ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಹಿಂದೂಸ್ತಾನಿ ಸಂಗೀತ ಶೈಲಿ ಮೂಲಕ ಎಲ್ಲರ ಗಮನ ಸೆಳೆದಿದ್ದ ಜ್ಞಾನೇಶ್ವರ್, ಈಗ ಕನ್ನಡದ ಚಂದನವನಕ್ಕೆ ಹಿನ್ನಲೆ ಗಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ. ರಿಯಾಲಿಟಿ ಶೋದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಜ್ಞಾನೇಶ್ ನ ಕಂಠಕ್ಕೆ ಮನಸೋತುಹೊಗಿ ಇತನನ್ನು ಶಿಶು ತಾನ್ ಸೆನ್ ಎಂದು ಕರೆಯುತ್ತಿದಿದ್ದರು.
ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ 'ಕ್ರಾಪು ಕೂದಲು ಕೂಲಿಂಗ್ ಗ್ಲಾಸ್ ಹಳೆಯ ನಿಕ್ಕರು' ಎನ್ನುವ ಹಾಡಿಗೆ ಹಿನ್ನಲೆ ಗಾಯಕರಾಗಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ವೀರೇಶ್ ಶಿವಮೂರ್ತಿ ತ್ರಿಲೋಕ್ ತ್ರಿವಿಕ್ರಮ ಗೋಕುಲ್ ಅಭಿಷೇಕ ಅವರು ಈ ಚಿತ್ರಕ್ಕಾಗಿ ಸಾಹಿತ್ಯ ರಚಿಸಿದ್ದಾರೆ.
ಈ ಚಿತ್ರದ ತಾರಾಗಣದಲ್ಲಿ ಪ್ರಮುಖವಾಗಿ ಅನಂತ್ ನಾಗ್, ಸಂಪತ್ ಪ್ರಮೋದ್ ಶೆಟ್ಟಿ, ಸಪ್ತಾ ಪವೂರ್, ಮಹೇಂದ್ರಾ ಸೋಹನ್ ಶೆಟ್ಟಿಯವರು ನಟಿಸಿದ್ದಾರೆ.ಈ ಚಿತ್ರವನ್ನು ರಿಶಬ್ ಶೆಟ್ಟಿ ಯವರು ನಿರ್ಮಿಸಿ ನಿರ್ದೇಶಿಸಿದ್ದು, ಇದು ಎಷ್ಟರ ಮಟ್ಟಿಗೆ ಈ ಚಿತ್ರ ಯಶಸ್ಸಾಗಲಿದೆ ಎನ್ನುವುದನ್ನು ತಿಳಿಯಲು ನೀವು ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕು. ನಿರ್ದೇಶಕರು ಈಗ ಉತ್ತರ ಕರ್ನಾಟಕದ ಪ್ರತಿಭೆ ಜ್ಞಾನೇಶ್ ನನ್ನು ಈ ಚಿತ್ರದ ಮೂಲಕ ಹಿನ್ನಲೆ ಗಾಯಕನಾಗಿ ಪರಿಚಯಸಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ.