Weight Loss Tips: ಸೀಬೆ ಹಣ್ಣಿನ ಎಲೆಗಳ ಸೇವನೆಯಿಂದಾಗುವ ಈ ಅದ್ಭುತ ಲಾಭ ನಿಮಗೆ ತಿಳಿದಿದೆಯೇ?

Benefits of Guava Leaves: ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು, ಹುಳಿ-ಸಿಹಿ ಅದರ ರುಚಿ, ಆದರೆ ತೂಕ ಇಳಿಕೆಗೆ ಸೀಬೆಹಣ್ಣಿನ ಮರದ ಎಲೆಗಳು ಒಂದು ಪರಿಣಾಮಕಾರಿ ಮನೆಮದ್ದಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಸೀಬೆಹಣ್ಣಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : Jun 3, 2022, 10:37 PM IST
  • ಹೆಚ್ಚು ಕಡಿಮೆ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು,
  • ಆದರೆ ತೂಕ ಇಳಿಕೆಗೆ ಸೀಬೆಹಣ್ಣಿನ ಮರದ ಎಲೆಗಳು ಒಂದು ಪರಿಣಾಮಕಾರಿ ಮನೆಮದ್ದಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?
  • ಇಲ್ಲ ಎಂದಾದರೆ ಸೀಬೆಹಣ್ಣಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
Weight Loss Tips: ಸೀಬೆ ಹಣ್ಣಿನ ಎಲೆಗಳ ಸೇವನೆಯಿಂದಾಗುವ ಈ ಅದ್ಭುತ ಲಾಭ ನಿಮಗೆ ತಿಳಿದಿದೆಯೇ? title=
Guava Leaves Health Benefits

Benefits of Guava Leaves: ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳಲ್ಲಿ ಒಂದು, ಸಿಹಿ-ಹುಳಿ ಅದರ ರುಧಿ, ಪ್ರಾಚೀನ ಕಾಲದಲ್ಲಿ ಇದನ್ನು ಮಕರಂದ ಎಂದೂ ಕೂಡ ಕರೆಯಲಾಗುತ್ತಿತ್ತು. ಇದು ತುಂಬಾ ಟೇಸ್ಟಿ ಮತ್ತು ಇದು ತುಂಬಾ ಪೌಷ್ಟಿಕವಾದ ಹಣ್ಣು, ಇದನ್ನು ಔಷಧಿಯಾಗಿಯೂ ಬಳಸುತ್ತಾರೆ ಮತ್ತು ಇದರ ಹಣ್ಣು ಮಾತ್ರವಲ್ಲದೆ ಇದರ ಎಲೆಗಳೂ ಕೂಡ ಹಲವು ಔಷಧೀಯ ಗುಣಗಳನ್ನು ಹೊಂದಿವೆ. ಈ ರೀತಿಯಾಗಿ ಸೀಬೆಹಣ್ಣು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಆದರೆ ತೂಕವನ್ನು ಇಳಿಕೆ ಮಾಡಲು ಕೂಡ ಸೀಬೆಹಣ್ಣು ಒಂದು ಪರಿಣಾಮಕಾರಿ ಮದ್ದಾಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.  ಪೇರಳೆ ಹಣ್ಣಿನಿಂದ ತೂಕ ಹೇಗೆ ಕಡಿಮೆಯಾಗುತ್ತದೆ ಮತ್ತು ಇದರ ಹೊರತಾಗಿ ಅದು ಯಾವ ಯಾವ ಪ್ರಯೋಜನಗಳನ್ನು ಹೊಂದಿದೆ ತಿಳಿದುಕೊಳ್ಳೋಣ ಬನ್ನಿ

ಸೀಬೆ ಹಣ್ಣಿನ ಎಲೆಗಳ ಪ್ರಯೋಜನಗಳು
1. ತೂಕ ಇಳಿಕೆ  
ಜನರು ಹೆಚ್ಚಾಗಿ ತಾವು ಸೇವಿಸುವ ಆಹಾರದಿಂದ ಹೆಚ್ಚಿನ ತೂಕವನ್ನು ಪಡೆದುಕೊಳ್ಳುತ್ತಾರೆ, ಇದೇ ಕಾರಣದಿಂದ ತೂಕ ಇಳಿಕೆ ಹೇಗೆ ಮಾಡುವುದು ಎಂಬ ಚಿಂತೆಗೆ ಒಳಗಾಗುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ, ಸೀಬೆ ಹಣ್ಣಿನ ಎಲೆಗಳು ತುಂಬಾ ಪ್ರಯೋಜನಕಾರಿಯಾಗಿವೆ. ಏಕೆಂದರೆ ಇದರಲ್ಲಿ ಸಂಕೀರ್ಣವಾದ ಪಿಷ್ಟ ಕಂಡುಬರುತ್ತದೆ, ಇದು ತೂಕವನ್ನು ಇಳಿಕೆ ಮಾಡಲು ಮತ್ತು ಅದರ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ. ಕಾರ್ಬೋಹೈಡ್ರೇಟ್ ಕಡಿಮೆಯಾಗುವುದರಿಂದ, ಅದು ತೂಕ ಇಳಿಕೆಗೆ ಕಾರಣವಾಗುತ್ತದೆ.

2. ಕೂದಲಿನ ಆರೋಗ್ಯಕ್ಕೆ ಉತ್ತಮ
ಒಳ್ಳೆ ಕೂದಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.  ಆದರೂ ಕೂಡ ತಲೆಕೂದಲಿನ ಸಮಸ್ಯೆ ಇದ್ದೆ ಇರುತ್ತದೆ. ಸೀಬೆ ಹಣ್ಣಿನ ಎಲೆಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳಿಂದ ಕೂದಲು ಸುಂದರವಾಗುವುದರ ಜೊತೆಗೆ ಕೂದಲುಗಳು ದಟ್ಟವಾಗಿ ಬೆಳೆಯುತ್ತವೆ. ಇದಲ್ಲದೆ ಇದರ ಎಲೆಗಳನ್ನು ಕೂದಳುಬಲಿಗೆ ಅನ್ವಯಿಸಿದರೆ, ಅದು ಕೂದಲನ್ನು ರೇಷ್ಮೆಯಂತೆ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

3. ಅಸ್ತಮಾದಿಂದ ಪರಿಹಾರ
ಸಾಮಾನ್ಯವಾಗಿ ಜನರು ಅನುಭವಿಸುವ ಉಸಿರಾಟದ ತೊಂದರೆಗಳಲ್ಲಿ ಅಸ್ತಮಾ ಕೂಡ ಒಂದು. ಸೀಬೆಹಣ್ಣಿನ ಎಲೆಗಳ ದೈನಂದಿನ ಸೇವನೆಯು ಯಾವುದೇ ರೀತಿಯ ಉಸಿರಾಟದ ಸಮಸ್ಯೆಯಿಂದ ರಕ್ಷಣೆ ಒದಗಿಸುತ್ತದೆ,  ಇದರಲ್ಲಿ  ಕಂಡುಬರುವ ಉರಿಯೂತದ ಗುಣಗಳು ಕೇವಲ ಉಸಿರಾಟದ ಸಮಸ್ಯೆ ಅಷ್ಟೇ ಅಲ್ಲ, ಕೆಮ್ಮು, ಕಫ ಮುಂತಾದ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ.

ಇದನ್ನೂ ಓದಿ-Weight Loss Tips: ಈ ಕ್ರಮಗಳನ್ನು ಅನುಸರಿಸಿ ಪ್ರತಿಯೊಂದು ವಯಸ್ಸಿನವರು ಕೂಡ ತೂಕ ಇಳಿಸಿಕೊಳ್ಳಬಹುದು

4. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಹಲವರಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳಿರುತ್ತವೆ, ಇದರಲ್ಲಿ ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳಿವೆ, ಇಂತಹ ಪರಿಸ್ಥಿತಿಯಲ್ಲಿ, ಸೀಬೆ ಹಣ್ಣಿನ ಎಲೆಗಳು ತುಂಬಾ ಪ್ರಯೋಜನಕಾರಿಯಾಗಿವೆ, ಇದರಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಮತ್ತು ಆಂಟಿಮೈಕ್ರೊಬಿಯಲ್ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 

ಇದನ್ನೂ ಓದಿ -Heart Attack: ಯುವ ವಯಸ್ಸಿನ ಜನರು ಏಕೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News