ಸೌತ್‌ ಆಫ್ರಿಕಾದಲ್ಲಿ ನಡೆಯುತ್ತಾ ಕನ್ನಡಿಗನ ಕಮಾಲ್‌: ಕೆಎಲ್‌ ರಾಹುಲ್‌ ಮುಂದಿವೆ ಈ ಸವಾಲ್‌!

ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ ಭಾರತವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ದೊಡ್ಡ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಆದರೆ ಕೆಎಲ್ ರಾಹುಲ್‌ಗೆ ಯುವ ಆಟಗಾರರೊಂದಿಗೆ ಸರಣಿ ಗೆಲ್ಲುವಿದೇ ದೊಡ್ಡ ಸವಾಲಾಗಿದೆ.

Written by - Bhavishya Shetty | Last Updated : Jun 4, 2022, 11:07 AM IST
  • ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಶೀಘ್ರವೇ ಪ್ರಾರಂಭ
  • ಸರಣಿಯ ನಾಯಕತ್ವ ವಹಿಸಿದ ಕೆಎಲ್‌ ರಾಹುಲ್‌
  • ಕನ್ನಡಿಗ ಮುಂದಿದೆ ಈ ಸವಾಲುಗಳು
ಸೌತ್‌ ಆಫ್ರಿಕಾದಲ್ಲಿ ನಡೆಯುತ್ತಾ ಕನ್ನಡಿಗನ ಕಮಾಲ್‌: ಕೆಎಲ್‌ ರಾಹುಲ್‌ ಮುಂದಿವೆ ಈ ಸವಾಲ್‌!  title=
KL rahul

ಜೂನ್‌ 9 ರಿಂದ 19ರವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಅಂತಾರಾಷ್ಟ್ರೀಯ ಸರಣಿಯ ನಾಯಕತ್ವವನ್ನು ಕನ್ನಡಿಗ ಕೆ.ಎಲ್‌ ರಾಹುಲ್‌ ವಹಿಸಿಕೊಂಡಿದ್ದು, ಸೌತ್‌ ಆಫ್ರಿಕಾ ವಿರುದ್ಧ ರಾಹುಲ್‌ ಪಡೆ ಯಾವ ರೀತಿ ಕಮಾಲ್‌ ಮಾಡಲಿದೆ ಎಂಬುದು ಕ್ರಿಕೆಟ್‌ ಪ್ರೇಮಿಗಳ ಕುತೂಹಲವಾಗಿದೆ. 

ಇದನ್ನು ಓದಿ: Ind vs SA : ಕೆಎಲ್ ರಾಹುಲ್ ಗೆ ಅಸ್ತ್ರವಾಗಲಿದ್ದಾರೆ ಈ ಮಾಂತ್ರಿಕ ಬೌಲರ್!

ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ ಭಾರತವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ದೊಡ್ಡ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಆದರೆ ಕೆಎಲ್ ರಾಹುಲ್‌ಗೆ ಯುವ ಆಟಗಾರರೊಂದಿಗೆ ಸರಣಿ ಗೆಲ್ಲುವಿದೇ ದೊಡ್ಡ ಸವಾಲಾಗಿದೆ. ನಾಯಕತ್ವ ಲೆಕ್ಕಾಚಾರದಲ್ಲಿ ನೋಡೊದಾದ್ರೆ ರಾಹುಲ್‌ ಅವರ ಸ್ಥಾನ ತೀರ ಕೆಳಮಟ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಸರಣಿಯು ರಾಹುಲ್‌ಗೆ ಬಹಳ ಮಹತ್ವದ್ದಾಗಿದೆ ಎನ್ನಬಹುದು. 

ಕೆಎಲ್ ರಾಹುಲ್ ಎರಡನೇ ಬಾರಿಗೆ ಟೀಂ ಇಂಡಿಯಾ ನಾಯಕತ್ವವನ್ನು ವಹಿಸಲಿದ್ದಾರೆ. ಆದರೆ ನಾಯಕನಾಗಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ಒಂದು ಟೆಸ್ಟ್ ಮತ್ತು ಮೂರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಈ ಎಲ್ಲಾ ಪಂದ್ಯಗಳಲ್ಲಿ ತಂಡವು ಸೋಲನ್ನು ಎದುರಿಸಬೇಕಾಯಿತು. ಆದ್ದರಿಂದ ಈ ಸರಣಿಯು ಅವರಿಗೆ ಬಹಳ ಮುಖ್ಯವಾಗಿದೆ. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ನಾಯಕತ್ವದ ಪೈಪೋಟಿಯಲ್ಲಿದ್ದಾರೆ. ಆದರೆ ಆಯ್ಕೆದಾರರು ರಾಹುಲ್‌ಗೆ ನಾಯಕನಾಗಿ ಸಾಬೀತುಪಡಿಸಲು ಮತ್ತೊಂದು ಅವಕಾಶವನ್ನು ನೀಡಿದ್ದಾರೆ.

ಐಪಿಎಲ್ 2022 ಕೆಎಲ್ ರಾಹುಲ್‌ಗೆ ನಾಯಕನಾಗಿ ಉತ್ತಮ ಸೀಸನ್‌ ಆಗಿತ್ತು. ಈ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕತ್ವವನ್ನು ವಹಿಸಿಕೊಂಡಿದ್ದರು. 15 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿತ್ತು. ಅಷ್ಟೇ ಅಲ್ಲದೆ, ಕೆಎಲ್ ರಾಹುಲ್‌ ಈ ಸೀಸನ್‌ನಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್‌ ಮಾಡಿದ್ದರು. ಆಡಿರುವ 15 ಪಂದ್ಯಗಳಲ್ಲಿ 51.33 ಸರಾಸರಿಯಲ್ಲಿ 616 ರನ್ ಗಳಿಸಿದ್ದರು. 4 ಅರ್ಧಶತಕ ಮತ್ತು 2 ಶತಕಗಳನ್ನು ಸಹ ಬಾರಿಸಿದ್ದಾರೆ. 

ಇದನ್ನು ಓದಿ: 'ಅರ್ಜುನ್ ತೆಂಡೂಲ್ಕರ್ ಇನ್ನೂ ಐಪಿಎಲ್‌ಗೆ ಸಿದ್ಧವಾಗಿಲ್ಲ'

ರಾಹುಲ್‌ಗೆ  ಹಾರ್ದಿಕ್  ಪ್ರತಿಸ್ಪರ್ಧಿ: 
ಐಪಿಎಲ್ 2022 ರ ನಂತರ, ಹಾರ್ದಿಕ್ ಪಾಂಡ್ಯ ನಾಯಕತ್ವದ ದೊಡ್ಡ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕನಾಗಿ ತಮ್ಮ ಮೊದಲ IPL ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಅವರ ತಂಡ ಅಮೋಘ ಪ್ರದರ್ಶನವನ್ನು ನೀಡಿತ್ತು. ನಾಯಕನಾಗಿ ಹಾರ್ದಿಕ್ ಪಾಂಡ್ಯ 487 ರನ್ ಗಳಿಸಿ 8 ವಿಕೆಟ್ ಕಬಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವ ವಹಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News