭಿಸಿದೆ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಯುಪಿಐ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ‘ಎಕ್ಸ್ ಪೇ –ಲೈಫ್’ ಸಂಸ್ಥಾಪಕ ಹಾಗೂ ಸಿಇಓ ರೋಹಿತ್ ಕುಮಾರ್, ಸಿಒಒ ದೀಪಕ್ ಅನಂತ್, ಸಿಎಸ್ಓ ಕಾರ್ತಿಕ್ ಕಲಾಧಾರ್ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: Smart 4g Electric Meters: ಬಂದಿದೆ 4G ವಿದ್ಯುತ್ ಬಿಲ್ ಮೀಟರ್ .! ಇದು ಹೇಗೆ ಕೆಲಸ ಮಾಡಲಿದೆ ಗೊತ್ತಾ ?
ಸಂಸ್ಥಾಪಕ ರೋಹಿತ್ ಕುಮಾರ್ ಮಾತನಾಡಿ, ‘ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಜಿಲ್ಲಾ ಸಹಕಾರ ಬ್ಯಾಂಕ್ ಸೇರಿದಂತೆ ನಮ್ಮ ಸಂಸ್ಥೆಯು DCCBs ಬ್ಯಾಂಕ್ಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಜನರು ಹೂಡಿಕೆ ಮಾಡುವ ಮತ್ತು ವ್ಯವಹರಿಸುವ ಹಣಕ್ಕೆ ಅತ್ಯತ್ತಮವಾದ ಸುರಕ್ಷತೆ ಇದ್ದು, ನಮ್ಮ ಹಾಗೂ ಜನರ ಸಂಪರ್ಕ ಉತ್ತಮವಾಗಿದೆ’ ಎಂದು ಹೇಳಿದರು. ‘ಸದ್ಯ ನಮ್ಮ ಸೇವೆಯನ್ನು ಇದೀಗ ಗ್ರಾಮೀಣ ಪ್ರದೇಶಗಳತ್ತ ತಲುಪಿಸುವ ಕೆಲಸ ಮಾಡುತ್ತಿದ್ದು, ನೂತನವಾಗಿ UPI ಸೇವೆ ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ 15ಕ್ಕೂ ಹೆಚ್ಚು ರಾಜ್ಯ, 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ’ ಅಂತಾ ಹೇಳಿದರು.
ಇನ್ನು ಕಾರ್ತಿಕ್ ಕಲಾಧಾರ್ ಮಾತನಾಡಿ, ‘ಎಕ್ಸ್ ಪೇ- ಲೈಫ್’ನ UPI ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚೆಚ್ಚು ತಲುಪಿಸಿ ಹಣಕಾಸು ಕ್ಷೇತ್ರವನ್ನು ಬಲಪಡಿಸುವ ಉದ್ದೇಶ ನಮ್ಮದಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ: ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.