ಸ್ವಯಂ ನಿವೃತ್ತಿ ಸೇವೆಯನ್ನು ಜಾರಿಗೊಳಿಸಿದ ಟಾಟಾ ಮಾಲಿಕತ್ವದ ಏರ್ ಇಂಡಿಯಾ

ತನ್ನ ಉದ್ಯೋಗಿಗಳನ್ನು ಸ್ವಯಂಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಬುಧವಾರದಂದು ಏರ್ ಇಂಡಿಯಾ ಅರ್ಹತಾ ವಯಸ್ಸನ್ನು 55 ರಿಂದ 40 ಕ್ಕೆ ಇಳಿಸಿರುವುದಲ್ಲದೆ ನಗದು ಪ್ರೋತ್ಸಾಹ ಧನವನ್ನು ಘೋಷಿಸಿದೆ.

Written by - Zee Kannada News Desk | Last Updated : Jun 2, 2022, 07:27 PM IST
  • ಕಳೆದ ವರ್ಷ ಅಕ್ಟೋಬರ್ 8 ರಂದು ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು
ಸ್ವಯಂ ನಿವೃತ್ತಿ ಸೇವೆಯನ್ನು ಜಾರಿಗೊಳಿಸಿದ ಟಾಟಾ ಮಾಲಿಕತ್ವದ ಏರ್ ಇಂಡಿಯಾ  title=
file photo

ನವದೆಹಲಿ: ತನ್ನ ಉದ್ಯೋಗಿಗಳನ್ನು ಸ್ವಯಂಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಬುಧವಾರದಂದು ಏರ್ ಇಂಡಿಯಾ ಅರ್ಹತಾ ವಯಸ್ಸನ್ನು 55 ರಿಂದ 40 ಕ್ಕೆ ಇಳಿಸಿರುವುದಲ್ಲದೆ ನಗದು ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಕಳೆದ ವರ್ಷ ಅಕ್ಟೋಬರ್ 8 ರಂದು ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.ಏಪ್ರಿಲ್‌ನಿಂದ, ಏರ್‌ಲೈನ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಏರ್‌ಲೈನ್‌ನ ಉನ್ನತ ನಿರ್ವಹಣೆಯನ್ನು ಮರುಜೋಡಿಸಿದ್ದಾರೆ, ಟಾಟಾ ಸಮೂಹದ ಇತರ ಕಂಪನಿಗಳಾದ ಟಾಟಾ ಸ್ಟೀಲ್ ಮತ್ತು ವಿಸ್ತಾರಾದಲ್ಲಿ ಕೆಲಸ ಮಾಡಿದ ಹಿರಿಯ ಮತ್ತು ಮಧ್ಯಮ ಮಟ್ಟದ ಕಾರ್ಯನಿರ್ವಾಹಕರನ್ನು ಕರೆ ತಂದಿದ್ದಾರೆ.

ಇದನ್ನೂ ಓದಿ: ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!

ಬುಧವಾರದಂದು ಉದ್ಯೋಗಿಗಳಿಗೆ ಕಳುಹಿಸಿದ ಪತ್ರದಲ್ಲಿ, ಏರ್ ಇಂಡಿಯಾದ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಖಾಯಂ ಉದ್ಯೋಗಿಗಳು 55 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ಅವರು 20 ವರ್ಷಗಳ ಕಾಲ ಕ್ಯಾರಿಯರ್‌ನಲ್ಲಿ ಕೆಲಸ ಮಾಡಿದ್ದರೆ ಸ್ವಯಂ ನಿವೃತ್ತಿ ಪಡೆಯಬಹುದು ಎಂದು ತಿಳಿಸಿದೆ.

'ಜೂನ್ 1, 2022 ರಿಂದ ಜುಲೈ 31, 2022 ರವರೆಗೆ ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ ಒಂದು-ಬಾರಿಯ ಪ್ರಯೋಜನವಾಗಿ ಸಹ ಒಂದು ಎಕ್ಸ್-ಗ್ರೇಷಿಯಾ ಮೊತ್ತವನ್ನು ಒದಗಿಸಲಾಗುತ್ತದೆ" ಎಂದು ಅದು ಹೇಳಿದೆ.ಅಲ್ಲದೆ, ಜೂನ್ 1 ಮತ್ತು ಜೂನ್ 30 ರ ನಡುವೆ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸುವ ಉದ್ಯೋಗಿಗಳು ಸಹ ಹೆಚ್ಚುವರಿ ಪ್ರೋತ್ಸಾಹಧನವನ್ನು ಮತ್ತು ಹೆಚ್ಚುವರಿ ಮೊತ್ತವನ್ನು ಪಡೆಯುತ್ತಾರೆ.

ಇದನ್ನೂ ಓದಿ: 'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ' 

"ಮೇಲಿನ ಪ್ರಯೋಜನಗಳಿಗಾಗಿ ನಿಮ್ಮ ಅರ್ಜಿಯ ಸ್ವೀಕಾರ ಮತ್ತು ಬಿಡುಗಡೆಯ ದಿನಾಂಕವು ಮ್ಯಾನೆಜ್ಮೆಂಟ್ ನ ವಿವೇಚನೆಗೆ ಒಳಪಟ್ಟಿರುತ್ತದೆ" ಎಂದು ಅದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News