Business Idea: ತುಳಸಿ ಕೃಷಿ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಅತಿ ಕಡಿಮೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು.
ಬೆಂಗಳೂರು : Business Idea: ಸಣ್ಣ ಹೂಡಿಕೆ ಮೂಲಕ ವ್ಯಾಪಾರವನ್ನು ಆರಂಭಿಸಿ, ಉತ್ತಮ ಲಾಭ ಗಳಿಸಲು ಬಯಸುವುದಾದರೆ ಈ ಸುದ್ದಿ ನಿಮಗೆ ಪ್ರಯೋಜನವಾಗಬಹುದು. ಈ ವ್ಯವಹಾರದಲ್ಲಿ, ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ ಮನೆಯಲ್ಲಿಯೇ ಈ ವ್ಯವಹಾರವನ್ನು ಆರಂಭಿಸಬಹುದು. ತುಳಸಿ ಕೃಷಿ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಅತಿ ಕಡಿಮೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ತುಳಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಆಯುರ್ವೇದ ಮತ್ತು ನೈಸರ್ಗಿಕ ಔಷಧಗಲಿಗಾಗಿ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿ ತುಳಸಿಯನ್ನು ಸಹ ಹೆಚ್ಚು ಬಳಸಲಾಗುತ್ತದೆ. ಹಾಗಾಗಿ ತುಳಸಿಗೆ ಬೇಡಿಕೆ ಹೆಚ್ಚಿದೆ.
ತುಳಸಿ ಬೇಸಾಯವನ್ನು ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಮಾಡಲಾಗುತ್ತದೆ. ಸಾಮಾನ್ಯ ಸಸ್ಯಗಳನ್ನು 45 x 45 ಸೆಂ.ಮೀ ಅಂತರದಲ್ಲಿ ನೆಡಬೇಕು. ಆದರೆ RRLOC 12 ಮತ್ತು RRLOC 14 ಜಾತಿಗಳಿಗೆ 50 x 50 ಸೆಂ.ಮೀ ಅಂತರ ಇಡಬೇಕು. ಈ ಸಸ್ಯಗಳನ್ನು ನೆಟ್ಟ ತಕ್ಷಣ ಸ್ವಲ್ಪ ನೀರಾವರಿ ಅಗತ್ಯ. ತುಳಸಿ ಬೆಳೆ ಕಟಾವು ಮಾಡುವ 10 ದಿನಗಳ ಮೊದಲು ನೀರಾವರಿಯನ್ನು ನಿಲ್ಲಿಸಬೇಕು ಎಂದು ತುಳಸಿ ಕೃಷಿ ತಜ್ಞರು ಹೇಳುತ್ತಾರೆ.
ತುಳಸಿ ಗಿಡಗಳ ಎಲೆಗಳು ದೊಡ್ಡದಾಗಿದ್ದಾಗ ಈ ಗಿಡವನ್ನು ಕೊಯ್ಲು ಮಾಡಲಾಗುತ್ತದೆ. ಈ ಸಸ್ಯಗಳು ಹೂಬಿಟ್ಟಾಗ, ಅವುಗಳಲ್ಲಿ ಎಣ್ಣೆಯ ಪ್ರಮಾಣವು ಕಡಿಮೆಯಾಗುತ್ತದೆ. ಆದ್ದರಿಂದ ಈ ಸಸ್ಯಗಳು ಹೂಬಿಡಲು ಪ್ರಾರಂಭಿಸಿದಾಗ, ಅದನ್ನು ಕೊಯ್ಲು ಮಾಡಬೇಕು.
ಈಗ ಈ ಬೆಳೆಯನ್ನು ಎಲ್ಲಿ ಮಾರುವುದು ಎಂಬ ಪ್ರಶ್ನೆ ಬರುತ್ತದೆ. ಮಾರುಕಟ್ಟೆಯ ಏಜೆಂಟರನ್ನು ಸಂಪರ್ಕಿಸುವ ಮೂಲಕ ಅಥವಾ ನೇರವಾಗಿ ಮಾರುಕಟ್ಟೆಗೆ ಹೋಗಿ ಗ್ರಾಹಕರನ್ನು ಸಂಪರ್ಕಿಸುವ ಮೂಲಕ ಈ ಸಸ್ಯಗಳನ್ನು ಮಾರಾಟ ಮಾಡಬಹುದು. ಇದರ ಹೊರತಾಗಿ, ಔಷಧೀಯ ಕಂಪನಿಗಳು ಅಥವಾ ಅಂತಹ ಏಜೆನ್ಸಿಗಳಿಗೆ ಒಪ್ಪಂದದ ಮೇಲೆ ಸಸ್ಯಗಳನ್ನು ಮಾರಾಟ ಮಾಡಬಹುದು.
ಈ ವ್ಯವಹಾರದಲ್ಲಿ ಬಿತ್ತನೆಯ ನಂತರ ಕೊಯ್ಲು ಮಾಡಲು ಹೆಚ್ಚು ಕಾಯಬೇಕಾಗಿಲ್ಲ. ಇದರಲ್ಲಿ 3 ತಿಂಗಳ ನಂತರವೇ ಈ ಗಿಡ ತಯಾರಾಗುತ್ತಿದ್ದು, ತುಳಸಿ ಬೆಳೆ ಸುಮಾರು 3 ಲಕ್ಷ ರೂಪಾಯಿಗೆ ಮಾರಾಟವಾಗಲಿದೆ. ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಅನೇಕ ಕಂಪನಿಗಳಿಗೆ ತುಳಸಿ ಸಸ್ಯಗಳ ಅಗತ್ಯವಿರುತ್ತದೆ. ಡಾಬರ್, ವೈದ್ಯನಾಥ್, ಪತಂಜಲಿಯಂತಹ ಅನೇಕ ಕಂಪನಿಗಳು ತುಳಸಿಯ ಗುತ್ತಿಗೆ ಕೃಷಿ ಮಾಡುತ್ತಿವೆ. ಅಂದರೆ ಕೇವಲ 3 ತಿಂಗಳಲ್ಲಿ 3 ಲಕ್ಷ ಬಂಪರ್ ಲಾಭ ಸಿಗಲಿದೆ.
ಈ ವ್ಯವಹಾರದ ದೊಡ್ಡ ವೈಶಿಷ್ಟ್ಯವೆಂದರೆ ತುಳಸಿಯನ್ನು ಬೆಳೆಸಲು, ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. ಮಾತ್ರವಲ್ಲ ಈ ಬೆಲೆ ಬೆಳೆಯಲು ಬಹಳ ವಿಶಾಲವಾದ ಭೂಮಿಯಲ್ಲಿ ಬೆಳೆಸುವ ಅಗತ್ಯವಿರುವುದಿಲ್ಲ. ಕೇವಲ 15000 ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಬಹುದು.